ಪ್ಯಾರಿಸ್ | ಫ್ಯಾಸಿಸಂ ವಿರುದ್ಧ ಮಹಿಳೆಯರ ಅರೆಬೆತ್ತಲೆ ಪ್ರತಿಭಟನೆ

Date:

ಜಗತ್ತಿನಾದ್ಯಂತ ಫ್ಯಾಸಿಸಂ ವಿಸ್ತರಿಸುತ್ತಿರುವುದರ ವಿರುದ್ಧ ಹಲವಾರು ಮಹಿಳೆಯರು ‘ಮೇಲುಡುಪು’ ಧರಿಸದೆ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಂತಾರಾಷ್ಟ್ರೀಯ ದುಡಿವ ಮಹಿಳಾ ದಿನದಂದು ಫ್ಯಾಸಿಸಂ ವಿರುದ್ಧ ಪ್ರತಿರೋಧ ದಾಖಲಿಸಿದ್ದಾರೆ.

ಪ್ಯಾರಿಸ್‌ನಲ್ಲಿ ಸಕ್ರಿಯವಾಗಿರುವ ‘ಫಿಮೆನ್’ (FEMEN) ಸಂಘಟನೆಯ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ‘ಫ್ಯಾಸಿಸ್ಟ್ ವೈರಸ್’ ಎಂಬ ಬರಹ ಮತ್ತು ‘ಸ್ವಸ್ತಿಕ್’ ಚಿಹ್ನೆ ಹಾಗೂ ಅಮೆರಿಕ, ರಷ್ಯಾ ಧ್ವಜಗಳನ್ನು ತಮ್ಮ ಎದೆಯ ಮೇಲೆ ಬರೆದುಕೊಂಡು ಮೇಲುಡುಪು ಧರಿಸದೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ‘ನಮ್ಮದು ಸ್ತ್ರೀವಾದಿ ಯುರೋಪ್, ಫ್ಯಾಸಿಸ್ಟ್ ಯುರೋಪ್ ಅಲ್ಲ!’ ಎಂದು ಘೋಷಣೆ ಕೂಗಿದ್ದಾರೆ.

FEMENನ ಅಧಿಕೃತ ಇನ್‌ಸ್ಟಾಗ್ರಾಮ್‌ ಪುಟದಲ್ಲಿ; “HEIL MUSK! HEIL TRUMP! HEIL PUTINE! ಅಂತರರಾಷ್ಟ್ರೀಯವಾಗಿ, ಯುರೋಪ್ ಮತ್ತು ಅಮೆರಿಕ – ಎರಡರಲ್ಲೂ ಪ್ರತಿಗಾಮಿ ಆಕ್ರಮಣಗಳು ಹೆಚ್ಚುತ್ತಿವೆ. ಜಗತ್ತನ್ನು ಫ್ಯಾಸಿಸಂ ಆವರಿಸಿಕೊಳ್ಳುತ್ತಿದೆ. ಈ ಫ್ಯಾಸಿಸಂ ವಿರುದ್ಧ ಮತ್ತು ಮಹಿಳಾ ಹಕ್ಕುಗಳಿಗಾಗಿ 40 ಫಿಮೆನ್ ಕಾರ್ಯಕರ್ತೆಯರು ಮಿಲಿಟರಿ ಕ್ಯಾಪ್‌ಗಳನ್ನು ಧರಿಸಿ ಮಾರ್ಚ್ 8ರಂದು ಪ್ರತಿಭಟನೆ ನಡೆಸಿದ್ದಾರೆ” ಎಂದು ಪೋಸ್ಟ್‌ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಎರಡು ದೈತ್ಯ ಮಿಲಿಟರಿ ಶಕ್ತಿಗಳಾದ ಅಮೆರಿಕ ಮತ್ತು ರಷ್ಯಾ, ತಮ್ಮ ಪ್ರಾಬಲ್ಯವನ್ನು ಪ್ರತಿಪಾದಿಸುತ್ತಿವೆ. ಹಿಂಸಾತ್ಮಕ ಮತ್ತು ತಾರತಮ್ಯದ ಧೋರಣೆಗಳ ಮೂಲಕ ಭೌಗೋಳಿಕ ರಾಜಕೀಯವನ್ನು ವಿಷಕಾರಿಯಾಗಿ ಬದಲಿಸುತ್ತಿವೆ. ಒಂದು ಕಡೆ ಉಕ್ರೇನ್‌ನಲ್ಲಿ ಹತ್ಯಾಕಾಂಡ, ಮತ್ತೊಂದೆಡೆ ದಬ್ಬಾಳಿಕೆ ಮತ್ತು ಬೆದರಿಕೆಗಳು ನಡೆಯುತ್ತಿದೆ. ಭೂ ಗ್ರಹವು ಹಣ ಮತ್ತು ಅಧಿಕಾರದ ಗೀಳು ಹೊಂದಿರುವ ಇಬ್ಬರು ಅಧಿಕಾರದಾಹಿ ಹುಚ್ಚರ ಪ್ರಾಬಲ್ಯಕ್ಕೆ ಸಿಲುಕಿದೆ” ಎಂದು ಫಿಮೆನ್ ಹೇಳಿದೆ.

ಈ ವರದಿ ಓದಿದ್ದೀರಾ?: ಮಾಯಾವತಿ ವಿಚಿತ್ರ ನಿರ್ಧಾರಗಳು: ಆಕಾಶ್ ಪದಚ್ಯುತಿ, ಅಧೋಗತಿಯತ್ತ ಬಿಎಸ್‌ಪಿ

“ಟ್ರಂಪ್ ಆಡಳಿತವು ಸರ್ಕಾರಿ ವೆಬ್‌ಸೈಟ್‌ಗಳಿಂದ ‘ಮಹಿಳೆಯರು’, ‘ಕ್ವೀರ್’ ಮತ್ತು ‘ಗೇ’ ಪದಗಳನ್ನು ಅಳಿಸಿಹಾಕುತ್ತಿದೆ. ಗರ್ಭಪಾತದ ಹಕ್ಕನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ. ನಾಲ್ಕು ಯುಎಸ್ ರಾಜ್ಯಗಳಾದನೆವಾಡಾ, ಅರಿಜೋನಾ, ಮೊಂಟಾನಾ ಹಾಗೂ ಮಿಸೌರಿಯಲ್ಲಿ ಗರ್ಭಪಾತದ ಹಕ್ಕನ್ನು ನಿಷೇಧಿಸಲಾಗಿದೆ. ಪ್ರತಿಗಾಮಿ ‘ವ್ಯಾಪಾರಿ’ ವ್ಯಕ್ತಿ ಟ್ರಂಪ್‌ ಆಯ್ಕೆ ಮತ್ತು ಮಾಧ್ಯಮಗಳಲ್ಲಿ ಪ್ರರುಷಪ್ರಭುತ್ವದ ವಾಕ್ಚಾತುರ್ಯವು ಹಿಂಸಾತ್ಮಕ ಮತ್ತು ವಿಷಕಾರಿ ಪ್ರತಿಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದೆ.

ಫಿಮೆನ್ ಸಂಘಟನೆಯು ಅಂತರರಾಷ್ಟ್ರೀಯ ಮಹಿಳಾ ಚಳುವಳಿಯ ಭಾಗವೆಂದು ಗುರುತಿಸಿಕೊಂಡಿದೆ. ಇದು ಸೆಕ್ಸ್‌ಟ್ರೀಮಿಸಂ ಎಂಬ ವಾದವನ್ನು ಪ್ರತಿಪಾದಿಸುತ್ತದೆ. ಅವರ ಪ್ರಕಾರ, ಸೆಕ್ಸ್‌ಟ್ರೀಮಿಸಂ ಎಂದರೆ “ಪಿತೃಪ್ರಭುತ್ವದ ವಿರುದ್ಧ ದಂಗೆ ಏಳುವುದು. ಸೆಕ್ಸ್‌ಟ್ರೀಮಿಸಂ ಶೈಲಿಯು ಸ್ತ್ರೀ ಲೈಂಗಿಕತೆ ಕುರಿತಾದ ಪಿತೃಪ್ರಭುತ್ವದ ಧೋರಣೆಯನ್ನು ಹೊಡೆದುರುಳಿಸುವ ಮಾರ್ಗವಾಗಿದೆ. ಪಿತೃಪ್ರಭುತ್ವ ಸಂಸ್ಕೃತಿಯ ಅಡಿಪಾಯವನ್ನು ದುರ್ಬಲಗೊಳಿಸುವ ಪ್ರಭಾವಶಾಲಿ ಅಸ್ತ್ರವಾಗಿದೆ” ಎಂದು ಫಿಮೆನ್ ಹೇಳುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...