‘ನೀವು ಎಂದಿಗೂ ನನ್ನ ಅಧ್ಯಕ್ಷರಾಗಲ್ಲ’; ಟ್ರಂಪ್‌ಗೆ ಭಾರತೀಯನ ಪ್ರತಿಕ್ರಿಯೆ ವೈರಲ್

Date:

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಒಂದು ತಿಂಗಳಷ್ಟೇ ಬಾಕಿ ಇದೆ. ನವೆಂಬರ್‌ನಲ್ಲಿ ಚುನಾವಣೆಯ ನಡೆಯಲಿದೆ. ಚುನಾವಣೆಗಾಗಿ ಟಮೆರಿಕ ಮಾಜಿ ಅಧ್ಯಕ್ಷ, ಹಾಲಿ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ‘ಎಕ್ಸ್‌’ ಖಾತೆಯಿಂದ ಸ್ವಯಂಚಾಲಿತ ಸಂದೇಶಗಳು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಹೋಗುತ್ತಿವೆ. ಅಂತಹೊಂದು ಸಂದೇಶಕ್ಕೆ ಭಾರತೀಯ ಬಳಕೆದಾರನೊಬ್ಬ ಪ್ರತಿಕ್ರಿಯಿಸಿದ್ದು, ಆತನ ಟ್ವೀಟ್ ವೈರಲ್ ಆಗುತ್ತಿದೆ.

ಟ್ರಂಪ್‌ ಅವರು ‘ಎಕ್ಸ್‌’ ಖಾತೆಯಿಂದ ರೋಷನ್ ರೈ ಎಂಬ ಬಳಕೆದಾರರ ಖಾತೆಯನ್ನು ಉಲ್ಲೇಖಿಸಿ, “ರೋಷನ್ ರೈ ಅವರೇ, “ನಾನು ನಿಮಗೆ ಉತ್ತರ ಕೆರೊಲಿನಾದ ಪ್ರಮುಖ ಚುನಾವಣಾ ಮಾಹಿತಿಗಳನ್ನು ಕಳುಹಿಸುತ್ತೇನೆ. ನವೆಂಬರ್ 5 ರೊಳಗೆ ಡೊನಾಲ್ಡ್ ಜೆ ಟ್ರಂಪ್‌ಗೆ ಮತ ಹಾಕಲು ನೀವು ಸಿದ್ಧರಿದ್ದೀರಿ ಎಂದು ಖಾತ್ರಿಪಡಿಸಿ. ಮಾಹಿತಿಗಳು ಬೇಡವೆಂದಾರೆ #stop ಎಂದು ಪ್ರತಿಕ್ರಿಯಿಸಿ” ಎಂಬ ಸಂದೇಶ ಕಳಿಸಲಾಗಿದೆ.

ಟ್ರಂಟ್‌ ಖಾತೆಯಿಂದ ಬಂದ ಈ ಸಂದೇಶಕ್ಕೆ ರೋಶನ್ ರೈ ಅವರು ಪ್ರತಿಕ್ರಿಯಿಸಿದ್ದು, “ಧನ್ಯವಾದಗಳು. ಆದರೆ ನೀವು ಎಂದಿಗೂ ನನ್ನ ಅಧ್ಯಕ್ಷರಾಗಲು ಸಾಧ್ಯವಿಲ್ಲ. ಕಮಲಾ ಹ್ಯಾರಿಸ್ ಕೂಡ ಎಂದಿಗೂ ನನ್ನ ಅಧ್ಯಕ್ಷರಾಗಲಾರರು. ಯಾಕೆಂದರೆ, ನಾನು ಭಾರತದವನು” ಎಂದು ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರೋಷನ್ ರೈ ಅವರು ತಮ್ಮ ‘ಎಕ್ಸ್‌‘ ಖಾತೆಯ ಬಯೋದಲ್ಲಿ ‘ಭಾರತೀಯ, ಹಾಸ್ಯಗಾರ, ಕ್ರಿಕೆಟ್‌ಹೋಲಿಕ್’ ಎಂದು ಬರೆದುಕೊಂಡಿದ್ದಾರೆ.

ಟ್ರಂಪ್‌ ಸಂದೇಶಕ್ಕೆ ರೋಷನ್ ರೈ ಅವರ ಪ್ರತಿಕ್ರಿಯೆಯು ನೆಟ್ಟಿಗರ ಗಮನ ಸೆಳೆದಿದೆ. ಇದು ಟ್ರಂಪ್‌ ಅವರ ಸ್ವಯಂಚಾಲಿತ ಸಂದೇಶ ವ್ಯವಸ್ಥೆಯು ಅಮೆರಿಕದ ಗಡಿಯನ್ನೂ ದಾಟಿದೆ ಎಂಬುದನ್ನೂ ತೋರಿಸುತ್ತದೆ. 2016ರಲ್ಲಿಯೂ ಟ್ರಂಪ್‌ ಇಂತದ್ದೇ ತಂತ್ರಗಳ ಮೂಲಕ ಜನರನ್ನು ಸೆಳೆದಿದ್ದರು. ಇದೂ ಕೂಡ ಅವರ ಗೆಲುವಿಗೆ ಕಾರಣವಾಗಿತ್ತು ಎಂದು ಹೇಳಲಾಗಿದೆ.

2018ರಲ್ಲಿ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್ ನಡೆಸಿದ ಅಧ್ಯಯನದ ಪ್ರಕಾರ, “2016ರ ಅಮೆರಿಕ ಚುನಾವಣೆಗಳಲ್ಲಿ ಮತಗಳನ್ನು ಟ್ರಂಪ್‌ ಪರವಾಗಿ ತಿರುಗಿಸುವಲ್ಲಿ ಇಂತಹ ಸ್ವಯಂಚಾಲಿಕ ಸಂದೇಶದ ಬಾಟ್‌ಗಳು ನಿರ್ಣಾಯಕ ಪಾತ್ರ ವಹಿಸಿವೆ. ಡೊನಾಲ್ಡ್ ಟ್ರಂಪ್ ಅವರಿಗೆ ಸಂದ ಒಟ್ಟು ಮತಗಳಲ್ಲಿ 3.23%ರಷ್ಟು ಮತಗಳು ಹೆಚ್ಚಾಗುವಲ್ಲಿ ಟ್ವಿಟರ್ ಬಾಟ್‌ಗಳ ಪಾತ್ರವಿದೆ” ಎಂದು ಸೂಚಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...