ಬಗೆದಷ್ಟು ಬಿಚ್ಚಿಕೊಳ್ಳುತ್ತಿದೆ ಚೈತ್ರಾ ಪ್ರಕರಣ | ಬಿಜೆಪಿ ಐಟಿ ಸೆಲ್‌ನಲ್ಲಿದ್ದ ಸ್ನೇಹಿತೆಯ ಆಡಿಯೋ ವೈರಲ್

Date:

  • ಕುಂದಾಪುರ ಮೂಲದ ಚೈತ್ರಾ ಸ್ನೇಹಿತೆ ಶ್ರುತಿ ತುಂಬ್ರಿ ಮಾತನಾಡಿರುವ ಆಡಿಯೋ
  • ಗೋವಿಂದಬಾಬು ಪೂಜಾರಿ ಪರ ತಂಡವೊಂದರಿಂದ ಸರ್ವೇ ಬಗ್ಗೆ ‘ಡೀಲ್ ಮಾತುಕತೆ’

ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಉದ್ಯಮಿಯೋರ್ವರಿಗೆ 5 ಕೋಟಿ ವಂಚನೆ ಮಾಡಿರುವ ಚೈತ್ರಾ ಕುಂದಾಪುರ ಮತ್ತು ತಂಡದವರ ಪ್ರಕರಣವು ಈಗ ಬಗೆದಷ್ಟೂ ಬಿಚ್ಚಿಕೊಳ್ಳುತ್ತಿದೆ.

ಸದ್ಯ ಇದು ಬಿಜೆಪಿ ಕಚೇರಿಗೂ ತಲುಪಿದ್ದು, ಬಿಜೆಪಿ ಐಟಿ ಸೆಲ್‌ನಲ್ಲಿ ಕೆಲಸಕ್ಕಿದ್ದ ಚೈತ್ರಾ ಕುಂದಾಪುರ ಸ್ನೇಹಿತೆಯ ಆಡಿಯೋವೊಂದು ಈಗ ವೈರಲ್ ಆಗುತ್ತಿದೆ.

ಚೈತ್ರಾ ಸ್ನೇಹಿತೆ ಕುಂದಾಪುರ ಮೂಲದ ಶ್ರುತಿ ತುಂಬ್ರಿ, ವಂಚನೆಗೊಳಗಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿಯ ಸ್ನೇಹಿತರೋರ್ವರ ಜೊತೆಗೆ ಮಾತನಾಡಿರುವ ಆಡಿಯೋ ವೈರಲಾಗಿದ್ದು, ಗೋವಿಂದಬಾಬು ಪೂಜಾರಿ ಪರ ಸರ್ವೇ ನಡೆಸಿ, ‘ಪಾಸಿಟಿವ್ ರಿಪೋರ್ಟ್‌’ ನೀಡುವ ಬಗ್ಗೆ ‘ಡೀಲ್ ಮಾತುಕತೆ’ ಇದರಲ್ಲಿ ದಾಖಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ಒಂದು ತಂಡ ಸರ್ವೇಗಳನ್ನು ನಡೆಸುತ್ತದೆ. ಆ ತಂಡದ ಬಗ್ಗೆ ನಿಮಗೇನೂ ಹೇಳುವುದಿಲ್ಲ. ಆದರೆ ನೀವು ಈ ವಿಷಯದಲ್ಲಿ ನನ್ನನ್ನು ಕಣ್ಮುಚ್ಚಿಕೊಂಡು ನಂಬಬಹುದು’ ಎಂದು ಗೋವಿಂದ ಬಾಬು ಪೂಜಾರಿಯ ಸ್ನೇಹಿತರೋರ್ವರಿಗೆ ತಿಳಿಸಿರುವುದು ಆಡಿಯೋದಲ್ಲಿ ದಾಖಲಾಗಿದೆ.

shruti tumbri

ಶ್ರುತಿ ತುಂಬ್ರಿ

‘ಈಗ ಸರ್ವೇ ಮಾಡುವ ಬಗ್ಗೆ ತಿಳಿಸಿದ ತಂಡವೇ ನಾಳೆಯ ದಿನ ಬಿಜೆಪಿಗೂ ಸರ್ವೇ ಮಾಡುತ್ತದೆ. ಆ ತಂಡದಲ್ಲಿ ಕೆಲವರನ್ನು ನಾನು ಹೈಜಾಕ್ ಮಾಡಿದ್ದೀನಿ. ಅಂದರೆ ಆ ತಂಡದಲ್ಲಿ ಕೆಲವು ಸ್ನೇಹಿತರಿದ್ದಾರೆ. ಅವರಿಗೋಸ್ಕರ(ಗೋವಿಂದಬಾಬು ಪೂಜಾರಿ) ನಾಲ್ಕೈದು ಜನರ ಜೊತೆಗೆ ಮಾತನಾಡುತ್ತೇನೆ. ಅವರ ವಿವರಗಳನ್ನು ಬಹಿರಂಗವಾಗಿ ಹೇಳುವುದಕ್ಕಾಗಲ್ಲ. ನಿಮ್ಮಂಥ ಸಾವಿರ ಜನ ಅಭ್ಯರ್ಥಿಗಳು ಇರ್ತಾರೆ. ಆದರೂ ಕೊನೆಗೆ ಬಿಜೆಪಿ ಜೊತೆಗೆ ಕೆಲಸ ಮಾಡುತ್ತಾರೆ” ಎಂದು ಕರೆ ಮಾಡಿ ಮಾತನಾಡಿದಾಗಿನ ವಿವರಗಳು ಆಡಿಯೋದಲ್ಲಿ ದಾಖಲಾಗಿದೆ.

ಅಲ್ಲದೇ, ಆಡಿಯೋದಲ್ಲಿ ಹಣ ನೀಡುವ ಬಗ್ಗೆ ಹಾಗೂ ತೆಗೆದುಕೊಳ್ಳುವ ಪ್ರದೇಶದ ಬಗ್ಗೆಯೂ ಮಾತುಕತೆ ನಡೆಸಿದ್ದ, ಅದರಲ್ಲಿ ಎಷ್ಟು ಕೊಡುವುದಕ್ಕೆ ಹೇಳಿದ್ದಾರೆ ಎಂದು ಕೇಳಿದ್ದಕ್ಕೆ ಗೋವಿಂದಬಾಬು ಪೂಜಾರಿ ಸ್ನೇಹಿತ 3 ಕೊಡಲು ತಿಳಿಸಿದ್ದಾರೆ ಎಂದು ಉತ್ತರಿಸಿದ್ದು, ಬೆಂಗಳೂರಿನ ಕಾಡುಮಲ್ಲೇಶ್ವರ ದೇವಸ್ಥಾನದ ಹಿಂಬದಿಯಲ್ಲಿರುವ ಕಾಫಿ ಡೇಗೆ ಬರುವಂತೆ ಬಿಜೆಪಿ ಐಟಿ ಸೆಲ್‌ನಲ್ಲಿ ಕೆಲಸಕ್ಕಿದ್ದ ಚೈತ್ರಾ ಕುಂದಾಪುರ ಸ್ನೇಹಿತೆ ಶ್ರುತಿ ತುಂಬ್ರಿ ತಿಳಿಸಿರುವುದು ದಾಖಲಾಗಿದೆ.

ಚೈತ್ರಾ ಕುಂದಾಪುರ ಪ್ರಕರಣಕ್ಕೂ ಈ ಡೀಲ್ ಮಾತುಕತೆಗೂ ಏನು ಸಂಬಂಧ ಎಂದು ಇನ್ನಷ್ಟೇ ಸಿಸಿಬಿ ಪೊಲೀಸರ ವಿಚಾರಣೆಯಿಂದ ತಿಳಿದುಬರಬೇಕಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಸಹಿತ ಒಟ್ಟು ಏಳು ಮಂದಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...