ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಡೆಂಘೀ, ಕಾಲರಾ, ಮಲೇರಿಯಾ ಹರಡುವ ಭೀತಿ ಎದುರಾಗಿದ್ದು, ಗ್ರಾಮೀಣ ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ. ಕೂಡಲೇ ವಾರಕ್ಕೊಮ್ಮೆ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್ ಯುವ ಸೇನೆ ಮನವಿ ಸಲ್ಲಿಸಿದೆ.
ಈ ಸಂಬಂಧ ಸೇಡಂ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿರುವ ಸಂಘಟನೆಯ ಮುಖಂಡರು, “ಹಳ್ಳಿಗಳಲ್ಲಿ ಚರಂಡಿ ನೀರು ತುಂಬಾ ಹರಿಯುತ್ತಿದ್ದರೂ ಸರಕಾರದ ನಿಯಮದಂತೆ ವಾರಕ್ಕೊಮ್ಮೆ ಚರಂಡಿ ತ್ಯಾಜ್ಯ ಸ್ವಚ್ಛಗೊಳಿಸಬೇಕಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಪಾಗಿಂಗ್ ಮಾಡಲು ನಿಯಮವಿದ್ದರೂ ಅಲ್ಲಿನ ಗ್ರಾಮ ಪಂಚಾಯತಿಗಳಲ್ಲಿನ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಯಾವುದೇ ಸ್ವಚ್ಛತೆಯ ಕಾರ್ಯಕ್ಕೆ ಮುಂದಾಗಿಲ್ಲ. ಬ್ಲೀಚಿಂಗ್ ಪೌಡರ್ ಹಾಕುವುದಿಲ್ಲ” ಎಂದು ದೂರಿದ್ದಾರೆ.
“ಮಳೆ ಬಂದರೆ ಸಾಕು ನೀರಿನ ಟ್ಯಾಂಕರ್ ಗಳಿಗೆ ಸರಬರಾಜು ಆಗುವ ಬೋರವೇಲ್ ಇದ್ದ ಸ್ಥಳದಲ್ಲಿ ತಿಪ್ಪೆಗುಂಡಿಗಳ ತ್ಯಾಜ್ಯ, ಮಲ ವಿಸರ್ಜನೆ ಮಾಡಿದ ಸ್ಥಳದಲ್ಲಿ ಬೋರ್‌ವೆಲ್ ನೀರು ಸರಬರಾಜು ನಳದ ಪೈಪ್ ಲೈನ್ ಒಳಗೆ ಸೇರಿ ಅದೇ ನೀರು ಸರಬರಾಜಾಗುತ್ತಿದೆ” ಎಂದು ತಿಳಿಸಿದ್ದಾರೆ.
ತಾಲೂಕಿನ ಅನೇಕ ಗ್ರಾಮಗಳಲ್ಲಿ ಜನರಿಗೆ ವಾಂತಿಭೇದಿಯ ಲಕ್ಷಣಗಳು ಕಂಡುಬರುತ್ತಿವೆ. ಆದ್ದರಿಂದ ತಕ್ಷಣ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಾಗುವ ಅನಾಹುತ ತಡೆಯಬೇಕು. ಇಲ್ಲವಾದರೆ ಅಂಬೇಡ್ಕರ್ ಯುವ ತಾಲೂಕು ಘಟಕದ ವತಿಯಿಂದ ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅಂಬೇಡ್ಕರ್ ಯುವ ಸೇನೆ ತಾಲೂಕ ಅಧ್ಯಕ್ಷರು ಗೋಪಾಲ ಎಲ್ ನಾಟೇಕಾರ ರವರು ಈ ಮೂಲಕ ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಸವಣೂರು | ಮನೆ ಗೋಡೆ ಕುಸಿದು ಅವಳಿ ಮಕ್ಕಳ ಸಹಿತ ತಾಯಿ ಮೃತ್ಯು; ಸ್ಥಳಕ್ಕೆ ಸಂಸದ ಬೊಮ್ಮಾಯಿ ಭೇಟಿ
ಮನವಿ ಸಲ್ಲಿಸುವ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆ ಮುಧೋಳ ವಲಯ ಅಧ್ಯಕ್ಷ ನರೇಶ್ ಮೌರ್ಯ, ಉಪಾಧ್ಯಕ್ಷರಾದ ಕೈಲಾಸ್ ಮೌರ್ಯ, ಭೀಮು, ಹಣಮಂತು ಉಪಸ್ಥಿತರಿದ್ದರು.





