ಇರಾನ್‌ನ ಮಿತ್ರರು ಯಾರು? ರಷ್ಯಾ-ಚೀನಾ ನಿಲುವೇನು?

Date:

ಇಸ್ಲಾಮಿಕ್ ಗಣರಾಜ್ಯ ಇರಾನ್‌ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಮುಂದುವರೆಸಿವೆ. ಇರಾನ್‌ನ ಪರಮಾಣ ಕೇಂದ್ರಗಳನ್ನು ನಾಶ ಮಾಡುವುದು, ಇರಾನ್‌ನ ಪರಮಾಣ ಶಕ್ತಿಯನ್ನು ತಡೆಯುವುದು, ಅಧಿಕಾರ ಬದಲಾವಣೆಯೊಂದಿಗೆ ಇರಾನ್‌ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಅಮೆರಿಕ ಮತ್ತು ಅದರ ಬಾಲಂಗೋಚಿ ಇಸ್ರೇಲ್, ವಿಧ್ವಂಸಕ ದಾಳಿಯನ್ನು ಆರಂಭಿಸಿವೆ. ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ ಅವರನ್ನು ಹತ್ಯೆಗೈದಿವೆ.

ತನ್ನ ನಾಯಕನನ್ನು ಕೊಂದ ಹಂತಕರನ್ನು ಶಿಕ್ಷಿಸುವುದಾಗಿ, ಆಕ್ರಮಣಕಾರಿ ದಾಳಿ ನಡೆಸುವುದಾಗಿ ಇರಾನ್‌ ಪಡೆ ‘ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್’ ಪ್ರತಿಜ್ಞೆ ಮಾಡಿದೆ. ಅಮೆರಿಕದ ಸೇನಾ ನೆಲೆಗಳಿವೆ ಸೌದಿ, ಯುಎಇ, ಅಬುಧಾಬಿ, ಕತಾರ್ ಹಾಗೂ ಬಹ್ರೇನ್ ಮೇಲೆ ಪ್ರತಿದಾಳಿಯನ್ನು ನಡೆಸುತ್ತಿದೆ.

ಸದ್ಯ, ಅಮೆರಿಕ ಮತ್ತು ಇಸ್ರೇಲ್‌ಅನ್ನು ಇರಾನ್‌ ಏಕಾಂಗಿಯಾಗಿ ಎದುರಿಸುತ್ತಿದೆ. ಆದರೆ, ಇರಾನ್‌ ಜಾಗತಿಕವಾಗಿ ಏಕಾಂಗಿಯಾಗಿ ಉಳಿದಿಲ್ಲ. ತನ್ನನ್ನು ರಕ್ಷಿಸಿಕೊಳ್ಳುವ ತಂತ್ರದ ಭಾಗವಾಗಿ ಇರಾನ್ ದೀರ್ಘಕಾಲದಿಂದಲೂ ಮಧ್ಯಪ್ರಾಚ್ಯದಾದ್ಯಂತ ಮಿಲಿಟರಿ ಪರವಾಗಿರುವ ಅರೆಸೇನೆಗಳೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡಿದೆ. ತನ್ನದೇ ಆದ ‘ಪ್ರತಿರೋಧದ ಅಕ್ಷ’ (Axis of Resistance) ಕಟ್ಟಿಕೊಂಡಿದೆ. ಈ ಅಕ್ಷದಲ್ಲಿ, ಲೆಬನಾನ್‌ನ ಹೆಜ್ಬೊಲ್ಲಾ, ಯೆಮೆನ್‌ನ ಹೌತಿ ಹಾಗೂ ಇರಾಕ್‌ನ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್ (PMF) ಸೇರಿದಂತೆ ಕೆಲವು ಮಿಲಿಟರಿಗಳಿವೆ. ಈ ಅಕ್ಷದ ಹೊರತಾಗಿಯೂ, ರಷ್ಯಾದೊಂದಿಗೆ ಇರಾನ್‌ ಕಾರ್ಯತಂತ್ರದ ಸಂಬಂಧ ಉಳಿಸಿಕೊಂಡಿದೆ ಮತ್ತು ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿದೆ. ಪಾಕಿಸ್ತಾನದೊಂದಿಗೆ ಸ್ನೇಹ ಬೆಳೆಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇರಾನ್‌ನ ಪ್ರತಿರೋಧದ ಅಕ್ಷದಲ್ಲಿರುವ ಈ ಗುಂಪುಗಳು ಪ್ರಾದೇಶಿಕ ರಕ್ಷಣಾ ಕವಚವಾಗಿ ಮತ್ತು ನೇರ ಸಂಘರ್ಷಕ್ಕೆ ಇಳಿಯದೆ ಇರಾನ್ ತನ್ನ ಶಕ್ತಿಯನ್ನು ಪ್ರದರ್ಶಿಸುವ ಸಾಧನಗಳಾಗಿ ಕಾರ್ಯನಿರ್ವಹಿಸಿವೆ. ಆದರೆ, ಕಳೆದ ಎರಡು ವರ್ಷಗಳಲ್ಲಿ ಇಸ್ರೇಲ್ ಈ ಜಾಲವು ಗಮನಾರ್ಹ ಪೆಟ್ಟು ತಿಂದಿದೆ.

ಇರಾನ್‌ನ ಅತ್ಯಂತ ಶಕ್ತಿಶಾಲಿ ಮಿತ್ರನಾಗಿದ್ದದ್ದು ಹೆಜ್ಬುಲ್ಲಾ. ಅದರೆ, ಕಳೆದ ಎರಡು ವರ್ಷಗಳಿಂದ ಇಸ್ರೇಲ್‌ ನಡೆಸಿದ ಸತತ ದಾಳಿಗಳಿಂದಾಗಿ ಲೆಬನಾನ್‌ನಾದ್ಯಂತ ಹೆಜ್ಬುಲ್ಲಾ ಹೊಂದಿದ್ದ ಶಸ್ತ್ರಾಸ್ತ್ರ ಸಂಗ್ರಹಗಳು ನಾಶಗೊಂಡಿವೆ. ಹೆಜ್ಬುಲ್ಲಾದ ಪ್ರಭಾವಿ ನಾಯಕ ಹಸನ್ ನಸ್ರಲ್ಲಾ ಹತ್ಯೆಯೊಂದಿಗೆ, ಅದು ತಟಸ್ಥಗೊಂಡಿದೆ. ಸಿರಿಯಾದಲ್ಲಿ ಅಸಾದ್ ಆಡಳಿತದ ಪತನದ ನಂತರ ಇರಾನ್ ಬೆಂಬಲಿತ ಮಿಲಿಟರಿ ಪಡೆಗಳನ್ನು ಹೊರಹಾಕಲಾಗಿದ್ದು, ಆ ಪ್ರದೇಶದಲ್ಲಿ ಇರಾನ್ ತನ್ನ ಪ್ರಮುಖ ನೆಲೆಯನ್ನು ಕಳೆದುಕೊಂಡಿದೆ.

ಆದಾಗ್ಯೂ, ಇರಾನ್ ಇಂದಿಗೂ ಇರಾಕ್ ಮತ್ತು ಯೆಮನ್‌ನಲ್ಲಿ ಬಲವಾದ ಪ್ರಭಾವವನ್ನು ಹೊಂದಿದೆ. ಅಂದಾಜು 2 ಲಕ್ಷ ಮಂದಿಯ ಪಡೆಯನ್ನು ಹೊಂದಿರುವ ಇರಾಕ್‌ನ ಪಿಎಂಎಫ್‌ ಇಂದಿಗೂ ಪ್ರಬಲವಾಗಿದೆ. ಯೆಮನ್‌ನಲ್ಲಿ ಹೌತಿಗಳು ಕೂಡ ಅಷ್ಟೇ ಸಂಖ್ಯೆಯ ಪಡೆಯನ್ನು ಹೊಂದಿದ್ದಾರೆ.

ಈಗ, ಖಮೇನಿ ಹತ್ಯೆಯೊಂದಿಗೆ, ಇರಾನ್‌ನ ಅಸ್ತಿತ್ವಕ್ಕೆ ಬೆದರಿಕೆ ಎದುರಾಗಿದೆ. ಈ ಗುಂಪುಗಳು ಸಕ್ರಿಯವಾಗಿ ಇರಾನ್‌ ಜೊತೆ ನಿಂತು, ಯುದ್ಧದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ, ಈ ಗುಂಪುಗಳು ಯುದ್ಧಕ್ಕಿಳಿದರೆ, ಯುದ್ಧವೂ ಇಡೀ ಮಧ್ಯಪ್ರಾಚ್ಯವನ್ನು ಆವರಿಸಿಕೊಳ್ಳುತ್ತದೆ. ಒಂದು ವೇಳೆ ಹಾಗಾಗಲ್ಲಿ, ಇರಾನ್‌ನ ಪಿಎಂಎಫ್‌, ತನ್ನದೇ ರಾಷ್ಟ್ರದೊಳಗಿರುವ 2,500 ಅಮೆರಿಕನ್ ಸೈನಿಕರ ಮೇಲೆ ದಾಳಿ ನಡೆಸಬಹುದು.

ಅಂತೆಯೇ, ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಏಕೈಕ ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನದೊಂದಿಗೂ ಇರಾನ್ ಉತ್ತಮ ಸಂಬಂಧ ಹೊಂದಿದೆ. ಆದರೆ, ಪಾಕಿಸ್ತಾನವು ಅಮೆರಿಕದೊಂದಿಗೂ ಸಖ್ಯ ಹೊಂದಿರುವುದರಿಂದ ಮತ್ತು ಅಫ್ಘಾನಿಸ್ತಾನದ ವಿರುದ್ಧ ಸ್ವತಃ ಪಾಕಿಸ್ತಾನವೇ ಯುದ್ಧ ಘೋಷಿಸಿರುವುದರಿಂದ, ಈ ರಾಷ್ಟ್ರವು ಇರಾನ್‌ ಜೊತೆಗೆ ನಿಲ್ಲುವ ಸಾಧ್ಯತೆಗಳಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಇರಾನ್ ತನ್ನ ಹಳೆಯ ಪ್ರತಿಸ್ಪರ್ಧಿಗಳಾದ ಸೌದಿ ಅರೇಬಿಯಾ ಮತ್ತು ಈಜಿಪ್ಟ್ ಜೊತೆಗೂ ಸಂಬಂಧ ಸುಧಾರಿಸಲು ಪ್ರಯತ್ನಿಸಿದೆ. ಇದರಿಂದಾಗಿ ಇರಾನ್‌ಗೆ ವ್ಯಾಪಕ ಪ್ರಾದೇಶಿಕ ಬೆಂಬಲ ಸಿಕ್ಕಿದೆ ಎಂದು ಭಾವಿಸಲಾಗಿದೆ. ಆದರೆ, ಸೌದಿ ಅರೇಬಿಯಾ, ಈಜಿಪ್ಟ್ ಹಾಗೂ ಟರ್ಕಿ ದೇಶಗಳು ಅಮೆರಿಕದೊಂದಿಗೆ ಬಲವಾದ ಮೈತ್ರಿ ಹೊಂದಿರುವುದರಿಂದ, ಅವು ಇರಾನ್‌ಗೆ ನೇರ ಮಿಲಿಟರಿ ನೆರವು ನೀಡುವ ಸಾಧ್ಯತೆ ಕಡಿಮೆ.

ಈ ಲೇಖನ ಓದಿದ್ದೀರಾ?: ಜೋರ್ಡನ್, ಬಹ್ರೇನ್, ಕತಾರ್, ರಿಯಾದ್, ಯುಎಇ ಮೇಲೇಕೆ ದಾಳಿ ನಡೆಸಿದೆ ಇರಾನ್!

ಈ ಸಮಯದಲ್ಲಿ, ಇರಾನ್‌ಗೆ ಪ್ರಮುಖ ಜಾಗತಿಕ ಮಿತ್ರರಾಗಿ ಉಳಿದಿರುವುದು ರಷ್ಯಾ ಮತ್ತು ಚೀನಾ ಮಾತ್ರ. ಈ ಎರಡೂ ರಾಷ್ಟ್ರಗಳು ಕಳೆದ ವರ್ಷ ಇರಾನ್‌ ಮೇಲೆ ಇಸ್ರೇಲ್‌ ದಾಳಿ ನಡೆಸಿದಾ, ಆ ದಾಳಿಯನ್ನು ಬಲವಾಗಿ ಖಂಡಿಸಿದ್ದವು. ಜೊತೆಗೆ, ಈ ಹಿಂದೆ ಇರಾನ್ ವಿರುದ್ಧ ವಿಶ್ವಸಂಸ್ಥೆಯಲ್ಲಿ ಬರಲಿದ್ದ ಕಠಿಣ ನಿರ್ಣಯಗಳನ್ನು ಪ್ರಬಲವಾಗಿ ವಿರೋಧಿಸಿ, ಈ ದೇಶವನ್ನು ರಕ್ಷಿಸಿದ್ದವು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ರಷ್ಯಾ ಅಥವಾ ಚೀನಾ ಇರಾನ್‌ಗೆ ನೇರ ಮಿಲಿಟರಿ ಬೆಂಬಲ ನೀಡುವ ಮೂಲಕ ಅಮೆರಿಕ-ಇಸ್ರೇಲ್ ಜೊತೆ ನೇರ ಸಂಘರ್ಷಕ್ಕೆ ಇಳಿಯುವ ಕುರಿತು ಯಾವುದೇ ಖಾತ್ರಿಯಿಲ್ಲ.

ಆದಾಗ್ಯೂ, ಈಗ ಖಮೇನಿ ಹತ್ಯೆಯಿಂದಾಗಿ, ಅಮೆರಿಕವು ತನ್ನ ನಿಷ್ಠರನ್ನು ಇರಾನ್‌ ಆಡಳಿತದಲ್ಲಿ ಪ್ರತಿಷ್ಠಾಪಿಸಲು ಮುಂದಾದರೆ, ರಷ್ಯಾ ಮತ್ತು ಚೀನಾ ತಮ್ಮ ಸ್ಪಷ್ಟ ನಿಲುವಿನೊಂದಿಗೆ ಸಂಘರ್ಷಕ್ಕಿಳಿಯುವ ಸಾಧ್ಯತೆಗಳೂ ಇವೆ. ಏಕೆಂದರೆ, ಇರಾನ್‌ನ ಸ್ಥಿರತೆಯಲ್ಲಿ ಇವೆರಡೂ ದೇಶಗಳ ಭೌಗೋಳಿಕ ರಾಜಕೀಯ ಮತ್ತು ಭದ್ರತಾ ಹಿತಾಸಕ್ತಿಗಳಿವೆ.

ರಷ್ಯಾ ಪಡೆಯು ಉಕ್ರೇನ್‌ ಜೊತೆಗಿನ ಯುದ್ಧದಲ್ಲಿ ತೊಡಗಿರುವುದರಿಂದ, ಇವೆರಡೂ ದೇಶಗಳು ಇರಾನ್‌ ಪರವಾಗಿ ನೇರವಾಗಿ ಯುದ್ಧಕ್ಕೆ ಇಳಿಯದಿದ್ದರೂ, ಪರೋಕ್ಷವಾಗಿ ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳ ನೆರವನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...