ದೂರದ ಕರಾವಳಿಯಿಂದ ಬೆಂಗಳೂರಿಗೆ ಉದ್ಯೋಗ ಮತ್ತು ವಿವಿಧ ಉದ್ದೇಶಗಳಿಗಾಗಿ ಬಂದು ನೆಲೆಸಿರುವ ಬ್ಯಾರಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಕೋನದಿಂದ ಸ್ಥಾಪಿಸಲಾಗಿರುವ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ನೂತನ ಕಚೇರಿ ಉದ್ಘಾಟನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನವೆಂಬರ್ 4ರಂದು ಸಂಜೆ 5ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷರಾದ ಶಬೀರ್ ಬ್ರಿಗೇಡ್ ತಿಳಿಸಿದ್ದಾರೆ.
ಮಂಗಳವಾರ ಸಂಜೆ 5ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ನಲ್ಲಿರುವ ಹಿಂದೂಸ್ತಾನ್ ಕಾಂಪ್ಲೆಕ್ಲ್ನಲ್ಲಿ ಕಚೇರಿಯು ಉದ್ಘಾಟನೆಗೊಳ್ಳಲಿದ್ದು, ರಾಜ್ಯದ ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಬ್ಯಾರಿ ಸಮುದಾಯ ಅನಿವಾಸಿ ಉದ್ಯಮಿ ಝಕರಿಯಾ ಜೋಕಟ್ಟೆ, ಹಿರಿಯ ಪತ್ರಕರ್ತರಾದ ಬಿ ಎಂ ಹನೀಫ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಂ ಎ ಗಫೂರ್ ಹಾಗೂ ಕಾರ್ಮಿಕರ ಕನಿಷ್ಠ ವೇತನ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಹಿದ್ ತೆಕ್ಕಿಲ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಶಬೀರ್ ಬ್ರಿಗೇಡ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಪೊಲೀಸ್, ಸರ್ಕಾರಿ ಸೇವೆ ಸೇರ್ಪಡೆಗೆ ತರಬೇತಿ ಯೋಜನೆ: ಕರಾವಳಿಗರು ಮನಸ್ಸು ಮಾಡುತ್ತಿಲ್ಲವೇಕೆ?
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಬೆಂಗಳೂರಿನ ಬ್ಯಾರಿ ಸಮುದಾಯದ ಹಿರಿಯ ವಕೀಲರಾದ ಕಮಾಲ್, ಅಡ್ವೊಕೇಟ್ ಮುಝಫ್ಫರ್ ಅಹ್ಮದ್, ಅಡ್ವೊಕೇಟ್ ಲತೀಫ್, ಬೆಂಗಳೂರಿನ ಸುಲ್ತಾನ್ ಗೋಲ್ಡ್ ನಿರ್ದೇಶಕರಾದ ರಿಯಾಝ್, ಎಂಪೈರ್ ಗ್ರೂಪ್ ಎಂ ಡಿ ಶಾಕಿರ್, ಎಂಫಾರ್ ಕನ್ಸ್ಸ್ಟ್ರಕ್ಷನ್ಸ್ ಮ್ಯಾನನೇಜಿಂಗ್ ಡೈರೆಕ್ಟರ್ ರಿಝ್ವಾನ್, ಡ್ರೀಮ್ ಡೀಲ್ ಗ್ರೂಪ್ನ ಎಂ ಡಿ ಸುಹೇಲ್, ಎಕ್ಸ್ ಟೆನ್ ಗ್ರೂಪ್ನ ಮಾಲೀಕರಾದ ದಾವೂದ್, ಸೀಮಾ ಎಂಟರ್ ಪ್ರೈಸಸ್ನ ಮುಖ್ಯಸ್ಥರಾದ ಆರಿಫ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮರ್ ಯು ಹೆಚ್, ಯುವ ರಾಜಕೀಯ ಮುಖಂಡ ಸುಹೈಲ್ ಕಂದಕ್, ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಸಲಹಾ ಸಮಿತಿ ಸದಸ್ಯರಾದ ಹನೀಫ್ ಖಾನ್ ಕೊಡಾಜೆ, ಹ್ಯಾಮರ್ & ನೇಲ್ನ ಎಂಡಿ ಸರ್ಫರಾಝ್, ಹಿಂದುಸ್ತಾನ್ ಹೋಟೆಲ್ ಮಾಲೀಕರಾದ ಉಮೈರ್ ಅವರು ಭಾಗವಹಿಸಲಿದ್ದಾರೆ ಎಂದು ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಶಬೀರ್ ಬ್ರಿಗೇಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





