‘ನೊಬೆಲ್ ಶಾಂತಿ’ ಪ್ರಶಸ್ತಿ ಯಾರಿಗೆ ಸಿಗಬೇಕು? ಟ್ರಂಪ್‌ಗೋ, ಡ್ರೋನ್‌ಗಳಿಗೋ, ಬಾಂಬರ್‌ಗಳಿಗೋ?

Date:

2ನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್‌ ಟ್ರಂಪ್, ತಮಗೆ ‘ನೊಬೆಲ್ ಶಾಂತಿ’ ಪ್ರಶಸ್ತಿ ಬೇಕೆಂದು ಹಪಾಹಿಪಿಸಿದ್ದರು. ಅದರೆ, ಅವರಿಗೆ ಪ್ರಶಸ್ತಿ ದೊರೆಯಲಿಲ್ಲ. ಪ್ರಶಸ್ತಿ ಕೈತಪ್ಪಿದ ಬೆನ್ನಲ್ಲೇ, ಅವರ ಕ್ರೌರ್ಯ ಬಹಿರಂಗವಾಯಿತು. ಅವರ ಕ್ರೂರ ಧೋರಣೆಗೆ ಮೊದಲು ತುತ್ತಾಗಿದ್ದು. ವೆನೆಜುವೆಲಾ ಅಧ್ಯಕ್ಷ ಮಡುರೊ. ಅಂತರಾಷ್ಟ್ರೀಯ ಕಾನೂನನ್ನು ಸಂಪೂರ್ಣವಾಗಿ ಕಡೆಗಣಿಸಿದ ಅಮೆರಿಕದ ಪಡೆಗಳು ಕರಾಕಾಸ್‌ನಲ್ಲಿರುವ (ವೆನೆಜುವೆಲಾ ರಾಜಧಾನಿ) ಅಧ್ಯಕ್ಷೀಯ ಅರಮನೆಯ ಮೇಲೆ ದಾಳಿ ಮಾಡಿ ಅಧ್ಯಕ್ಷರನ್ನು ಅಪಹರಿಸಿದವು. ಈಗ, ಇರಾನ್‌ನ ಸರ್ವೋಚ್ಚ ನಾಯಕ ಖಮೇನಿಯನ್ನು ಅಮೆರಿಕ ಬಲಿ ಪಡೆದಿದೆ. ಅಮೆರಿಕ ಖಮೇನಿ ಮನೆ ಮೇಲೆ ಬಾಂಬ್ ದಾಳಿ, ನಡೆಸಿ ಕೊಂದಿದೆ. ಇದೇ ಟ್ರಂಪ್ ಆಡಳಿತದ ಅಮೆರಿಕದ ವಾಸ್ತವ. ಇದು ಅಕ್ಷರಶಃ ಹೊಣೆಗಾರಿಕೆಯಿಲ್ಲದ ಉನ್ನತ ಮಟ್ಟದ ‘ದಾದಾಗಿರಿ’.

ಅಮೆರಿಕ-ಇಸ್ರೇಲ್ ಕ್ರೌರ್ಯದಿಂದಾಗಿ ಇಡೀ ಪಶ್ಚಿಮ ಏಷ್ಯಾ ಪ್ರದೇಶವು ದಶಕಗಳಲ್ಲೇ ಕಾಣದ ಅತ್ಯಂತ ಅಸ್ತವ್ಯಸ್ತತೆಗೆ ತಳ್ಳಲ್ಪಟ್ಟಿದೆ. ವಿಮಾನ ನಿಲ್ದಾಣಗಳಲ್ಲಿ ಭೀತಿಯ ವಾತಾವರಣವಿದೆ, ಬಂದರು ನಗರಗಳು ಆತಂಕದಲ್ಲಿವೆ. ಜೊತೆಗೆ, ಅಮೆರಿಕದ ಮಿಲಿಟರಿ ನೆಲೆಗಳನ್ನು ಹೊಂದಿರುವ ಸೌದಿ, ಯುಎಇ, ಅಬುಧಾಬಿ, ಕತಾರ್ ಹಾಗೂ ಬಹರೈನ್‌ಗಳು ಇರಾನ್‌ನ ಪ್ರತಿಕಾರಕ್ಕೆ ಬಲಿಯಾಗುವ ಭೀತಿಯಲ್ಲಿವೆ. ಹಡಗು ಸಂಚಾರ ಮಾರ್ಗಗಳು ಅಪಾಯದಲ್ಲಿವೆ, ತೈಲ ಮಾರುಕಟ್ಟೆಗಳು ಕಂಗೆಟ್ಟಿವೆ ಹಾಗೂ ಪ್ರತಿಯೊಂದು ರಾಷ್ಟ್ರವೂ ತನ್ನ ಜನರನ್ನು ಸ್ಥಳಾಂತರಿಸುವ ಯೋಜನೆಗಳನ್ನು ರೂಪಿಸುತ್ತಿವೆ. ಈ ರಾಷ್ಟ್ರಗಳಲ್ಲಿರುವ, ಭಾರತಕ್ಕೆ ಕೋಟ್ಯಂತರ ಡಾಲರ್ ಹಣವನ್ನು ಕಳಿಸುವ ಭಾರತೀಯರು ತಮಗೆ ಸಂಬಂಧವೇ ಇಲ್ಲದ ಯುದ್ಧದಲ್ಲಿ ಸಿಲುಕಿಕೊಂಡಿದ್ದಾರೆ.

ಪ್ರಸ್ತುತ ಸನ್ನಿವೇಶವು 2003ರ ಇರಾಕ್‌ನಂತೆ ಕಾಣುತ್ತಿದೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇರಾನ್‌ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು, ಅಲ್ಲಿರುವ ತೈಲ ನಿಕ್ಷೇಪಗಳ ಮೇಲೆ ಹಿಡಿತ ಸಾಧಿಸಬೇಕು, ಇರಾನ್‌ನ ಪರಮಾಣು ಶಕ್ತಿಯನ್ನು ನಾಶ ಮಾಡಬೇಕೆಂದು ಅಮೆರಿಕ ಹವಣಿಸುತ್ತಿತ್ತು. ಆದರೂ, ಪರಮಾಣು ಒಪ್ಪಂದವು ಎಂದಿಗೂ ತನ್ನ ಗುರಿಯಾಗಿರಲಿಲ್ಲ, ಬದಲಾಗಿ ಇಸ್ಲಾಮಿಕ್ ಗಣರಾಜ್ಯವನ್ನು (ಇರಾನ್ ಸರ್ಕಾರ) ಕಿತ್ತೊಗೆಯುವುದೇ ತನ್ನ ಗುರಿಯೆಂದು ಟ್ರಂಪ್ ಆಡಳಿತ ಹೇಳಿಕೊಳ್ಳುತ್ತಿದೆ. ಈ ದಾಳಿಗಳು ಇರಾನ್ ಅನ್ನು ಮಾತುಕತೆಗೆ ತರಲು ನಡೆಸಿದ್ದಲ್ಲ. ಬದಲಾಗಿ ಆಂತರಿಕ ಕುಸಿತ, ಆರ್ಥಿಕ ವಿನಾಶ, ರಾಜಕೀಯ ವಿಘಟನೆ ಹಾಗೂ ಜನತಾ ದಂಗೆಗೆ ಪೂರಕವಾದ ಪರಿಸ್ಥಿತಿಯನ್ನು ನಿರ್ಮಿಸುವುದಾಗಿ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಈ ಸನ್ನಿವೇಶವು ಈ ಹಿಂದೆ, 2003ರಲ್ಲಿ ಇರಾಕ್‌ನಲ್ಲಿ ಸಂಭವಿಸಿದ್ದ ಭೀಕರತೆಯಂತೆಯೇ ಕಾಣುತ್ತಿದೆ. ಹಾಗೆ ನೋಡಿದರೆ, ಭೀಕರತೆಯು ಇರಾಕ್‌ಗಿಂತಲೂ ಹೆಚ್ಚಾಗಿದೆ. ಆದರೆ, ಇರಾನ್‌ ಅಷ್ಟೇ ಪ್ರಬಲವಾಗಿ ಪ್ರತಿಕಾರ ತೀರಿಸಿಕೊಳ್ಳಲು ಸಜ್ಜಾಗಿದೆ.

ಸಾಕಷ್ಟು ಮಿಲಿಟರಿ ಒತ್ತಡ ಹೇರಿದರೆ ಅದು ಆಂತರಿಕ ದಂಗೆಯನ್ನು ಪ್ರಚೋದಿಸುತ್ತದೆ ಅಥವಾ ನಿರ್ಬಂಧಗಳು ಮತ್ತು ಪ್ರತ್ಯೇಕತೆಯಿಂದ ಸಾಧ್ಯವಾಗದ್ದನ್ನು ವಿರೋಧ ಪಕ್ಷಗಳ ಮೂಲಕ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅಮೆರಿಕ ಭಾವಿಸಿದಂತಿದೆ. ಆದ್ದರಿಂದಲೇ, ನೇರವಾಗಿ ಇರಾನ್‌ನ ಸರ್ವೋಚ್ಚ ನಾಯಕನನ್ನು ಹತ್ಯೆಗೈದಿದೆ. ಆದರೆ, ಇತಿಹಾಸವು ಬೇರೆಯನ್ನೇ ಹೇಳುತ್ತದೆ.

ಅಮೆರಿಕದ ಬಳಿ ಖಮೇನಿ ಹತ್ಯೆಯ ನಂತರದ ಬೆಳವಣಿಗೆಗಳ ಬಗ್ಗೆ ಯಾವುದೇ ಸ್ಪಷ್ಟ ಯೋಜನೆಯಿಲ್ಲ. ಸರಿಯಾದ ಯೋಜನೆ ಇಲ್ಲದ ದಾಳಿಯು ಅಮೆರಿಕದ ಕ್ರಮವನ್ನು ಅತ್ಯಂತ ಬೇಜವಾಬ್ದಾರಿಯುತವಾಗಿಸಿದೆ. ಅಮೆರಿಕಗೆ ಆಡಳಿತ ಬದಲಾವಣೆಯೇ ಮುಖ್ಯ ಗುರಿಯಾಗಿದ್ದರೂ ಅಧಿಕಾರ ಬದಲಾವಣೆ ಮತ್ತು ನಂತರದ ಆಯ್ಕೆಗಳೊಂದಿಗೆ ಇರಾನ್‌ ಹೇಗೆ ಬದಲಾಗಬಹುದು ಎಂಬದರ ಸ್ಪಷ್ಟತೆಯೂ ಇಲ್ಲ. ಇರಾನ್ ಅನ್ನು ಅಮೆರಿಕ ಆಕ್ರಮಿಸಿಕೊಳ್ಳುತ್ತದೆಯೇ? ಅದನ್ನು ವಿಭಜಿಸುತ್ತದೆಯೇ? ತನ್ನ ಕೈಗೊಂಬೆ ಸರ್ಕಾರವನ್ನು ಅಲ್ಲಿ ಕೂರಿಸುತ್ತದೆಯೇ? ಅಥವಾ ಯಾವುದೇ ದೇಶೀಯ ಮಾನ್ಯತೆ ಇಲ್ಲದ ದೇಶಭ್ರಷ್ಟ ವಿರೋಧಿ ಗುಂಪುಗಳನ್ನು ಬೆಂಬಲಿಸುತ್ತದೆಯೇ? ಇದಕ್ಕೆ ಅಮೆರಿಕ ಬಳಿ ಉತ್ತರವಿಲ್ಲ!

ಈಗಾಗಲೇ, ಅಸ್ಪಷ್ಟತೆಯೊಂದಿಗೆ ಅಫ್ಘಾನಿಸ್ತಾನ, ಇರಾಕ್ ಹಾಗೂ ಲಿಬಿಯಾದಲ್ಲಿ ಅಮೆರಿಕ ನಡೆಸಿದ ದಾಳಿ ಮತ್ತು ಅಧಿಕಾರ ಬದಲಾವಣೆಯು ವಿಫಲವಾಗಿದೆ. ಇರಾನ್‌ನಲ್ಲಿಯೂ ವಿಫಲವಾಗಬಹುದು. ಆದರೂ, ಅದೇ ಹಳೆಯ ತಂತ್ರವನ್ನು ಮತ್ತೆ ಬಳಸಲಾಗುತ್ತಿದೆ. ಇಲ್ಲಿ ನಿಜವಾದ ಉದ್ದೇಶ ಸ್ಥಿರತೆಯಲ್ಲ. ಬದಲಿಗೆ ಸುದೀರ್ಘ ಅಸ್ತವ್ಯಸ್ತತೆ ಸೃಷ್ಟಿಸುವುದೇ ಇರಬಹುದು. ಈ ಅಸ್ಥಿರತೆ ಸೃಷ್ಟಿಯೇ ಅಮೆರಿಕದ ತಂತ್ರವಾಗಿದ್ದರೆ, ಮಾನವ ಜೀವಗಳ ಹಾನಿ ಯೋಜನೆಯ ವೈಫಲ್ಯವಲ್ಲ; ಅದು ಯೋಜನೆಯ ಭಾಗವೇ ಆಗಿರಲಿದೆ.

ಅಷ್ಟಕ್ಕೂ ಟ್ರಂಪ್‌ಗೆ ಏನು ಬೇಕು?

ಅಮೆರಿಕ ಅಧ್ಯಕ್ಷ ಟ್ರಂಪ್ ಯುದ್ಧವನ್ನು ಏಕೆ ಆರಿಸಿಕೊಂಡರು ಎಂಬುದು ಈಗ ದೊಡ್ಡ ಪ್ರಶ್ನೆಯಲ್ಲ. ಬದಲಿಗೆ, ಜಿನೀವಾ ಮಾತುಕತೆಗಳು ನಿಜವಾದ ಪ್ರಗತಿ ಕಾಣುತ್ತಿವೆ ಎಂದು ಒಮನ್ ಮಧ್ಯಸ್ಥಿಕೆದಾರರು ಹೇಳುತ್ತಿದ್ದ ಸಮಯದಲ್ಲೇ ಅಮೆರಿಕ ಮತ್ತು ಇಸ್ರೇಲ್ ಏಕೆ ದಾಳಿ ನಡೆಸಿದವು ಎಂಬುದು ಅತ್ಯಂತ ಆತಂಕಕಾರಿ ಪ್ರಶ್ನೆ.

ಯುದ್ಧಗಳನ್ನು ಒಂದು ಕಾರಣಕ್ಕಾಗಿ ಪ್ರಾರಂಭಿಸಲಾಗುತ್ತದೆ. ಯುದ್ಧಕ್ಕೆ ಒಂದು ಉದ್ದೇಶವಿರಬೇಕು ಎಂದು ಯಾವುದೇ ಮಿಲಿಟರಿ ಹೇಳುತ್ತದೆ. ಒಬ್ಬ ಅಸ್ಥಿರ ನಾಯಕನ ಇಷ್ಟಾನಿಷ್ಟಗಳ ಮೇಲೆ ಯುದ್ಧ ಮಾಡಲು ಸಾಧ್ಯವಿಲ್ಲ. ಮಾತುಕತೆಗಳು ಮುಂದುವರಿಯುತ್ತಿದ್ದರೆ, ಪರಮಾಣು ಯೋಜನೆಯನ್ನು ರಾತ್ರೋರಾತ್ರಿ ನಿಲ್ಲಿಸುವುದು ದಾಳಿಯ ನಿಜವಾದ ಉದ್ದೇಶವಾಗಿರಲಿಲ್ಲ.

ಅಮೆರಿಕ ಕಳೆದ ಹಲವು ವಾರಗಳಿಂದ ಇರಾನ್‌ನಲ್ಲಿ ಆಡಳಿತ ಬದಲಾವಣೆಯ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದೆ. ಇಸ್ರೇಲ್ ತನ್ನ ಕೊನೆಯ ಪ್ರಬಲ ಪ್ರಾದೇಶಿಕ ಪ್ರತಿಸ್ಪರ್ಧಿಯನ್ನು ಆರ್ಥಿಕವಾಗಿ ಮತ್ತು ಕಾರ್ಯತಂತ್ರವಾಗಿ ದುರ್ಬಲವಾಗಿರುವಾಗಲೇ ಇಲ್ಲದಂತೆ ಮಾಡಲು ಇದೊಂದು ಸುವರ್ಣಾವಕಾಶ ಎಂದು ಭಾವಿಸಿದೆ. ಭದ್ರತೆಯ ಭಾಷೆಯನ್ನು ಪಕ್ಕಕ್ಕಿಟ್ಟು ನೋಡಿದರೆ ಚಿತ್ರಣ ಸ್ಪಷ್ಟವಾಗಿದೆ. ಅಮೆರಿಕ ತನ್ನ ಜಾಗತಿಕ ಪ್ರಾಬಲ್ಯವನ್ನು ಮರುಸ್ಥಾಪಿಸುತ್ತಿದೆ. ಯಾವ ಸರ್ಕಾರ ಉಳಿಯಬೇಕು ಎಂಬುದನ್ನು ತಾನೇ ನಿರ್ಧರಿಸುತ್ತೇನೆ ಎಂಬ ಸಂದೇಶ ನೀಡುತ್ತಿದೆ. ಇತ್ತ ಇಸ್ರೇಲ್ ಪಶ್ಚಿಮ ಏಷ್ಯಾದಲ್ಲಿ ಅಪ್ರತಿಮ ಮಿಲಿಟರಿ ಸರ್ವಶ್ರೇಷ್ಠತೆಯನ್ನು ಬಯಸುತ್ತಿದೆ.

ಇದು ಬಲಪ್ರಯೋಗದ ಮೂಲಕ ಏಕಧ್ರುವೀಯತೆಯನ್ನು ಹೇರುವ ಪ್ರಯತ್ನ. ಯಾಕೆಂದರೆ, ಇರಾನ್‌ ಮೇಲಿನ ಕ್ರಮ-ದಾಳಿಗಳ ಕುರಿತು ಅಮೆರಿಕ-ಇಸ್ರೇಲ್‌ ಜಗತ್ತನ್ನು ಸಂಪರ್ಕಿಸಿಲ್ಲ. ವಿಶ್ವಸಂಸ್ಥೆಯ ಸಭೆ ಕರೆದಿಲ್ಲ. ಮಿತ್ರರಾಷ್ಟ್ರಗಳಿಗೆ ಮಾಹಿತಿ ನೀಡಲಾಗಿದೆಯೇ ಹೊರತು ಅವರ ಅಭಿಪ್ರಾಯ ಕೇಳಿಲ್ಲ.

ಈ ಲೇಖನ ಓದಿದ್ದೀರಾ?: ಇರಾನ್‌ನ ಮಿತ್ರರು ಯಾರು? ರಷ್ಯಾ-ಚೀನಾ ನಿಲುವೇನು?

ಸ್ಪಷ್ಟವಾಗಿ ಹೇಳಬೇಕೆಂದರೆ, ಈ ದಾಳಿಯ ಚಿತ್ರಕಥೆ  ಹಳೆಯದು. ಮೊದಲು ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ ಬೆದರಿಕೆಯನ್ನು ಸೃಷ್ಟಿಸಲಾಗುತ್ತದೆ. ನಂತರ ಯುದ್ಧವನ್ನು ನೈತಿಕ ಅಗತ್ಯವೆಂದು ಬಿಂಬಿಸಲಾಗುತ್ತದೆ. ಮಾತುಕತೆಗಳು ಫಲ ನೀಡುವ ಹಂತದಲ್ಲಿದ್ದಾಗ ಅದನ್ನು ತಿರಸ್ಕರಿಸಲಾಗುತ್ತದೆ. ಆ ನಂತರ, ಏಕಾಏಕಿ ದಾಳಿ ಮಾಡಲಾಗುತ್ತದೆ. ಈ ಹಿಂದೆ, ಇರಾಕ್, ಲಿಬಿಯಾದಲ್ಲಿಯೂ ನಡೆದಿದ್ದೂ ಇದೇ ಚಿತ್ರಕಥೆಯ ಸಾರ.

ಟ್ರಂಪ್ ಮಾದರಿ ಏನು?

ಪ್ರಸ್ತುತ ಸಂದರ್ಭವು ಹೆಚ್ಚು ಅಪಾಯಕಾರಿಯಾಗಲು ಕಾರಣವೆಂದರೆ ಇದು ಒಂದು ಮಾದರಿಯೊಂದಿಗೆ ಬೆಸೆದುಕೊಂಡಿರುವುದು. ಟ್ರಂಪ್ ಅತಿದೊಡ್ಡ ಮಿಲಿಟರಿ ಸಜ್ಜುಗೊಳಿಸುವಿಕೆಯ ನೇತೃತ್ವ ವಹಿಸಿದ್ದಾರೆ. ನಿರ್ಬಂಧಗಳು ಮತ್ತು ರಾಜಕೀಯ ಅಮಾನ್ಯತೆ ಮೂಲಕ ವೆನೆಜುವೆಲಾವನ್ನು ಹತ್ತಿಕ್ಕಲು ಟ್ರಂಪ್ ಪ್ರಯತ್ನಿಸಿದರು. ನಂತರ ಅದರ ಅಧ್ಯಕ್ಷರ ಮೇಲೆ ದಾಳಿ ಮಾಡಿ ಬಂಧಿಸಿದರು. ತಮ್ಮ ಸರ್ವಾಧಿಕಾರಿ ಧೋರಣೆಯು ಮಾತುಕತೆಯ ಮೂಲಕವೇ ನಡೆದ ವಿಷಯವೆಂಬಂತೆ ಚುನಾಯಿತ ನಾಯಕತ್ವವನ್ನು ನಡೆಸಿಕೊಂಡರು. ಈಗ, ಕ್ಯೂಬಾವನ್ನು ವಶಪಡಿಸಿಕೊಳ್ಳುವ ಬಗ್ಗೆ ಬಹಿರಂಗ ಚರ್ಚೆ ನಡೆಸುತ್ತಿದ್ದಾರೆ. ಗ್ರೀನ್‌ಲ್ಯಾಂಡ್ ಅನ್ನು ತಮ್ಮ ವಾಣಿಜ್ಯ ಆಸ್ತಿಯಂತೆ ಸ್ವಾಧೀನಪಡಿಸಿಕೊಳ್ಳುವ ಹಠಕ್ಕೆ ಬಿದ್ದಿದ್ದಾರೆ. ಈಗ, ಇರಾನ್‌ಅನ್ನು ತನ್ನ ನೇಪತ್ಯಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿದ್ದಾರೆ. ಇದೇ ಟ್ರಂಪ್ ನೀತಿ-ಧೋರಣೆ-ಮಾದರಿ. ಈಗ, ಟ್ರಂಪ್ ಅವರ ಮುಖವಾಡ ಬಯಲಾಗಿದೆ. ಟ್ರಂಪ್ ಕ್ರೌರ್ಯ ಜಗತ್ತಿನೆದುರು ಬೆತ್ತಲಾಗಿದೆ.

ಈಗ, ಟ್ರಂಪ್ ಬಯಸುತ್ತಿದ್ದ ‘ನೊಬೆಲ್ ಶಾಂತಿ’ ಪ್ರಶಸ್ತಿಯನ್ನು ಯಾರಿಗೆ ಕೊಡಬೇಕು? ಟ್ರಂಪ್‌ಗಾ? ಡ್ರೋನ್‌ಗಳಿಗಾ? ಬಾಂಬರ್‌ಗಳಿಗಾ?

ಮಾಹಿತಿ ಮೂಲ: ಎನ್‌ಡಿಟಿವಿ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...