ಕರ್ನಾಟಕ ಲೋಕಾಯುಕ್ತದಲ್ಲಿ ಕಲ್ಯಾಣ ಕರ್ನಾಟಕ ಭಾಗದವರಿಗೆ ಉದ್ಯೋಗಾವಕಾಶ: ಅರ್ಜಿ ಆಹ್ವಾನ

Date:

ಕರ್ನಾಟಕದ ಲೋಕಾಯುಕ್ತ ಇಲಾಖೆಯು ಕಲ್ಯಾಣ ಕರ್ನಾಟಕ (ಸ್ಥಳೀಯ ವೃಂದ) ದಲ್ಲಿ ಖಾಲಿ ಇರುವ ಗ್ರೂಪ್-ಸಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಈ ಸಂಬಂಧ ಇಲಾಖೆಯು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಕರ್ನಾಟಕದ ಲೋಕಾಯುಕ್ತ ಇಲಾಖೆಯ ಅಧಿಕೃತ ವೆಬ್​ಸೈಟ್ ಆಗಿರುವ lokayukta.kar.nic.in​ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.

ಈ ಎಲ್ಲ ಅರ್ಜಿಗಳು ಆನ್​ಲೈನ್ ಮೂಲಕ ಸಲ್ಲಿಸಬೇಕಾಗಿದ್ದು, ಬೇರೆ ಮೂಲದಿಂದ ಬರುವ ಅರ್ಜಿಗಳನ್ನು ಇಲಾಖೆ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದೆ.

ಕರ್ನಾಟಕ ಲೋಕಾಯುಕ್ತ ನಿಯಮಗಳು 1988 ಹಾಗೂ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಮೀಸಲಾತಿ) ಅರ್ಹತಾ ಪ್ರಮಾಣ ಪತ್ರ ಹೊಂದಿರಬೇಕು. ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ವಿದ್ಯಾರ್ಹತೆ, ಅರ್ಜಿ ಶುಲ್ಕ, ವೇತನ ಶ್ರೇಣಿ, ಹುದ್ದೆ ಹೆಸರು ಏನು, ನೇಮಕಾತಿ ಪ್ರಕ್ರಿಯೆಯ ಬಗ್ಗೆ ಇಲ್ಲಿದೆ ವಿವರ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹುದ್ದೆಯ ಹೆಸರು- ಕ್ಲರ್ಕ್​ ಕಮ್ ಟೈಪಿಸ್ಟ್​
ಒಟ್ಟು ಹುದ್ದೆಗಳು- 14
ವೇತನ ಶ್ರೇಣಿ- ₹34,100 ರಿಂದ ₹67.600

ಶೈಕ್ಷಣಿಕೆ ವಿದ್ಯಾರ್ಹತೆ

ಪದವಿ ಪೂರ್ವ ಶಿಕ್ಷಣ ಪರೀಕ್ಷೆ ಉತ್ತೀರ್ಣರಾಗಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಕಿರಿಯ ದರ್ಜೆಯ ಬೆರಳಚ್ಚು ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. (ಅಂಕಪಟ್ಟಿ ಹೊಂದಿರಲೇಬೇಕು).

ನೇಮಕಾತಿ ಪ್ರಕ್ರಿಯೆ

ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳು ಪರಿಗಣಿಸಿ ಮೀಸಲಾತಿ ಆಧಾರದಲ್ಲಿ 1:10 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ತಯಾರಿಸಲಾಗುತ್ತದೆ. ಪಟ್ಟಿಯಲ್ಲಿರುವ ಹೆಸರು ಪಡೆದವರಿಗೆ ಇಲಾಖೆ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಕನಿಷ್ಠ ಶೇ. 50 ರಷ್ಟು ಅಂಕಗಳನ್ನು ಅಭ್ಯರ್ಥಿಗಳು ಪಡೆಯಲೇಬೇಕು.

ಅರ್ಜಿ ಶುಲ್ಕದ ವಿವರ ಹೀಗಿದೆ: ಸಾಮಾನ್ಯ ಅರ್ಹತೆ, 2ಎ, 2ಬಿ, 3ಎ, 3ಬಿ, ಮಾಜಿ ಸೈನಿಕ- ₹250 ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷ ಚೇತನರು- ಶುಲ್ಕ ವಿನಾಯಿತಿ. ಆನ್​ಲೈನ್​ ಮೂಲಕವೇ ಶುಲ್ಕ ಪಾವತಿ ಮಾಡಬೇಕು.

ಇದನ್ನು ಓದಿದ್ದೀರಾ? ಬೆಳಗಾವಿ | ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾದ ತಹಶೀಲ್ದಾರ್ ಆಪ್ತ ಸಹಾಯಕ

ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ: 29 ನವೆಂಬರ್ 2024
ಶುಲ್ಕ ಪಾವತಿಗೆ ಕೊನೆ ದಿನಾಂಕ: 30 ನವೆಂಬರ್ 2024

ವಯೋಮಿತಿ: 18 ರಿಂದ 43 ವರ್ಷದ ಒಳಗಿನವರಿಗೆ ಅವಕಾಶ

ನೋಟಿಫಿಕೇಶನ್‌ನ ಪ್ರತಿ ಓದಲು ಈ ಕೆಳಗಿನ ಫೈಲ್ ಲಿಂಕ್ ಕ್ಲಿಕ್ ಮಾಡಿ:

ಹೆಚ್ಚಿನ ವಿವರಗಳಿಗೆ ಕರ್ನಾಟಕದ ಲೋಕಾಯುಕ್ತ ಇಲಾಖೆಯ ಅಧಿಕೃತ ವೆಬ್​ಸೈಟ್: Karnataka Lokayukta ಅನ್ನು ಭೇಟಿ ನೀಡಬಹುದು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯ ಬಜೆಟ್; ದಾವಣಗೆರೆಗೆ ಕೊಟ್ಟಿದ್ದೆಷ್ಟು? ನಿರೀಕ್ಷೆಗಳೇನಿತ್ತು

2026–27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಿಗೆ ವಿವಿಧ...

ದಾವಣಗೆರೆ ಬಂದ್ | ಒಳಮೀಸಲಾತಿಯಿಲ್ಲದೆ ನೇಮಕಾತಿ ಬೇಡ: ಗೊಂದಲ ಪರಿಹಾರಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ

ಒಳ ಮೀಸಲಾತಿ ಜಾರಿಗೊಳಿಸಿ ಸರಕಾರಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕು, ಒಳಮೀಸಲಾತಿ ಸಂಬಂಧ...

ದಾವಣಗೆರೆ | ಗ್ಯಾರಂಟಿಗಳು ಮಹಿಳೆಯರ ಆರ್ಥಿಕ ಶಕ್ತಿ ಹಾಗೂ ಬಸವಣ್ಣನ ದಾಸೋಹ ತತ್ವ: ಮುಖಂಡರ ಅಭಿಮತ

ಗ್ಯಾರಂಟಿ ಯೋಜನೆಯ ಅನುಷ್ಠಾನಗಳ ಕಾರ್ಯಕ್ರಮ ಮತ್ತು ಜಿಲ್ಲಾಮಟ್ಟದ ಕಾರ್ಯಗಳು ಎಲ್ಲಾ ಜಿಲ್ಲಾ...

ದಾವಣಗೆರೆ | ಮೀಸಲಾತಿಯ ಬಹುಪಾಲು ಕಬಳಿಸಿದ್ದು ಒಳಮೀಸಲಾತಿ ವಿರೋಧಿಗಳು; ಮಾಜಿ ಸಚಿವ ಆಂಜನೇಯ ಆಕ್ರೋಶ

"56 ಸಾವಿರ ಹುದ್ದೆಗಳ ಭರ್ತಿಗೆ ಒಳಮೀಸಲಾತಿ ಇಲ್ಲದೆ ನೇಮಕಾತಿ ನಡೆದರೆ ಬಹುಪಾಲು...