ವ್ಯಕ್ತಿಚಿತ್ರ | ಭಾರತೀಯ ಮೂಲದ ಯುವಕ ನ್ಯೂಯಾರ್ಕ್‌ ಮೇಯರ್; ಯಾರು ಈ ಮಮ್ದಾನಿ?

Date:

ಇಸ್ರೇಲ್ ನರಮೇಧವನ್ನು ತೀವ್ರವಾಗಿ ಖಂಡಿಸಿರುವ ಝೋಹ್ರಾನ್ ಮಮ್ದಾನಿ, ಕೋಮುವಾದವನ್ನು  ವಿರೋಧಿಸುವವರು. 'ಪ್ರಧಾನಿ ನರೇಂದ್ರ ಮೋದಿ 2002ರಲ್ಲಿ ಗುಜರಾತ್ ಗಲಭೆ ಮಾಡಿದ್ದು ದೊಡ್ಡ ಅಪರಾಧ' ಎನ್ನುತ್ತಾರೆ ಮಮ್ದಾನಿ. ಜತೆಗೆ ಪರಿಸರ ಸಂರಕ್ಷಣೆಗಾಗಿ ಧ್ವನಿಯೆತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಒಬ್ಬ ನರಹಂತಕ. ಗುಜರಾತ್‌ನಲ್ಲಿ ಮುಸ್ಲಿಮರನ್ನು ಕೊಲ್ಲಲು ಸಹಾಯ ಮಾಡಿದವರು ಎಂದು ಈ ಹಿಂದೆ ಧೈರ್ಯದಿಂದ ಹೇಳಿದ್ದ ಭಾರತೀಯ ಮೂಲದ ಯುವಕ ಝೋಹ್ರಾನ್ ಮಮ್ದಾನಿ ಅವರು ವಿಶ್ವದ ಶಕ್ತಿಶಾಲಿ ನಗರಗಳಲ್ಲಿ ಒಂದಾದ ನ್ಯೂಯಾರ್ಕ್‌ನ ಮೇಯರ್ ಆಗಿದ್ದಾರೆ. ನ್ಯೂಯಾರ್ಕ್‌ನ ಮೊದಲ ಮುಸ್ಲಿಂ, ಮಿಲೇನಿಯಲ್ ಜನರೇಷನ್‌ನ ಮೇಯರ್ ಮಮ್ದಾನಿ. ಹಾಗೆಯೇ, ನ್ಯೂಯಾರ್ಕ್ ಮೇಯರ್ ಆದ ದಕ್ಷಿಣ ಏಷ್ಯಾಕ್ಕೆ ಸೇರಿದ ಮೊದಲಿಗ ಎನಿಸಿಕೊಂಡಿದ್ದಾರೆ.

ನ್ಯೂಯಾರ್ಕ್ ಮಾತ್ರವಲ್ಲ ಜಗತ್ತಿಗೆ ಸ್ಪೂರ್ತಿಯಾದ 33 ವರ್ಷದ ಈ ಎಡಚಿಂತನೆಯ ಮಮ್ದಾನಿ ಭಾರತೀಯ ಮೂಲದ ಮುಸ್ಲಿಂ ಯುವಕ. ದಿಟ್ಟತನ, ಜನಪರ ಕಾರ್ಯಕ್ರಮಗಳು ಹಾಗೂ ಶೋಷಿತರ ಪರ ಸ್ಪಷ್ಟ ನಿಲುವುಗಳ ಮೂಲಕ ಜಗತ್ತಿನ ಗಮನ ಸೆಳೆದಿರುವವರು ಮಮ್ದಾನಿ.

ಇದನ್ನು ಓದಿದ್ದೀರಾ? ಅಮೆರಿಕಾ | ನ್ಯೂಯಾರ್ಕ್‌ ಮೇಯರ್ ಚುನಾವಣೆ; ಝೋಹ್ರಾನ್ ಮಮ್ದಾನಿಗೆ ಐತಿಹಾಸಿಕ ಗೆಲುವು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭಾರತೀಯ ಮೂಲದ ಝೋಹ್ರಾನ್, ಖ್ಯಾತ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಶಿಕ್ಷಣತಜ್ಞ ಮಹಮೂದ್ ಮಮ್ದಾನಿಯವರ ಪುತ್ರ. ಆದರೆ, ಝೋಹ್ರಾನ್‌ರ ಗುರುತು ಕೇವಲ ತಂದೆ-ತಾಯಿಯಿಂದ ಬಂದಿಲ್ಲ. ಅಮೆರಿಕಾದ ಕ್ವೀನ್ಸ್‌ನ ಬೀದಿಗಳಲ್ಲಿ, ಕಾರ್ಮಿಕ ವರ್ಗದ ಜನರೊಂದಿಗೆ ಒಡನಾಡಿ, ಅವರೊಟ್ಟಿಗೆ ರೋಟಿ, ಕಪಡಾ, ಮಕಾನ್ ಘೋಷಣೆ ಕೂಗಿದವರು ಇವರು. ಅಂದರೆ ಮನುಷ್ಯರು ಬದುಕಲು ಮೂಲಭೂತವಾಗಿ ‘ಊಟ, ಬಟ್ಟೆ, ಮನೆ’ ಬೇಕು ಎಂಬ ತತ್ವವನ್ನು ಸಾರಿದವರು. ಅಷ್ಟು ಮಾತ್ರವಲ್ಲ, ಗಾಝಾದ ಸಂಘರ್ಷದ ವಿರುದ್ಧ ಧ್ವನಿಯೆತ್ತಿ, ಪ್ಯಾಲೆಸ್ತೀನಿಯರ ಬೆಂಬಲಕ್ಕಾಗಿ ಧೈರ್ಯದಿಂದ ನಿಂತವರು. ಈ ಧೋರಣೆ ಝೋಹ್ರಾನ್‌ರನ್ನು ಯುವ ಜನರ ಹೃದಯದಲ್ಲಿ ವಿಶೇಷವಾಗಿಸಿತು.

ಮಮ್ದಾನಿ 1991ರಲ್ಲಿ ಉಗಾಂಡದಲ್ಲಿ ಹುಟ್ಟಿದ್ದು, ತನ್ನ 7ನೇ ವಯಸ್ಸಿಗೆ ನ್ಯೂಯಾರ್ಕ್‌ಗೆ ವಲಸೆ ಬಂದಿದ್ದಾರೆ. ಬಳಿಕ ಅಲ್ಲಿಯೇ ಓದಿ, ಉದ್ಯೋಗ ಮಾಡಿ ಅಮೆರಿಕಾದ ಪೌರರಾಗಿದ್ದಾರೆ. ಆಫ್ರಿಕಾ ಸ್ಟಡೀಸ್ ಬಗ್ಗೆ ಉನ್ನತ ಶಿಕ್ಷಣ ಪಡೆದ ಅವರು ಹೌಸಿಂಗ್ ಕೌನ್ಸೆಲರ್ ಆಗಿ ಮತ್ತು ಹಿಪ್ ಹಾಪ್ ಗಾಯಕರಾಗಿ ಕೆಲಸ ಮಾಡಿದ್ದಾರೆ. ಅದಾದ ಬಳಿಕ ರಾಜಕೀಯಕ್ಕೆ ಧುಮುಕಿ ನ್ಯೂಯಾರ್ಕ್ ನಗರದ ಜನರ ಕಷ್ಟಗಳ ಅರಿತ ಅವರು ಡೆಮಾಕ್ರಟಿಕ್ ಪಕ್ಷದ ಪಕ್ಷಗಳ ಸದಸ್ಯರಾದರು. ಎಡಪಂಥೀಯ ನಿಲುವುಳ್ಳ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಆಫ್ ಅಮೆರಿಕಾ ಗುಂಪಿಗೆ ಸೇರಿದ್ದಾರೆ.

2020ರಲ್ಲಿ ನ್ಯೂಯಾರ್ಕ್ ಸ್ಟೇಟ್ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ ಮಮ್ದಾನಿ 4 ಬಾರಿ ಸದಸ್ಯರಾಗಿದ್ದ ಅರವೆಲ್ಲಾ ಸಿಮೊಟಸ್‌ರನ್ನು ಮಣಿಸಿ ಆಯ್ಕೆಯಾದರು. ಅಲ್ಲದೇ ತಮ್ಮ ಜನಪ್ರಿಯ ಆಡಳಿತ, ದಿಟ್ಟ ಎಡಪಂಥೀಯ ನಿಲುವು ಮತ್ತು ಹೋರಾಟದ ಮೂಲಕ 2024ರಲ್ಲಿ ಮರು ಆಯ್ಕೆಯಾದರು. ಆಗಲೇ ನ್ಯೂಯಾರ್ಕ್ ಮೇಯರ್ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ಅವರು, ಮಾಜಿ ನ್ಯೂಯಾರ್ಕ್ ರಾಜ್ಯ ಗವರ್ನರ್, ಡೆಮಾಕ್ರಟಿಕ್ ಪಕ್ಷದ ಮಧ್ಯಮಾರ್ಗಿ ನಾಯಕ ಆಂಡ್ರ್ಯೂ ಕ್ಯೂಮೊ ಎಂಬ ಪ್ರಬಲ ನಾಯಕನನ್ನು ಮಣಿಸಿ ಆಯ್ಕೆಯಾಗಿದ್ದಾರೆ.

ಹೊಸ ಹೋರಾಟದ ಮಾದರಿ!

ಮಮ್ದಾನಿಯವರ ಚುನಾವಣಾ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದು ಹೊಸ ಹೋರಾಟದ ಮಾದರಿ! 21ನೇ ಶತಮಾನ. ಹಾಗಾಗಿ 21ನೇ ಶತಮಾನದ ಹೋರಾಟದ, ಪ್ರತಿರೋಧದ ಮಾದರಿಯನ್ನು ಕಟ್ಟಿದವರು ಮಮ್ದಾನಿ. ‘ಊಟ, ಬಟ್ಟೆ, ಮನೆ’ ರೋಟಿ ಕಪಡಾ ಮಕಾನ್ ಘೋಷಣೆಯನ್ನು ಕೇವಲ ಘೋಷಣೆಯಾಗಿ ಬಿಡದೇ ಅದನ್ನು ಕಾರ್ಯರೂಪಕ್ಕೆ ತರುವುದು ಹೇಗೆ ಎಂಬದನ್ನು ಜನರಿಗೆ ಸರಳವಾಗಿ ಅರ್ಥವಾಗುವಂತೆ ಮನವರಿಕೆ ಮಾಡಿಕೊಟ್ಟರು.

ಇದನ್ನು ಓದಿದ್ದೀರಾ? ಭಾರತೀಯ ಮಮ್ದಾನಿಗೆ ‘100% ಕಮ್ಯುನಿಸ್ಟ್ ಹುಚ್ಚ’ ಎಂದು ಟೀಕಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್‌ನಲ್ಲಿನ ಬಡವರು, ಮಧ್ಯಮವರ್ಗದವರ ಬಹಳ ದೊಡ್ಡ ಸಮಸ್ಯೆಯೆಂದರೆ ಸ್ವಂತ ಮನೆ ಇಲ್ಲದಿರುವುದು. ಬಾಡಿಗೆ ಮನೆಯಲ್ಲಿ ಬಾಡಿಗೆ ಗಗನಕ್ಕೇರಿದೆ. ಈ ಸಮಸ್ಯೆಗೆ ಮಮ್ದಾನಿ ಮುಂದಿಟ್ಟ ಪರಿಹಾರ ಎಲ್ಲರಿಗೂ ಮನೆ ಕೊಡುತ್ತೇನೆ ಎಂದಲ್ಲ. ಬದಲಿಗೆ Rent Freeze ಹೋರಾಟ ಕಟ್ಟಿದರು. ಅಂದರೆ ಇಂತಿಷ್ಟೇ ಬಾಡಿಗೆ ಎಂದು ಸ್ಥಳೀಯ ಆಡಳಿತ ನಿರ್ಧರಿಸಬೇಕು. ಅದು ಬಡವರ ಕೈಗೆಟುಕುವಂತಿರಬೇಕು. ಅದನ್ನು ಮೀರಿ ಮನೆ ಮಾಲೀಕರು ಬಾಡಿಗೆ ಹೆಚ್ಚು ಮಾಡುವಂತಿಲ್ಲ ಎಂಬ ನಿಯಮ ತರಬೇಕು. ಅಲ್ಲದೇ ಕಡಿಮೆ ಖರ್ಚಿನಲ್ಲಿ ಸುಸ್ಥಿರ ಮನೆಗಳನ್ನು ಕಟ್ಟಿ ಅರ್ಹರಿಗೆ ಮಾರುವ ಯೋಜನೆ ಮುಂದಿಟ್ಟರು. ತಾನು ಮೇಯರ್ ಆದರೆ ಇದನ್ನು ಪಾಲಿಸುತ್ತೇನೆ ಎಂದು ಪ್ರಚಾರ ಮಾಡಿದರು. ಇದು ಕಾರ್ಮಿಕರ, ಬಡವರ ಮತ್ತು ಮಧ್ಯಮ ವರ್ಗದವರಿಗೆ ಕಾರ್ಯಸಾಧು ಎನಿಸಿದ್ದು ಇದೀಗ ಮಮ್ದಾನಿ ಮೇಯರ್ ಆಗಿದ್ದಾರೆ.

Zohran 1

ಎರಡನೇಯದ್ದಾಗಿ, ಬಡ ಪ್ರದೇಶಗಳು ಮತ್ತು ಕಡಿಮೆ ಆದಾಯದ ಪ್ರದೇಶಗಳಲ್ಲಿ ಸರ್ಕಾರಿ ಸಬ್ಸಿಡಿಯ ಕಿರಾಣಿ ಅಂಗಡಿಗಳನ್ನು ತೆರೆಯಬೇಕು ಎಂಬುದು. ಅಂದರೆ ಸರ್ಕಾರದ ಸಬ್ಸಿಡಿಯೊಂದಿಗೆ ಉತ್ತಮ ಗುಣಮಟ್ಟದ ಆಹಾರಗಳನ್ನು ಕಡಿಮೆ ಬೆಲೆಗೆ ಮಾರುವುದಾಗಿದೆ. ಅದರ ಜೊತೆಗೆ ನ್ಯೂಯಾರ್ಕ್ ನಗರದಲ್ಲಿ ಉಚಿತ ಸಾರ್ವಜನಿಕ ಸಾರಿಗೆ ಪರ ಅವರು ಅಭಿಯಾನ ಮಾಡಿದ್ದಾರೆ. ಇವೆರಡು ಸಾಧ್ಯವಾದರೆ ಬಡವರು ಮತ್ತು ಕಾರ್ಮಿಕರು ನಿಟ್ಟುಸಿರು ಬಿಡಬಹುದು. ಊಟ ಮತ್ತು ಸಾರಿಗೆಗೆ ಖರ್ಚು ಮಾಡುತ್ತಿರುವ ಹಣ ಉಳಿದಲ್ಲಿ ಆರೋಗ್ಯ, ಶಿಕ್ಷಣದ ಜೊತೆಗೆ ಉತ್ತಮ ಬಟ್ಟೆ, ಮನೋರಂಜನೆ, ಗುಣಮಟ್ಟದ ಜೀವನಕ್ಕೆ ಬಳಸಬಹುದು ಎಂಬ ಕನಸು ಕಟ್ಟಿಕೊಟ್ಟರು. ಉಚಿತ ಸಾರಿಗೆಯಿಂದ ಪರಿಸರ ಸಂರಕ್ಷಣೆಗೆ ಸಾಧ್ಯ ಎಂದು ಸಾರಿದರು.

ಯುನಿವರ್ಸಲ್ ಚೈಲ್ಡ್‌ಕೇರ್ (Universal Childcare 2021-2025):

ಕ್ವೀನ್ಸ್‌ನ ರಾಜ್ಯ ಅಸೆಂಬ್ಲಿಯ ಸದಸ್ಯರಾಗಿ, ಝೋಹ್ರಾನ್ ಎಲ್ಲಾ ಕುಟುಂಬಗಳಿಗೆ ಕೈಗೆಟುಕುವ ಮಕ್ಕಳ ಆರೈಕೆಯನ್ನು ಒದಗಿಸುವ ಕಾರ್ಯಕ್ರಮಕ್ಕಾಗಿ ಹೋರಾಡಿದ್ದಾರೆ. ಇದು ಕೆಲಸ ಮಾಡುವ ಪೋಷಕರಿಗೆ, ವಿಶೇಷವಾಗಿ ಕಡಿಮೆ-ಆದಾಯದ ಕುಟುಂಬಗಳಿಗೆ, ಸಹಾಯಕವಾಗಿದೆ.

ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ (Workers’ Rights Advocacy 2015-2025):

ಝೋಹ್ರಾನ್ ಮಮ್ದಾನಿ ಕಾರ್ಮಿಕ ವರ್ಗದ ಹಕ್ಕುಗಳಿಗಾಗಿ, ವಿಶೇಷವಾಗಿ ಕನಿಷ್ಠ ವೇತನ ಹೆಚ್ಚಳ ಮತ್ತು ಕೆಲಸದ ಸ್ಥಳದಲ್ಲಿ ರಕ್ಷಣೆಗಾಗಿ, ಸತತವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಕ್ವೀನ್ಸ್‌ನ ಕಾರ್ಮಿಕ ಸಮುದಾಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ.

ಇದು ಅಲ್ಲಿನ ಜನರಿಗಾದರೆ ಉಳಿದ ಯುವಜನರು ಮತ್ತು ಲಿಬರಲ್‌ಗಳ ಬೆಂಬಲವೂ ಮಮ್ದಾನಿಗೆ ಹರಿದು ಬಂದಿದೆ. ಅವರು ಗಾಝಾ ಮತ್ತು ಪ್ಯಾಲೇಸ್ತೀನ್ ಪರ ದಿಟ್ಟ ನಿಲುವು ತೆಗೆದುಕೊಂಡಿದ್ದಾರೆ. ಇಸ್ರೇಲ್ ನರಮೇಧವನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೋಮುವಾದವನ್ನು ವಿರೋಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 2002ರಲ್ಲಿ ಗುಜರಾತ್ ಗಲಭೆ ಮಾಡಿದ್ದು ದೊಡ್ಡ ಅಪರಾಧ ಎನ್ನುತ್ತಾರೆ. ಪರಿಸರ ಸಂರಕ್ಷಣೆಗಾಗಿ ಧ್ವನಿಯೆತ್ತಿದ್ದಾರೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಮ್ದಾನಿಯನ್ನು ‘ಶೇ.100ರಷ್ಟು ಕಮ್ಯೂನಿಸ್ಟ್‌ ಹುಚ್ಚ’ ಎಂದು ಟೀಕಿಸಿದ್ದರು. ಅದುವೇ ಮಮ್ದಾನಿಗೆ ವರದಾನವಾಯಿತು. “ಹೌದು ನಾನು ಕಮ್ಯೂನಿಸ್ಟ್. ಅಂದರೆ ಜನರ ಪರವೇ ಹೊರತು ನಿಮ್ಮಂತೆ ಕಾರ್ಪೋರೇಟ್‌ಗಳ ಪರವಲ್ಲ” ಎಂದು ಮಮ್ದಾನಿ ವಾದಿಸಿದರು. ಬಹುತೇಕ ರಾಜಕಾರಣಿಗಳು ಇಸ್ರೇಲ್ ಪರ ಮಾತಾಡಿದರೆ ಮಮ್ದಾನಿ ಅದನ್ನು ಖಂಡಿಸಿ ನ್ಯೂಯಾರ್ಕ್ ಮೊದಲು ಎಂದರು. “ನೇತನ್ಯಾಹು ನ್ಯೂಯಾರ್ಕ್‌ಗೆ ಬಂದರೆ ಬಂಧನ ಮಾಡಿಸುತ್ತೇನೆ” ಎಂದು ಘೋಷಿಸಿದರು. ಈ ಧೋರಣೆ ಯುವ ಮತದಾರರನ್ನು ಸೆಳೆದಿದೆ.

ಕಮ್ಯೂನಿಸ್ಟ್ ತತ್ವದಲ್ಲಿ ಬದ್ಧತೆ ಹೊಂದಿರುವ ಮಮ್ದಾನಿ

2020ರಲ್ಲಿ ಮಮ್ದಾನಿ ಟ್ವೀಟ್‌ ಒಂದನ್ನು ಮಾಡಿದ್ದರು. ನ್ಯೂಯಾರ್ಕ್‌ಗೆ ಎಂತಹ ಮೇಯರ್ ಬೇಕು ಎಂದರೆ ಇಂತಹ ಮೇಯರ್ ಬೇಕು ಎಂದು ಕೇರಳದ ತಿರುವಂತನಪುರಂನಲ್ಲಿ 21 ವರ್ಷದ ಮೇಯರ್ ಆಗಿದ್ದ ಆರ್ಯ ರಾಜೇಂದ್ರನ್‌ರವರು ಫೋಟೊ ಹಾಕಿದ್ದರು. ಯುವಜನರು ದೇಶ ಆಳಬೇಕು ಎಂಬುದು ಅವರ ಸಾರ. ಕಮ್ಯೂನಿಸ್ಟ್ ತತ್ವದಲ್ಲಿ ಬದ್ಧತೆ ಅವರಲ್ಲಿ ಮೇಳೈಸಿತ್ತು.

ಅಮೆರಿಕಾದ ಎಡಪಂಥೀಯ ಹೋರಾಟಗಾರರಾದ ಬರ್ನಿ ಸ್ಯಾಂಡರ್ಸ್, ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್, ಬ್ರಾಡ್ ಲ್ಯಾಂಡರ್‌ರಿಂದ ಹಿಡಿದು ಹಿಂದಿನ ಅಧ್ಯಕ್ಷರುಗಳಾದ ಬರಾಮ್ ಒಬಾನ, ಬಿಲ್ ಕ್ಲಿಂಟನ್ ವರೆಗೆ ದೊಡ್ಡ ದೊಡ್ಡ ನಾಯಕರು ಮಮ್ದಾನಿಯವರನ್ನು ತಮ್ಮ ಚುನಾವಣಾ ಪ್ರಚಾರದಲ್ಲಿ ಬೆಂಬಲಿಸಿದ್ದಾರೆ ಮತ್ತು ಅವರ ಗೆಲುವನ್ನು ಶ್ಲಾಘಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...