ಜಾಗತಿಕ ಇಂಧನ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ಹಾರ್ಮುಜ್ ಜಲಸಂಧಿ ಅತ್ಯಂತ ಮುಖ್ಯ. ಈ ಪ್ರದೇಶದಲ್ಲಿ ಯಾವುದೇ ರಾಜಕೀಯ ಅಥವಾ ಮಿಲಿಟರಿ ಉದ್ವಿಗ್ನತೆ ಉಂಟಾದರೆ, ತೈಲ ಸರಬರಾಜು ಏರುಪೇರಾಗಬಹುದು ಮತ್ತು ಜಾಗತಿಕ ತೈಲ ಬೆಲೆಗಳು ತೀವ್ರವಾಗಿ ಏರಬಹುದು. ವಿಶೇಷವಾಗಿ ಅಮೇರಿಕಾ, ಯುರೋಪ್, ಚೀನಾ, ಭಾರತ ಮತ್ತು ಜಪಾನ್ ಮುಂತಾದ ತೈಲ ಆಮದು ಮಾಡುವ ದೇಶಗಳಿಗೆ ಈ ಜಲಸಂಧಿಯು ಅತ್ಯಂತ ಮಹತ್ವದ್ದು.
ಜಾಗತಿಕ ಇಂಧನ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ಹಾರ್ಮುಜ್ ಜಲಸಂಧಿ ಅತ್ಯಂತ ಮುಖ್ಯ. ಈ ಪ್ರದೇಶದಲ್ಲಿ ಯಾವುದೇ ರಾಜಕೀಯ ಅಥವಾ ಮಿಲಿಟರಿ ಉದ್ವಿಗ್ನತೆ ಉಂಟಾದರೆ, ತೈಲ ಸರಬರಾಜು ಏರುಪೇರಾಗಬಹುದು ಮತ್ತು ಜಾಗತಿಕ ತೈಲ ಬೆಲೆಗಳು ತೀವ್ರವಾಗಿ ಏರಬಹುದು. ವಿಶೇಷವಾಗಿ ಅಮೇರಿಕಾ, ಯುರೋಪ್, ಚೀನಾ, ಭಾರತ ಮತ್ತು ಜಪಾನ್ ಮುಂತಾದ ತೈಲ ಆಮದು ಮಾಡುವ ದೇಶಗಳಿಗೆ ಈ ಜಲಸಂಧಿಯು ಅತ್ಯಂತ ಮಹತ್ವದ್ದು.
ತನ್ನ ಪ್ರಮುಖ ಆದಾಯ ಮೂಲವಾಗಿರುವ ತೈಲ ರಫ್ತಿನ ಮೇಲೆ ಅಮೆರಿಕ ಮತ್ತು ಯೂರೋಪಿಯನ್ ಯೂನಿಯನ್ ಹೇರಿರುವ ನಿರ್ಬಂಧಗಳನ್ನು ಪ್ರತಿಭಟಿಸಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ಕಾಲಕಾಲಕ್ಕೆ ಬೆದರಿಕೆ ಹಾಕುತ್ತಲೇ ಬಂದಿದೆ. ಶಾಂತಿಯುತ ಉದ್ದೇಶಗಳಿಗಾಗಿ ಪರಮಾಣು ಶಕ್ತಿಯನ್ನು ಬಳಸುತ್ತಿರುವುದಾಗಿ ಇರಾನ್ ಸಾರಿದರೂ, ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆಯೆಂದು ಆರೋಪಿಸುತ್ತಿರುವ ಅಮೆರಿಕ ಯುದ್ಧಕ್ಕೆ ಕಾಲು ಕೆರೆದಿದೆ. ಇರಾನ್ ಸುತ್ತಮುತ್ತ ತನ್ನ ಪಡೆಗಳನ್ನು ನಿಯುಕ್ತಿಗೊಳಿಸಿದೆ. ತನ್ನ ವಿರುದ್ಧ ಯುದ್ಧ ಸಾರಿದರೆ ತಾನು ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಈ ಸಲವೂ ಇರಾನ್ ಬೆದರಿಕೆ ಹಾಕಿದೆ.
ಹಾರ್ಮುಜ್ ಜಲಸಂಧಿ ಅತ್ಯಂತ ಆಯಕಟ್ಟಿನ ಜಲಮಾರ್ಗ- ಯಾವ್ಯಾವ ಕಾರಣಗಳಿಗಾಗಿ?
ಪರ್ಷಿಯನ್ ಕೊಲ್ಲಿಯ ಕೆಳ ಭಾಗದಾಲ್ಲಿರುವ ಹಾರ್ಮುಜ್ ಜಲಸಂಧಿ ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ. ಇದು ಪರ್ಷಿಯನ್ ಕೊಲ್ಲಿ (Persian Gulf) ಮತ್ತು ಅರೇಬಿಯನ್ ಸಮುದ್ರ (Arabian Sea) ನಡುವಿನ ನೈಸರ್ಗಿಕ ಸಾರಿಗೆ ಸಂಪರ್ಕದ ಮಾರ್ಗವಾಗಿದೆ. ಈ ಜಲಸಂಧಿಯು ಉತ್ತರದಲ್ಲಿ ಇರಾನ್ ದೇಶ ಮತ್ತು ದಕ್ಷಿಣದಲ್ಲಿ ಓಮಾನ್ ನಡುವಿನ ಪ್ರದೇಶವಾಗಿದೆ. ವಿಶೇಷವಾಗಿ ಓಮಾನ್‌ನ ಮುಸಂದಂ ಉಪದ್ವೀಪ (Musandam Peninsula) ಈ ಜಲಸಂಧಿಯ ದಕ್ಷಿಣ ಭಾಗವನ್ನು ಆವರಿಸಿಕೊಂಡಿದೆ.
ಭೌಗೋಳಿಕವಾಗಿ, ಹಾರ್ಮುಜ್ ಜಲಸಂಧಿಯ ಉದ್ದ ಸುಮಾರು 167 ಕಿಲೋಮೀಟರ್ ಆಗಿದ್ದು ಇದರ ಅತ್ಯಂತ ಕಿರಿದಾದ ಭಾಗವು ಸುಮಾರು 33 ಕಿಲೋಮೀಟರ್ ಮಾತ್ರ ಇದೆ. ಈ ಕಿರಿದಾದ ನೀರಿನ ಪ್ರದೇಶದಲ್ಲಿ ದೊಡ್ಡ ಹಡಗುಗಳ ಸಂಚಾರವನ್ನು ನಿಯಂತ್ರಿಸಲು, ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಸಮುದ್ರ ಸಂಸ್ಥೆ (International Maritime Organization – IMO) “ಟ್ರಾಫಿಕ್ ಸೆಪರೇಷನ್ ಸ್ಕೀಮ್” (Traffic Separation Scheme – TSS) ಅನ್ನು ಮಾನ್ಯಗೊಳಿಸಿದೆ. ಈ ವ್ಯವಸ್ಥೆಯಡಿಯಲ್ಲಿ ಎರಡು ಪ್ರತ್ಯೇಕ ಸಾಗಣೆ ಮಾರ್ಗಗಳಿವೆ – ಒಂದು ಒಳಬರುವ ಹಡಗುಗಳಿಗೆ ಮತ್ತು ಮತ್ತೊಂದು ಹೊರಹೋಗುವ ಹಡಗುಗಳಿಗೆ. ಪ್ರತಿಯೊಂದು ಮಾರ್ಗವು ಸುಮಾರು 3 ಕಿಲೋಮೀಟರ್ ಅಗಲವಿದ್ದು, ಅವುಗಳ ನಡುವೆ 3 ಕಿಲೋಮೀಟರ್ ಅಗಲದ ಸುರಕ್ಷತಾ ವಲಯವಿದೆ. ಈ ವ್ಯವಸ್ಥೆಯ ಕಿರಿದಾದ ವ್ಯಾಪ್ತಿಯಿಂದಾಗಿ ತೈಲ ಟ್ಯಾಂಕರ್‌ಗಳು ಮತ್ತು ಇತರ ದೊಡ್ಡ ವ್ಯಾಪಾರಿಕ ಅಥವಾ ಸೈನಿಕ ಹಡಗುಗಳನ್ನು ನಿರ್ವಹಿಸಲು ಅಥವಾ ನಾವಿಗೇಶನಲ್ ಮ್ಯಾನುವರಿಂಗ್ ಗೆ (ಹಡಗಿನ ದಿಕ್ಕು, ವೇಗ ಮತ್ತು ಸ್ಥಾನದ ನಿರ್ವಹಣೆ) ಅತ್ಯಂತ ಕಡಿಮೆ ಅವಕಾಶವಿರುತ್ತದೆ.
ಹಾರ್ಮುಜ್ ಜಲಸಂಧಿಯ ಮಹತ್ವ ಅತ್ಯಂತ ದೊಡ್ಡದು. ಪ್ರತಿದಿನ ಸುಮಾರು 17 ದಶಲಕ್ಷ ಬ್ಯಾರಲ್ ತೈಲವನ್ನು ತೈಲ ಟ್ಯಾಂಕರ್‌ಗಳು ಈ ಜಲಸಂಧಿಯ ಮೂಲಕ ಸಾಗಿಸುತ್ತವೆ, ಇದು ವಿಶ್ವದ ಒಟ್ಟು ತೈಲ ಬಳಕೆಯ ಸುಮಾರು 20 ರಿಂದ 30 ಶೇಕಡಾ ಭಾಗವಾಗಿದೆ. ಪೈಪ್‌ಲೈನ್‌ಗಳಂತಹ ಇತರ ತೈಲ ರಫ್ತು ಮಾರ್ಗಗಳು ಸೀಮಿತವಾಗಿರುವುದರಿಂದ, ಪರ್ಷಿಯನ್ ಕೊಲ್ಲಿಯಿಂದ ಹೊರಡುವ ಒಟ್ಟು ತೈಲದ ಸುಮಾರು 88 ಶೇಕಡಾ ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಸೌದಿ ಅರೇಬಿಯಾ, ಇರಾಕ್, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇರಾನ್ ದೇಶಗಳು ತಮ್ಮ ತೈಲವನ್ನು ಈ ಮಾರ್ಗದ ಮೂಲಕ ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುತ್ತವೆ. ಈ ಕಾರಣದಿಂದ, ಇದನ್ನು “ವಿಶ್ವದ ತೈಲ ಜೀವನಾಡಿ” ಎಂದು ಕರೆಯಲಾಗುತ್ತದೆ.
ಈ ಲೇಖನ ಓದಿದ್ದೀರಾ?: ಆಂಧ್ರ ಚುನಾವಣೆಯಲ್ಲಿ ಮಹಾಮೋಸದ ಸಾಧ್ಯತೆ!- ಪರಕಾಲ ಪ್ರಭಾಕರ್ ಆಸ್ಫೋಟಕ ವಿಶ್ಲೇಷಣೆ
ಜಾಗತಿಕ ಇಂಧನ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ಹಾರ್ಮುಜ್ ಜಲಸಂಧಿ ಅತ್ಯಂತ ಮುಖ್ಯವಾಗಿದೆ. ಈ ಪ್ರದೇಶದಲ್ಲಿ ಯಾವುದೇ ರಾಜಕೀಯ ಅಥವಾ ಮಿಲಿಟರಿ ಉದ್ವಿಗ್ನತೆ ಉಂಟಾದರೆ, ತೈಲ ಸರಬರಾಜು ವ್ಯತ್ಯಯಗೊಳ್ಳಬಹುದು ಮತ್ತು ಜಾಗತಿಕ ತೈಲ ಬೆಲೆಗಳು ತೀವ್ರವಾಗಿ ಏರಬಹುದು. ವಿಶೇಷವಾಗಿ ಅಮೇರಿಕಾ, ಯುರೋಪ್, ಚೀನಾ, ಭಾರತ ಮತ್ತು ಜಪಾನ್ ಮುಂತಾದ ತೈಲ ಆಮದು ಮಾಡುವ ದೇಶಗಳಿಗೆ ಈ ಜಲಸಂಧಿಯು ಅತ್ಯಂತ ಪ್ರಮುಖವಾಗಿದೆ.
ಇದರ ಜೊತೆಗೆ, ಹಾರ್ಮುಜ್ ಜಲಸಂಧಿಯು ಮಿಲಿಟರಿ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಇರಾನ್ ತನ್ನ ನೌಕಾಪಡೆ ಮತ್ತು ಹೈಪರ್ಸೋನಿಕ್ ಕ್ಷಿಪಣಿಗಳ ಮೂಲಕ ಈ ಪ್ರದೇಶದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದೆ. ಇದರಿಂದ ಜಾಗತಿಕ ರಾಜಕೀಯ ಮತ್ತು ಭದ್ರತಾ ಪರಿಸ್ಥಿತಿಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಕಳೆದ ಒಂದು ವರ್ಷದಂದ ಪುಟ್ಟದೇಶ ಯೆಮನ್ನಿನ ಹೌತಿ ಪಡೆಗಳೇ ಗಾಝ ನರಮೇಧದ ವಿರುದ್ದ ಕಂಪು ಸಮುದ್ರದ್ದಲ್ಲಿ ನರಮೇಧದಲ್ಲಿ ಭಾಗವಹಿಸಿರುವ ಪಾಶ್ಚಿಮಾತ್ಯ ದೇಶಗಳ ಹಡಗುಗಳ್ಳರನ್ನು ನಿಯಂತ್ರಿಸುತ್ತಿದ್ದಾರೆ, ಇನ್ನು ಇರಾನ್ ಹಾರ್ಮುಜ್ ಜಲಸಂಧಿಯನ್ನು ನಿಯಂತ್ರಿಸಿದರೆ ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಲ್ಲೊಲ ಕಲ್ಲೋಲ ಸೃಷ್ಟಿಯಾವುದಂತೂ ನಿಶ್ಚಿತ.
ಒಟ್ಟಾರೆ, ಹಾರ್ಮುಜ್ ಜಲಸಂಧಿ ಭೌಗೋಳಿಕವಾಗಿ ಸಣ್ಣದಾದರೂ, ಅದರ ಆರ್ಥಿಕ, ಸೈನಿಕ ಮತ್ತು ಅಂತರ ರಾಷ್ಟ್ರೀಯ ವ್ಯಾಪಾರ ವಹಿವಾಟನ ಮಟ್ಟದಲ್ಲಿ ಅತ್ಯಂತ ದೊಡ್ಡದು. ಇದು ಜಾಗತಿಕ ಇಂಧನ ಪೂರೈಕೆ ಮತ್ತು ಸಮುದ್ರ ವ್ಯಾಪಾರದ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.







