ಬೆಂಗಳೂರಿನ ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಹಜ್ ಭವನದಲ್ಲಿ ಶನಿವಾರ ಸಂಜೆ ವೇಳೆ ಬೆಂಕಿ ಅವಘಡ ಸಂಭವಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್ನಿಂದಾಗಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
Seems to be some kind of a fire incident at Haj Bhavan, Thanisandra Main Road.@thenewsminute @timesofindia @ChristinMP_ @IndianExpress @Lolita_TNIE @StateNewsIn @BangaloreMirror @ndtv @krishnabgowda @BBMPAdmn @DeccanHerald @BBMPCOMM pic.twitter.com/F7Bjvr7oio
— Mohammed Zeeshan Fatmi (@VT_ZEESHAN) October 28, 2023
ಘಟನೆ ಸಂಜೆ 5ರ ಸುಮಾರಿಗೆ ನಡೆದಿದ್ದು, ಇಂದು ರಜೆ ಇದ್ದುದ್ದರಿಂದ ಸಿಬ್ಬಂದಿಗಳು ಭವನದಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಈ ದಿನ.ಕಾಮ್ ಹಜ್ ಭವನದ ಸಿಬ್ಬಂದಿಯೋರ್ವರನ್ನು ಸಂಪರ್ಕಿಸಿದಾಗ, ‘ಭವನದ ಮೊದಲ ಮಹಡಿಯಲ್ಲಿ ನಾಲ್ವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಘಟನೆ ನಡೆದ ಕೂಡಲೇ ಕಾರ್ಮಿಕರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದಿದ್ದು, ಬೆಂಕಿ ನಂದಿಸಿದ್ದಾರೆ. ಯಾರಿಗೂ ಏನೂ ಆಗಿಲ್ಲ. ಒಳಗೆ ಯಾವ ವಸ್ತುವಿಗೆಲ್ಲ ಬೆಂಕಿ ಹೊತ್ತಿಕೊಂಡಿದೆ ಎಂಬ ಬಗ್ಗೆ ಮಾಹಿತಿ ಇಲ್ಲ’ ಎಂದು ತಿಳಿಸಿದರು.





