ಬೆಂಗಳೂರು | ಚನ್ನಗಿರಿಯಲ್ಲಿ ಯುವಕನ ಕಸ್ಟಡಿ ಸಾವು: ಸತ್ಯಶೋಧನಾ ವರದಿ ಬಿಡುಗಡೆ

Date:

ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದ ಯುವಕನ ಕಸ್ಟಡಿ ಸಾವು ಕುರಿತು ಆಲ್ ಇಂಡಿಯಾ ಲಾಯರ್ಸ್‌ ಅಸೋಸಿಯೇಷನ್ ಫಾರ್ ಜಸ್ಟೀಸ್, ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್, ಬಹುತ್ವ ಕರ್ನಾಟಕ ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ನಡೆಸಿದ ಸತ್ಯಶೋಧನಾ ವರದಿಯನ್ನು ಬೆಂಗಳೂರಿನಲ್ಲಿ ಇಂದು ಬಿಡುಗಡೆಗೊಳಿಸಲಾಯಿತು.

ದಾವಣಗೆರೆಯ ಚನ್ನಗಿರಿಯಲ್ಲಿ 2024ರ ಮೇ 24ರಂದು ಜೂಜಾಟದ ಆರೋಪದ ಮೇಲೆ ಬಂಧಿತನಾಗಿದ್ದ ಆದಿಲ್ ಎಂಬ ಯುವಕ ಪೊಲೀಸ್ ಕಸ್ಟಡಿಯಲ್ಲಿ ಸಾವನಪ್ಪಿದ್ದರು. ಆದರೆ, ಆತನ ಕುಟುಂಬಕ್ಕೆ ಪೋಸ್ಟ್ ಮಾರ್ಟಮ್ ಆಗುವ ತನಕ ಇದರ ಮಾಹಿತಿ ಇರಲಿಲ್ಲ.

ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಪೊಲೀಸ್ ಹಿಂಸಾಚಾರ ನಡೆದಿದ್ದಲ್ಲಿ, ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದರು. ಕೆಲವು ಪ್ರತಿಭಟನಾಕಾರರು ಪೊಲೀಸ್ ಹಾಗು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ಕೂಡ ನಡೆಸಿದ್ದರು. ಪ್ರತಿಭಟನೆ ನಡೆಸಿದ, 300 ಜನರ ವಿರುದ್ಧ ಪೊಲೀಸರು ಕಾನೂನು ಬಾಹಿರ ಸಭೆ ನಡೆಸಿ, ಗಲಭೆ ಮತ್ತು ಹಾನಿ ಮಾಡಿರುವ ಕಾನೂನಿನ ಅಡಿಯಲ್ಲಿ 6 ಎಫ್‌ಐಆರ್‍‌ಗಳನ್ನು ದಾಖಲಿಸಿದ ನಂತರ, ಆದಿಲ್ ರವರ ಸಾವಿನ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಘಟನೆಯ ಕುರಿತು ಸುಮಾರು ನಾಲ್ಕು ಸಂಘಟನೆಗಳು ಸೇರಿ ನಡೆಸಿದ ಸತ್ಯಶೋಧನಾ ವರದಿಯನ್ನು ಇಂದು(ಆ.30) ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಬಿಡುಗೊಳಿಸಲಾಯಿತು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸುತ್ತ ಮಾತನಾಡಿದ ಎಪಿಸಿಆರ್ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ನಿಝಾಮುದ್ದೀನ್, “ಆದಿಲ್ ಅವರನ್ನು ಪೊಲೀಸರು ಬಂಧಿಸಿದ ಕಾರಣಗಳಾಗಲೀ, ಬಂಧನದಲ್ಲಿದ್ದಾಗ ಸಾವನ್ನಪ್ಪಿದ ಮಾಹಿತಿಯಾಗಲೀ ಅವರ ಕುಟುಂಬಕ್ಕೆ ತಡರಾತ್ರಿಯವರೆಗೂ ತಿಳಿದಿರಲಿಲ್ಲ. ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಕೂಡ ಇಲ್ಲದಿದ್ದ ಕಾರಣ ಸಾವಿನ ಬಗ್ಗೆ ಇದು ಹಲವಾರು ಪ್ರಶ್ನೆಗಳನ್ನೆಬ್ಬಿಸಿತ್ತು. ಈ ಘಟನೆಯಿಂದ ಚನ್ನಗಿರಿಯ ನಿವಾಸಿಗಳ ನಡುವೆ ಆತಂಕ ಉಂಟಾಗಿದ್ದು, ಕೆಲವರು ಈ ಚನ್ನಗಿರಿಯನ್ನೇ ಬಿಟ್ಟು ಹೋಗಿರುವುದು ಸಹ ನಿಜ” ಎಂದು ಮಾಹಿತಿ ಹಂಚಿಕೊಂಡರು.

ಚನ್ನಗಿರ1

ಆಲ್ ಇಂಡಿಯಾ ಲಾಯರ್ಸ್‌ ಅಸೋಸಿಯೇಷನ್ ಫಾರ್ ಜಸ್ಟೀಸ್ ಸದಸ್ಯರಾದ ಆಮೆಯ ಬೊಕಿಲ್ ಮಾತನಾಡಿ, ಠಾಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇಲ್ಲದಿದ್ದದ್ದು ಸರ್ವೋಚ್ಚ ನ್ಯಾಯಾಲದ ಆದೇಶಗಳ ನೇರ ಉಲ್ಲಂಘನೆ. ಬಂಧನದಲ್ಲಿ ಕೈದಿಗಳು ಮೃತಪಟ್ಟರೆ ಕಾನೂನು ಪ್ರಕಾರ ಮ್ಯಾಜಿಸ್ಟ್ರೇಟ್ ಮೂಲಕ ಒಂದು ತನಿಖೆ ನಡೆಸಬೇಕಿದೆ. ಆದರೆ ಇದನ್ನು ಮಾಡಿಲ್ಲ” ಎಂದು ತಿಳಿಸಿದರು.

“ಆದಿಲ್ ಅವರ ಸಾವು ಅಸ್ವಾಭಾವಿಕ ಸಾವೆಂದು ದಾಖಲಾಗಿದ್ದರೂ, ಅವರು ಮರಣ ಅನಾರೋಗ್ಯದಿಂದಾಗಿದ್ದ ಅಥವಾ ಪೊಲೀಸ್ ಹಿಂಸೆಯಿಂದಾಗಿದ್ದ ಎಂದು ಈವರೆಗೂ ತಿಳಿದಿಲ್ಲ. ಘಟನೆಯಾಗಿ ಮೂರು ತಿಂಗಳಾದರೂ, ಅವರ ಸಾವಿಗೆ ಸಂಬಂಧಿಸಿದಂತೆ ಈವರೆಗೆ ಎಫ್‌ಐಆರ್ ಕೂಡ ದಾಖಲಾಗಿಲ್ಲ ಎಂಬುದು ನಮ್ಮ ಸತ್ಯಶೋಧನೆಯ ವೇಳೆ ತಿಳಿದುಬಂದಿದೆ” ಹೇಳಿದರು.

ಪಿಯುಸಿಎಲ್‌ನ ಕಿಶೋರ್ ಗೋವಿಂದ್ ಮಾತನಾಡಿ, “ಆದಿಲ್ ಅವರ ಕುಟುಂಬಸ್ಥರ ಪ್ರಕಾರ, ಘಟನೆಯ ನಂತರ ಪೊಲೀಸರು 47 ಜನರನ್ನು ಬಂಧಿಸಿದ್ದಾರೆ. ಆದರೆ ಬಂಧಿತರಲ್ಲಿ ಹಲವರು ಘಟನೆ ನಡೆದಾಗ ಅಲ್ಲಿ ಇರಲೇ ಇಲ್ಲ. ಈ 47 ಜನರ ಕುಟುಂಬಗಳೊಂದಿಗೆ ನಡೆಸಿದ ಸಂದರ್ಶನಗಳ ವೇಳೆ, ಪೊಲೀಸರು ಇವರೆಲ್ಲರನ್ನು ಕಾನೂನು ಬಾಹಿರವಾಗಿ ಬಂಧಿಸಿರುವುದು ತಿಳಿದು ಬಂದಿದೆ” ಎಂದು ಹೇಳಿದರು.

ಇದನ್ನು ಓದಿದ್ದೀರಾ? ಸೌಜನ್ಯ ಪ್ರಕರಣ| ಸಂತೋಷ್‌ ಪರ ತೀರ್ಪು ಪ್ರಶ್ನಿಸಿದ್ದ ಅರ್ಜಿ ವಜಾ; ʼನ್ಯಾಯ ಮತ್ತೊಮ್ಮೆ ನಮ್ಮ ಕೈ ಹಿಡಿದಿದೆʼ ಎಂದ ಸುಧಾಕರ ರಾವ್‌

“ಕಸ್ಟಡಿ ಸಾವು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಬಂಧಿತರಾದ ಹಲವಾರು ಜನ ಬಡ ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬದವರಾಗಿದ್ದು, ಅವರ ಬಂಧನವು ಅವರ ಕುಟುಂಬದ ಮೇಲೆ ತೀವ್ರ ಪರಿಣಾಮ ಉಂಟು ಮಾಡಿದೆ” ಹೇಳಿದರು.

ಪಿಯುಸಿಎಲ್‌ನ ಐಶ್ವರ್ಯ ರವಿಕುಮಾರ್ ಮಾತನಾಡಿ, ಸರ್ಕಾರವು ಆದಿಲ್ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು. ಮಕ್ಕಳ ಶಿಕ್ಷಣಕ್ಕೆ ನೆರವು ಕಲ್ಪಿಸಬೇಕು ಹಾಗೂ ಕುಟುಂಬದವರಿಗೆ ಉದ್ಯೋಗಾವಕಾಶ ಕೂಡಲೇ ಕಲ್ಪಿಸಬೇಕು” ಎಂದು ಆಗ್ರಹಿಸಿದರು.

“ಆದಿಲ್ ಅವರ ಕಸ್ಟಡಿ ಸಾವಿನ ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿರುವ ಲೋಪದೋಷಗಳು ಎದ್ದು ಕಾಣುತ್ತವೆ. ಈ ಕುರಿತು ಸರ್ಕಾರವು ಕೂಡಲೇ ಕ್ರಮ ಕೈಗೊಳ್ಳ ಬೇಕು. ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಅಮಾಯಕರ ವಿರುದ್ಧ ಹಾಕಿರುವ ಕೇಸನ್ನು ಹಿಂದೆಗೆದುಕೊಳ್ಳಬೇಕು” ಎಂಬುದು ನಮ್ಮ ಒತ್ತಾಯ ಎಂದು ತಿಳಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...