ಟಿ20 ಪಂದ್ಯದಲ್ಲಿ 14 ಫೋರ್‌ಗಳು ಮತ್ತು 23 ಸಿಕ್ಸರ್‌ಗಳ ನೆರವಿನೊಂದಿಗೆ 81 ಎಸೆತಗಳನ್ನು ಎದುರಿಸಿ 229 ರನ್‌ಗಳಿರುವ ನೆದರ್ಲೆಂಡ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ ವಿಶ್ವ ದಾಖಲೆ ಬರೆದಿದ್ದಾರೆ. ಟಿ20 ಇತಿಹಾಸದಲ್ಲಿ ಎಡ್ವರ್ಡ್ ಅವರು ಗರಿಷ್ಠ ರನ್‌ಗಳನ್ನು ಕಲೆ ಹಾಕಿದ ಆಟಗಾರನೆಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಗ್ರೇಡ್ ಟಿ20 ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಟೂರ್ನಿಯಲ್ಲಿ ವಿಲಿಯಮ್ಸ್ ಲ್ಯಾಂಡಿಂಗ್ ಎಸ್ಸಿ ಮತ್ತು ಆಲ್ಟೋನಾ ಸ್ಪೋರ್ಟ್ಸ್ ನಡುವಿನ ಪಂದ್ಯದಲ್ಲಿ ಅಲ್ಟೋನಾ ಸ್ಪೋರ್ಟ್ಸ್ ಪರ ಆರಂಭಿಕ ಬ್ಯಾಟರ್‌ಆಗಿ ಎಡ್ವರ್ಡ್ ಕಣಕ್ಕಿಳಿದಿದ್ದರು. ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ದ್ವಿಶತಕ ಬಾರಿಸಿದ್ದಾರೆ.
ಎಡ್ವರ್ಡ್ ಅವರು ಪಂದ್ಯದ ಉದ್ದಕ್ಕೂ 81 ಎಸೆತಗಳನ್ನು ಎದುರಿಸಿದರು. 14 ಫೋರ್‌ಗಳು ಮತ್ತು 23 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಅಜೇಯರಾಗಿ 229 ರನ್ ಕಲೆಹಾಕಿದರು.
ಈ ಲೇಖನ ಓದಿದ್ದೀರಾ?: ಬ್ಯಾಂಕ್, ವಿಮಾ ಕಂಪನಿಗಳಲ್ಲಿ ಬಿದ್ದಿದೆ ಜನರ 78,000 ಕೋಟಿ ರೂ.; ಈ ಹಣ ಪಡೆಯುವುದು ಹೇಗೆ?
ಈ ಹಿಂದೆ, ಟಿ20ಯಲ್ಲಿ ದ್ವಿಶತಕ ಬಾರಿಸಿದ ದಾಖಲೆ ಸಾಗರ್ ಕುಲ್ಕರ್ಣಿ ಹೆಸರಿನಲ್ಲಿತ್ತು. ಅವರು ಸಿಂಗಾಪುರ್ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಮರೀನಾ ಕ್ಲಬ್ ಪರವಾಗಿ ಬ್ಯಾಟಿಂಗ್ ಮಾಡಿ, 56 ಎಸೆತಗಳಲ್ಲಿ 219 ರನ್ ಗಳಿಸಿದ್ದರು. ಇದೀಗ, ಅವರ ದಾಖಲೆಯನ್ನು ಎಡ್ವರ್ಡ್ ಮುರಿದಿದ್ದಾರೆ.
ಎಡ್ವರ್ಡ್ ಅವರ ದ್ವಿಶತಕದ ನೆರವಿನೊಂದಿಗೆ ಆಲ್ಟೋನಾ ಸ್ಪೋರ್ಟ್ಸ್ ತಂಡವು 20 ಓವರ್ಗಳಲ್ಲಿ 302 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವಿಲಿಯಮ್ಸ್ ಲ್ಯಾಂಡಿಂಗ್ ಎಸ್ಸಿ ತಂಡವು 118 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯವಾಗಿ ಸೋಲುಂಡಿತು. ಆಲ್ಟೋನಾ ಸ್ಪೋರ್ಟ್ಸ್ ತಂಡ 186 ರನ್ಗಳ ಭರ್ಜರಿ ಜಯ ಸಾಧಿಸಿತು.




