ಯೆಮೆನ್ | ಮುಕಲ್ಲಾ ಬಂದರಿನ ಮೇಲೆ ಸೌದಿಯಿಂದ ವೈಮಾನಿಕ ದಾಳಿ; ಯುಎಇ ಜೊತೆಗಿನ ರಕ್ಷಣಾ ಒಪ್ಪಂದ ರದ್ದು

Date:

ಯೆಮೆನ್‌ನ ದಕ್ಷಿಣದ ಪ್ರತ್ಯೇಕತಾವಾದಿಗಳಿಗೆ ವಿದೇಶಿ ಬೆಂಬಲಿತ ಹಡಗುಗಳು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿವೆ ಎಂದು ಆರೋಪಿಸಿ ಸೌದಿ ಅರೇಬಿಯಾವು ಇಂದು ಯೆಮೆನ್‌ ಬಂದರು ನಗರವಾದ ಮುಕಲ್ಲಾ ಮೇಲೆ ವೈಮಾನಿಕ ದಾಳಿ ಮಾಡಿದೆ. ಅದರ ಬೆನ್ನಲ್ಲೇ ಯುಎಇ ಜೊತೆಗಿನ ರಕ್ಷಣಾ ಒಪ್ಪಂದವನ್ನು ಯೆಮೆನ್ ಅಧ್ಯಕ್ಷೀಯ ಮಂಡಳಿಯು ರದ್ದುಗೊಳಿಸಿರುವುದಾಗಿ ಅಲ್-ಜಝೀರಾ ವರದಿ ಮಾಡಿದೆ.

Southern Transitional Council (STC) ಹೆಸರಿನ ರಾಜಕೀಯ ಸಂಘಟನೆಯು 2017ರಲ್ಲಿ ರಚನೆಯಾಗಿದ್ದು ದಕ್ಷಿಣ ಯೆಮೆನ್‌ನಲ್ಲಿ ತನ್ನ ಪ್ರಾಬಲ್ಯವನ್ನು ಹೊಂದಿದೆ. ಈ ಸಂಘಟನೆಗೆ ಯುಎಇ(ಯುನೈಟೆಡ್ ಅರಬ್ ಎಮಿರೇಟ್ಸ್) ಬೆಂಬಲ ನೀಡುತ್ತಿದೆ. ಎಸ್‌ಟಿಸಿಯು ಇತ್ತೀಚಿಗೆ ಪೂರ್ವ ಯೆಮೆನ್‌ನಲ್ಲಿರುವ ತೈಲ ಸಮೃದ್ಧ ಹದ್ರಾಮೌಟ್ ಮತ್ತು ಅಲ್ ಪ್ರಾಂತ್ಯಗಳನ್ನು ವಶಕ್ಕೆ ಪಡೆದಿತ್ತು.

ಎಸ್‌ಟಿಸಿಗೆ ಬಲ ತುಂಬಲು ಮುಕಲ್ಲಾ ಬಂದರಿಗೆ ಶಸ್ತ್ರಾಸ್ತ್ರಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಯುಎಇ ಕಳುಹಿಸಿಕೊಟ್ಟಿತ್ತು. ಈ ಶಸ್ತ್ರಾಸ್ತ್ರ ಕಳುಹಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಸೌದಿ ಅರೇಬಿಯಾವು, ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿರುವ ಮುಕಲ್ಲಾ ನಗರದ ಮೇಲೆಯೇ ಬಾಂಬ್‌ ದಾಳಿ ನಡೆಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎರಡು ಹಡಗುಗಳಿಂದ ಲೋಡ್ ಮಾಡಲಾದ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ವಾಹನಗಳನ್ನು ಗುರಿಯಾಗಿಸಿಕೊಂಡು ಸೌದಿ ಅರೇಬಿಯಾವು ಸೀಮಿತ ವಾಯುದಾಳಿಯನ್ನು ನಡೆಸಿದೆ. ಯುಎಇಯ ಪೂರ್ವ ಕರಾವಳಿಯ ಬಂದರು ನಗರವಾದ ಫುಜೈರಾದಿಂದ ಹಡಗುಗಳು ಬಂದ ನಂತರ ಈ ದಾಳಿ ನಡೆದಿದೆ. ಅಲ್ಲದೇ, ಯೆಮೆನ್‌ನ ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುತ್ತಿರುವುದು ಅತ್ಯಂತ ಅಪಾಯಕಾರಿ ಎಂದು ಯುಎಇಗೆ ಸೌದಿ ಅರೇಬಿಯಾವು ಎಚ್ಚರಿಕೆ ನೀಡಿದೆ.

ಸೌದಿ ಅರೇಬಿಯಾವು ಬಾಂಬ್‌ ದಾಳಿ ನಡೆಸಿದ ಬಳಿಕ ಯೆಮೆನ್ ಅಧ್ಯಕ್ಷೀಯ ಮಂಡಳಿಯು ಯುಎಇ ರಕ್ಷಣಾ ಒಪ್ಪಂದವನ್ನು ರದ್ದುಗೊಳಿಸಿದೆ. ಯೆಮೆನ್‌ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು ಮತ್ತು ದೇಶದ ಹೊರಗೆ ಕಾರ್ಯನಿರ್ವಹಿಸುವ ಯಾವುದೇ ಸಂಘಟನೆಗಳಿಗೆ ಮಿಲಿಟರಿ ಮತ್ತು ಲಾಜಿಸ್ಟಿಕ್‌ ಬೆಂಬಲ ನೀಡುವುದನ್ನು ಯುಎಇ ತಕ್ಷಣವೇ ನಿಲ್ಲಿಸಬೇಕು ಎಂದು ಸೌದಿಯ ಉನ್ನತ ರಾಜಕೀಯ ಮತ್ತು ಮಿಲಿಟರಿ ನಾಯಕರನ್ನು ಒಳಗೊಂಡ ಕೂಟವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಯೆಮೆನ್‌ನಲ್ಲಿ ಆಂತರಿಕ ಸಂಘರ್ಷವಿದ್ದು ವಿವಿಧ ರಾಜಕೀಯ ಪಕ್ಷಗಳು, ಬಂಡುಕೋರರು ಅಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಕೆಲ ಪ್ರದೇಶಗಳು ಬಂಡುಕೋರರ ಕೈಯಲ್ಲಿದ್ದರೆ ಕೆಲವು ಪ್ರದೇಶ ಸರ್ಕಾರದ ನಿಯಂತ್ರಣದಲ್ಲಿದೆ. ಯುಎಎ ಮತ್ತು ಸೌದಿ ಅರೇಬಿಯಾವು ತನ್ನದೇ ತೈಲ ನಿಕ್ಷೇಪ ಹೊಂದಿದ್ದರೂ ಎರಡೂ ದೇಶಗಳು ತೈಲ ನಿಕ್ಷೇಪದ ಮೇಲೆ ಕಣ್ಣಿಟ್ಟಿದೆ. ಈ ಕಾರಣಕ್ಕೆ ಅಲ್ಲಿರುವ ಎಸ್‌ಟಿಸಿ ಸಂಘಟನೆಗೆ ಯುಎಇ ನೆರವು ನೀಡುತ್ತಿದ್ದರೆ, ಯೆಮೆನ್‌ ಅಧ್ಯಕ್ಷೀಯ ಸರ್ಕಾರಕ್ಕೆ ಸೌದಿ ಅರೇಬಿಯಾ ನೆರವು ನೀಡುತ್ತಿದೆ.

ಸೌದಿ ಅರೇಬಿಯಾ ಯೆಮೆನ್‌ ಜೊತೆ ಗಡಿಯನ್ನು ಹಂಚಿಕೊಂಡಿದ್ದರೂ ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತಿಲ್ಲ. ಭೌಗೋಳಿಕ ರಾಜಕೀಯ, ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಾಗಿ ಯೆಮೆನ್‌ ವಿಚಾರದಲ್ಲಿ ಆಸಕ್ತಿಯನ್ನು ಹೊಂದಿದೆ. ದಕ್ಷಿಣ ಭಾಗದಲ್ಲಿ ಬಂಡುಕೋರರನ್ನು ನಿಯಂತ್ರಿಸಿ ಸಮುದ್ರ ವ್ಯಾಪಾರ ಮಾರ್ಗದಲ್ಲಿ ಯಾವುದೇ ಸಮಸ್ಯೆ ಆಗದಿರಲು ಯೆಮೆನ್‌ ಸರ್ಕಾರಕ್ಕೆ ಬೆಂಬಲ ನೀಡುತ್ತಿದೆ.

ಇದನ್ನು ಓದಿದ್ದೀರಾ? ಖಾಲೆದಾ ಜಿಯಾ | ಪಶ್ಚಿಮ ಬಂಗಾಳದಿಂದ ಬಾಂಗ್ಲಾ ಗದ್ದುಗೆವರೆಗಿನ ಏಳುಬೀಳು

ಮುಕಲ್ಲಾ ಬಂದರು ಮೇಲೆ ದಾಳಿ: ‘ಸಾವು ನೋವು ಸಂಭವಿಸಿಲ್ಲ’ ಎಂದ ಸೌದಿ ಅರೇಬಿಯಾ

ಮುಕಲ್ಲಾ ಬಂದರಿನ ಮೇಲೆ ದಾಳಿಯ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಸೌದಿಯು, “ವೈಮಾನಿಕ ದಾಳಿಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. ಇದು ಎಚ್ಚರಿಕೆಗಾಗಿ ದಾಳಿ ಮಾಡಲಾಗಿದೆ” ಎಂದು ತಿಳಿಸಿದೆ.

‘ಗ್ರೀನ್‌ಲ್ಯಾಂಡ್’ ಎಂದು ಗುರುತಿಸಲಾದ ಹಡಗಿನಿಂದ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ವಾಹನಗಳು ಮುಕಲ್ಲಾದಲ್ಲಿ ಇಳಿಸಲಾಗುತ್ತಿರುವ ವೀಡಿಯೊವನ್ನು ಪ್ರಕಟಿಸಿದ್ದು, ಅದು ಎಮಿರಾಟಿಯ ಫುಜೈರಾ ಬಂದರಿನಿಂದ ಬಂದಿದೆ. ಎರಡು ಹಡಗುಗಳ ಸರಕುಗಳನ್ನು ಇಳಿಸಲಾಗುತ್ತಿದ್ದ ಡಾಕ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

‘ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನುಂಟು ಮಾಡುವ ಕ್ರಮ ಸಹಿಸಲ್ಲ’ ಎಂದ ಸೌದಿ

ಈ ಎಲ್ಲ ಬೆಳವಣಿಗೆಗಳ ನಡುವೆ ಹೇಳಿಕೆ ನೀಡಿರುವ ಸೌದಿ ಅರೇಬಿಯಾವು, “ಪೂರ್ವ ಯೆಮೆನ್‌ನಲ್ಲಿ ಯುಎಇ ಅಪಾಯಕಾರಿ ನಿರ್ಧಾರಗಳು ಸೌದಿ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನುಂಟು ಮಾಡುತ್ತವೆ. ಯೆಮೆನ್‌ನಲ್ಲಿರುವ ಎಲ್ಲಾ ಪಡೆಗಳನ್ನು 24 ಗಂಟೆಗಳ ಒಳಗೆ ಹಿಂದೆಗೆದುಕೊಳ್ಳಬೇಕು. ಯೆಮೆನ್ ಬಣಗಳಿಗೆ ಮಿಲಿಟರಿ ಮತ್ತು ಆರ್ಥಿಕ ಬೆಂಬಲವನ್ನು ಕೂಡಲೇ ಸ್ಥಗಿತಗೊಳಿಸಬೇಕು. ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನುಂಟು ಮಾಡುವ ಕ್ರಮವನ್ನು ನಾವು ಸಹಿಸಲ್ಲ” ಎಂದು ಯುಎಇಗೆ ಸೌದಿ ಅರೇಬಿಯಾ ಸೂಚಿಸಿದೆ.

ಯೆಮೆನ್ ಅಧ್ಯಕ್ಷೀಯ ಮಂಡಳಿಯ ಮುಖ್ಯಸ್ಥ ರಶಾದ್ ಅಲ್-ಅಲಿಮಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿರುವ ಯೆಮೆನ್ ಸುದ್ದಿ ಸಂಸ್ಥೆಯು, “ರಶಾದ್ ಅಲ್-ಅಲಿಮಿ ಅವರು ಯುಎಇ ಜೊತೆಗಿನ ರಕ್ಷಣಾ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ. ಎಸ್‌ಟಿಸಿಗೆ ಬೆಂಬಲ ನೀಡುವ ಮೂಲಕ ಯುಎಇ, ಯೆಮೆನ್‌ನಲ್ಲಿ ಆಂತರಿಕ ಕಲಹವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ” ಆರೋಪಿಸಿದೆ.

“ದುರದೃಷ್ಟವಶಾತ್, ಮಿಲಿಟರಿ ದಂಗೆಯ ಮೂಲಕ ರಾಜ್ಯದ ಅಧಿಕಾರವನ್ನು ದುರ್ಬಲಗೊಳಿಸಲು ಮತ್ತು ಅಧ್ಯಕ್ಷೀಯ ಮಂಡಳಿಯ ವಿರುದ್ಧ ದಂಗೆ ಏಳಲು ಯುನೈಟೆಡ್ ಅರಬ್ ಎಮಿರೇಟ್ಸ್ ಎಸ್‌ಟಿಸಿ ಮೇಲೆ ಒತ್ತಡ ಹೇರಿದೆ ಮತ್ತು ನಿರ್ದೇಶಿಸಿದೆ ಎಂದು ಖಚಿತವಾಗಿ ದೃಢಪಡಿಸಲಾಗಿದೆ” ಎಂದು ರಶಾದ್ ಅಲ್-ಅಲಿಮಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಯೆಮೆನ್ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ಅವರು ಹೇಳಿದರು.

ತನ್ನ ವಿರುದ್ಧದ ಸೌದಿಯ ಆರೋಪವನ್ನು ನಿರಾಕರಿಸಿರುವ ಯುಎಇ, “ಯೆಮೆನ್‌ನಲ್ಲಿ ನಡೆಯುತ್ತಿರುವ ಉದ್ವಿಗ್ನತೆಯಲ್ಲಿ ನಮ್ಮ ಪಾತ್ರವಿಲ್ಲ. ಸೌದಿ ಅರೇಬಿಯಾದ ಭದ್ರತೆಗೆ ಬೆದರಿಕೆ ಹಾಕುವ ಅಥವಾ ಅದರ ಗಡಿಗಳನ್ನು ಗುರಿಯಾಗಿಸುವ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಲು ಯೆಮೆನ್‌ನ ಯಾವುದೇ ವಿಭಾಗದವರ ಮೇಲೆ ಒತ್ತಡ ಹೇರುತ್ತಿರುವ ಆರೋಪಗಳನ್ನು ಖಂಡಿಸುತ್ತೇವೆ” ಎಂದು ಅದು ಹೇಳಿದೆ.

“ಸೌದಿ ಅರೇಬಿಯಾದ ಭದ್ರತೆ ಮತ್ತು ಸ್ಥಿರತೆಗೆ ನಮ್ಮ ನಿರಂತರ ಬದ್ಧತೆಯನ್ನು ದೃಢಪಡಿಸುತ್ತೇವೆ. ಸೌದಿಯ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಪೂರ್ಣ ಗೌರವವನ್ನು ನೀಡುತ್ತೇವೆ. ಸೌದಿಯ ಭದ್ರತೆಗೆ ಬೆದರಿಕೆ ಹಾಕುವ ಯಾವುದೇ ಕ್ರಮಗಳನ್ನು ನಾವು ಮಾಡಿಲ್ಲ. ಈ ಆರೋಪಗಳನ್ನು ತಿರಸ್ಕರಿಸುತ್ತೇವೆ” ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆ: ಕುಸಿತ ಕಂಡ ಗಲ್ಫ್‌ನಲ್ಲಿನ ಪ್ರಮುಖ ಷೇರು ಮಾರುಕಟ್ಟೆ

ಯೆಮೆನ್‌ನಲ್ಲಿ ಬೆಳವಣಿಗೆಯ ವಿಚಾರವಾಗಿ ಸೌದಿ ಅರೇಬಿಯಾ ಹಾಗೂ ಯುಎಇ ನಡುವಿನ ಬಿಕ್ಕಟ್ಟು ಉಲ್ಬಣಗೊಂಡ ಬೆನ್ನಲ್ಲೇ ಮಂಗಳವಾರ ಗಲ್ಫ್‌ನಲ್ಲಿನ ಪ್ರಮುಖ ಷೇರು ಸೂಚ್ಯಂಕಗಳು ಕುಸಿತ ಕಂಡಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...