ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಪೊರೇಟ್ ಬಂಡವಾಳಗಾರರ ಹಿತದೃಷ್ಟಿಯಿಂದ ಕಾರ್ಮಿಕರ ರಕ್ಷಣೆಗಾಗಿ ಇದ್ದ ಕಾನೂನುಗಳನ್ನು ರದ್ದುಗೊಳಿಸಿ ನಾಲ್ಕು ಸಂಹಿತೆಗಳನ್ನಾಗಿ ಅನುಷ್ಠಾನಕ್ಕೆ ತಂದು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಂಡು ಮತ್ತಷ್ಟು ಶೋಷಣೆ ಮಾಡಲು ಮುಂದಾಗುತ್ತಿದೆ. ಇದರ ವಿರುದ್ದ ಜುಲೈ 9 ರಂದು ನಡೆಯಲಿರುವ ಸಾರ್ವತ್ರಿಕ ಮುಷ್ಕರಕ್ಕೆ ಸಿಪಿಐಎಂ ಪಕ್ಷ ಕೂಡ ಬೆಂಬಲಿಸಲಿದೆ ಎಂದು ಪಕ್ಷದ ಕೋಲಾರ ಜಿಲ್ಲಾ ಕಾರ್ಯದರ್ಶಿ ಪಿ.ಆರ್ ಸೂರ್ಯನಾರಾಯಣ ತಿಳಿಸಿದರು.
ಕೋಲಾರದ ಸಿಪಿಐಎಂ ಪಕ್ಷದ ಕಚೇರಿಯಲ್ಲಿ ಸಭೆಯ ನಂತರ ಮಾತನಾಡಿದ ಅವರು, ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡುವ ಸಂಘ ಕಟ್ಟುವ ಎಲ್ಲಾ ಹಕ್ಕುಗಳು ಮೊಟಕುಗೊಳ್ಳಲಿದೆ. ದೇಶದಲ್ಲಿ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಡುವುದನ್ನು ಬಿಟ್ಟು ರೈತರ ಭೂಮಿಗಳನ್ನ ಬಂಡವಾಳಗಾರರ, ಕಾರ್ಪೊರೇಟ್ ಶಕ್ತಿಗಳ ಕೈಗೆ ಸೇರುವ ನೀತಿಗಳು ಜಾರಿಯಾಗುತ್ತಿವೆ. ಇದರ ವಿರುದ್ದ ನಿರಂತರವಾಗಿ ಪ್ರತಿಭಟನೆ ನಡೆಸಬೇಕಾಗಿದೆ ಎಂದರು.
ದೇಶದಲ್ಲಿ ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಕಾರ್ಮಿಕರಿಗೆ ಉದ್ಯೋಗ ಸೃಷ್ಟಿ, ಕನಿಷ್ಠ ವೇತನ, ಸಾಮಾಜಿಕ ಭದ್ರತೆಗಳಿಗಾಗಿ ಹೋರಾಟ ಮುಂದುವರಿಸಿರುವಾಗ ಕಾರ್ಮಿಕರ ಕೆಲಸದ ಅವಧಿ ಎಂಟು ಗಂಟೆಯಿಂದ 12 ಗಂಟೆಗೆ ಹೆಚ್ಚಿಸುವ ಪ್ರಯತ್ನಗಳು ಸೇರಿ ಆನೇಕ ಕಾರ್ಮಿಕ ವಿರೋಧಿ ಕಾನೂನುಗಳನ್ನು ಸರ್ಕಾರಗಳು ಮುಂದುವರಿಸಿವೆ. ಇಂತಹ ಸನ್ನಿವೇಶದಲ್ಲಿ ದೇಶದ ಜೆಸಿಟಿಯು ಸಂಘಟನೆಯ ನೇತೃತ್ವದಲ್ಲಿ ಕಾರ್ಮಿಕ ಮತ್ತು ರೈತಾಪಿ ವರ್ಗದ ರಕ್ಷಣೆಗಾಗಿ ಅಖಿಲ ಭಾರತ ಮುಷ್ಕರಕ್ಕೆ ಕರೆ ಕೊಟ್ಟಿದೆ. ಮುಷ್ಕರವನ್ನು ಯಶಸ್ವಿಗೊಳಿಸಲು ಸಿಪಿಐಎಂ ಕೋಲಾರ ಜಿಲ್ಲಾ ಸಮಿತಿ ಈ ಮುಷ್ಕರವನ್ನು ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದರು.
ಇದನ್ನು ಓದಿದ್ದೀರಾ? ಬಂಟ್ವಾಳ | ಮದುವೆಗೆ ನಿರಾಕರಣೆ: ಪ್ರೀತಿಸುತ್ತಿದ್ದ ಯುವತಿಗೆ ಚೂರಿ ಇರಿದು ಆತ್ಮಹತ್ಯೆಗೆ ಶರಣಾದ ಯುವಕ
ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗಾಂಧಿನಗರ ನಾರಾಯಣಸ್ವಾಮಿ, ವಿ.ಗೀತಾ, ಟಿ ಎಂ ವೆಂಕಟೇಶ್,ಎಆರ್ ಬಾಬು ,ತಂಗರಾಜು, ಪಾತಕೋಟ ನವೀನ್ ಕುಮಾರ್ ಇದ್ದರು.





