ಬೆಳ್ತಂಗಡಿ | ವಿಚಾರಣೆಗೆ ಹೋದ ಪೊಲೀಸರನ್ನೇ ‘ನಕ್ಸಲ್’ ಎಂದ ವ್ಯಕ್ತಿ, ಅದನ್ನೇ ಸುದ್ದಿ ಮಾಡಿದ ಮಾಧ್ಯಮಗಳು!

Date:

ಜಮೀನು ವ್ಯಾಜ್ಯ ಪ್ರಕರಣವೊಂದರ ತನಿಖೆಗೆ ರಾತ್ರಿ ವೇಳೆ ಮನೆಗೆ ಆಗಮಿಸಿದ್ದ ಪೊಲೀಸರನ್ನೇ ‘ನಕ್ಸಲ್’ ಎಂದು ಆತಂಕಗೊಂಡು ಪೊಲೀಸ್ ಕಂಟ್ರೋಲ್ ರೂಂಗೆ ತಿಳಿಸಿ, ಆ ಬಳಿಕ ಎರಡೂ ಕಡೆಯ ಪೊಲೀಸರು ವ್ಯಕ್ತಿಯ ಮನೆಗೆ ಬಂದ ಘಟನೆ ದಕ್ಷಿಣ ಕನ್ನಡ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ನಾರಾವಿಯ ಕುತ್ಲೂರು ಎಂಬಲ್ಲಿ ನಡೆದಿದೆ.

ನಾರಾವಿಯ ಕುತ್ಲೂರು ನಿವಾಸಿ ಜೋಸಿ ಆಂಟೋನಿ ಎಂಬಾತನಿಂದ ಈ ಗೊಂದಲವುಂಟಾಗಿದೆ. ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಜೋಸಿ ಅಂಟೋನಿ ವಿರುದ್ಧ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ವಂಚನೆ ಪ್ರಕರಣವೊಂದು ದಾಖಲಾಗಿತ್ತು. ಬೆಂಗಳೂರು ನಿವಾಸಿ ಶರತ್ ಕುಮಾರ್ ಎಂಬುವವರು ಜಮೀನು ಮಾರಾಟ ಮಾಡುವ ವಿಚಾರದಲ್ಲಿ ಜೋಸಿ ಆಂಟೋನಿ ವಂಚನೆ ಮಾಡಿದ್ದಾರೆ ಎಂದು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

josi
‘ನಕ್ಸಲ್’ ಸುದ್ದಿಯ ಬಳಿಕ ಜೋಸಿ ಆಂಟೋನಿ ಮನೆ ಪರಿಶೀಲನೆಗೆ ಬಂದಿದ್ದ ಪೊಲೀಸರು

ಈ ವಿಚಾರವಾಗಿ ಮೂಡುಬಿದಿರೆ ಪೊಲೀಸರು ಬೆಳಗ್ಗೆಆತನ ಮನೆಗೆ ತೆರಳಿದ್ದರು. ಯಾರೂ ಇಲ್ಲದ್ದನ್ನು ಗಮನಿಸಿ ಆ ಬಳಿಕ ನಿನ್ನೆ ರಾತ್ರಿ(ನ.21) 9.30ರ ಸುಮಾರಿಗೆ ಜೋಸಿ ಮನೆಗೆ ಹೋಗಿದ್ದರು. ಈ ವೇಳೆ ಪೊಲೀಸರನ್ನ ಕಂಡ ಜೋಸಿ ಅಂಟೋನಿ, ನಕ್ಸಲರು ಬಂದಿದ್ದಾರೆಂದು ಆತಂಕಗೊಂಡು ಮನೆ ಬಾಗಿಲು ತೆರೆಯಲಿಲ್ಲ. ಮನೆ ಒಳಗಿನಿಂದ ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡಿ ಮನೆಗೆ ನಕ್ಸಲ್ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ನಕ್ಸಲ್’ ಎಂಬ ಹೆಸರು ಕೇಳುತ್ತಲೇ ಜಾಗೃತಗೊಂಡ ವೇಣೂರು ಮತ್ತು ಬೆಳ್ತಂಗಡಿ ಪೊಲೀಸರು ಜೋಸಿ ಮನೆಗೆ ರಾತ್ರೋರಾತ್ರಿ ದೌಡಾಯಿಸಿದ್ದಾರೆ. ಅಲ್ಲದೇ, ರಾತ್ರಿ ಜೋಸಿ ಮನೆಯ ಸುತ್ತಮುತ್ತ ಪರಿಶೀಲನೆ ಕೂಡ ನಡೆಸಿದ್ದಾರೆ.

ಇಂದು ಬೆಳಗ್ಗೆ ಕೆಲವು ಮಾಧ್ಯಮಗಳು ಇದರ ಸತ್ಯಾಸತ್ಯತೆಯನ್ನು ಅರಿಯದೆ ಹಾಗೂ ಪೊಲೀಸರ ವಿಚಾರಣೆಗೂ ಮುನ್ನವೇ ಸುದ್ದಿ ಬಿತ್ತರಿಸಿದ್ದು, ‘ಮನೆ ಬಾಗಿಲು ತೆಗೆಯಿರಿ ಮಂಗಳೂರಿನ ನಕ್ಸಲ್​​​ ಪೀಡಿತ ಪ್ರದೇಶದ ಒಂಟಿ ಮನೆಗೆ ಅಪರಿಚಿತ ಗ್ಯಾಂಗ್ ಭೇಟಿ’ ಎಂಬಿತ್ಯಾದಿ ಶೀರ್ಷಿಕೆಯಲ್ಲಿ ವರದಿ ಮಾಡಿದ್ದರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹರಿದಾಡಿತ್ತು.

naxal news

ಆದರೆ ಈ ಬಗ್ಗೆ ಇಂದು (ನ.22) ಸರಿಯಾದ ವಿಚಾರಣೆ ನಡೆದಿದ್ದು, ಮನೆಗೆ ಬಂದದ್ದು ಮೂಡುಬಿದಿರೆ ಪೊಲೀಸರು. ಪ್ರಕರಣವೊಂದರ ದೂರಿನ ಹಿನ್ನೆಲೆಯಲ್ಲಿ ಜೋಸಿ ಅಂಟೋನಿಯ ಮನೆಗೆ ಪೊಲೀಸರು ಬಂದಿದ್ದರು ಎನ್ನುವ ವಿಚಾರ ಬಯಲಾಗಿದೆ. ಆ ಮೂಲಕ ನಕ್ಸಲರ ಆಗಮನ ಸುದ್ದಿಯ ಸತ್ಯಾಸತ್ಯತೆ ಹೊರಬಿದ್ದಿದೆ. ಜೋಸಿ ಆಂಟೋನಿಯ ಹೇಳಿಕೆಯಿಂದ ಪೊಲೀಸರು ಹಾಗೂ ನಾಗರಿಕರು ಕೆಲಕಾಲ ಆತಂಕಗೊಂಡಿದ್ದರು.

ಈ ಬಗ್ಗೆ ಈ ದಿನ.ಕಾಮ್ ಮೂಡಬಿದಿರೆ ಪೊಲೀಸರನ್ನು ಸಂಪರ್ಕಿಸಿದಾಗ, ಜಮೀನು ವ್ಯಾಜ್ಯದ ವಿಚಾರವಾಗಿ ಜೋಸಿ ಆಂಟೋನಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆತ ಬೆಳಗ್ಗೆ ಇರಲಿಲ್ಲ ಎಂದು ನಮ್ಮ ಠಾಣೆಯ ಸುಮಾರು 3-4 ಸಿಬ್ಬಂದಿಗಳು ದೂರುದಾರರ ಜೊತೆಗೆ ರಾತ್ರಿ ವೇಳೆಗೆ ಹೋಗಿದ್ದೆವು. ಆದರೆ ಬಾಗಿಲು ತೆರೆಯದಿದ್ದಕ್ಕೆ ಹಿಂದೆ ಬಂದಿದ್ದೆವು. ಆದರೆ ಆತ ‘ನಕ್ಸಲ್’ ಅಂತ ಸುದ್ದಿ ಹಬ್ಬಿಸಿದ್ದಾನೆ. ಇದು ನಮಗೆ ಗೊತ್ತಾದ ಕೂಡಲೇ ವೇಣೂರು ಹಾಗೂ ಬೆಳ್ತಂಗಡಿ ಪೊಲೀಸರ ಸಹಿತ ಎಸ್‌ಪಿಯವರಿಗೂ ಮಾಹಿತಿ ನೀಡಿದ್ದೇವೆ. ಆತ ಬೇಕೆಂತಲೇ ಈ ರೀತಿ ನಡೆದುಕೊಂಡಿದ್ದಾನಾ ಗೊತ್ತಿಲ್ಲ’ ಎಂದು ತಿಳಿಸಿದರು.

WhatsApp Image 2023 11 22 at 5.58.10 PM
ಪೊಲೀಸರಿಂದ ಸ್ಪಷ್ಟೀಕರಣ

ಈ ಬಗ್ಗೆ ಈ ದಿನ.ಕಾಮ್ ವೇಣೂರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶ್ರೀ ಶೈಲ ಅವರನ್ನು ಸಂಪರ್ಕಿಸಿದಾಗ, ನಮಗೆ ರಾತ್ರಿ ನಕ್ಸಲರು ಇರಬಹುದು ಎಂದು ಅನುಮಾನಿಸಿ ಜೋಸಿ ಆಂಟೋನಿ ಎಂಬುವವರು ಕರೆ ಮಾಡಿದ್ದರು. ಮಾಹಿತಿ ತಿಳಿದ ತಕ್ಷಣವೇ ಆತನ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದೇವೆ. ಬಳಿಕ ರಾತ್ರಿ ಸ್ಥಳೀಯ ಪ್ರದೇಶಗಳಲ್ಲೂ ಹುಡುಕಾಟ ನಡೆಸಿದ್ದೆವು. ಏನೂ ಗೊತ್ತಾಗಲಿಲ್ಲ. ಇಂದು ವಿಚಾರಣೆ ನಡೆಸಿದಾಗ ಆತನ ಮನೆಗೆ ರಾತ್ರಿ ಹೋಗಿದ್ದು ಮೂಡಬಿದಿರೆ ಪೊಲೀಸರು ಎಂದು ಗೊತ್ತಾಗಿದೆ. ಈ ಬಗ್ಗೆ ಜೋಸಿ ಆಂಟೋನಿ ಅವರಿಗೂ ತಿಳಿಸಿದ್ದೇವೆ. ಜಮೀನು ವ್ಯಾಜ್ಯದ ವಿಚಾರವಾಗಿ ಅವರು ಮನೆಗೆ ಹೋಗಿದ್ದರು. ಈ ಬಗ್ಗೆ ಮೂಡಬಿದಿರೆ ಠಾಣೆಗೆ ಹೋಗುವಂತೆ ತಿಳಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...