ಶಿವಮೊಗ್ಗ | ಮನಸ್ಥಿತಿ ಬದಲಾಗದ ಹೊರತು ಕನ್ನಡ ಅನುಷ್ಠಾನ ಕಷ್ಟ: ಡಾ ಪುರುಷೋತ್ತಮ ಬಿಳಿಮಲೆ

Date:

ಕನ್ನಡ ಮನಸ್ಥಿತಿಯಲ್ಲಿ ಬದಲಾಗಬೇಕಿದೆ. ಮನಸ್ಥಿತಿ ಬದಲಾಗದ ಹೊರತು ಕನ್ನಡ ಅನುಷ್ಠಾನ ಕಷ್ಟ. ಬೆಂಗಳೂರಿನಲ್ಲಿ 30 ಕನ್ನಡ ಕಲಿಕಾ ಕೇಂದ್ರ ಆರಂಭಿಸಲಾಗಿದೆ. ಹೊರ ರಾಜ್ಯದವರಿಗೆ ಕನ್ನಡ ಕಲಿಕೆ ಹೊಸ ಪಠ್ಯಗಳು ಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆರವರು ಅಭಿಪ್ರಾಯಪಟ್ಟರು.

ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “ಕಳೆದ 30 ವರ್ಷದಿಂದ ಕನ್ನಡ ಅನುಷ್ಠಾನದ ಬಗ್ಗೆ ಚರ್ಚೆ ನಡೆದಿತ್ತು. ಈ ಕುರಿತು ಈಗ ವಿಭಾಗ, ಜಿಲ್ಲಾಮಟ್ಟ ಮತ್ತು ಗ್ರಾಮಗಳಲ್ಲಿ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಕನ್ನಡ ಅನುಷ್ಠಾನಕ್ಕಾಗಿ ನಾವು ಬೀದರ್‌ನಿಂದ ಪ್ರವಾಸ ಆರಂಭಿಸಿದ್ದು, ಇಂದು ಶಿವಮೊಗ್ಗಕ್ಕೆ ಬರಲಾಗಿದೆ. ರಾಷ್ಟಕವಿ, ಸಮಾಜದ ಧುರೀಣರು ಈ ಪ್ರದೇಶದಿಂದ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಎಲ್ಲಿ ಕನ್ನಡ ವಿಫಲವಾಗಿದೆಯೆಂದು ನೋಡಲು ಬಂದಿದ್ದೇವೆ” ಎಂದರು.

“ಶಿವಮೊಗ್ಗದಲ್ಲಿ ಅಧಿಕಾರಿಗಳ ಜತೆಗೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಭಾಗಿಯಾದ ಅನೇಕ ಅಧಿಕಾರಿಗಳು ಕನ್ನಡವನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದ್ದಾರೆ” ಎಂದು ಪರೋಕ್ಷವಾಗಿ ಹೇಳಿದ ಬಿಳಿಮಲೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಶೇ.66ರಷ್ಟು ಕನ್ನಡ ಅನುಷ್ಠಾನಕ್ಜೆ ಸರ್ಕಾರ ಆದೇಶ ಹೊರಡಿಸಿದೆ. ಶಿವಮೊಗ್ಗ ನಗರದ ನಾಮಫಲಕಗಳಲ್ಲಿ ಆದೇಶದಷ್ಟು ಕನ್ನಡ ಕಾಣಿಸುತ್ತಿಲ್ಲ. ಇನ್ನೊಂದು ವರ್ಷದಲ್ಲಿ ಕನ್ನಡದ ನಾಮಫಲಕ ಅಳವಡಿಸುವುದು ಹೆಚ್ಚಿದರೆ ಕನ್ನಡ ಅನುಷ್ಠಾನ ಯಶಸ್ವಿಯಾಗಲಿದೆ. ಕೈಗಾರಿಕೆ ಕ್ಷೇತ್ರಗಳಿಗೆ ಇಲ್ಲಿಯ ನೀರು, ಭೂಮಿಗಳು ಬೇಕು. ಆದರೆ ಕನ್ನಡ ಭಾಷೆ ಬೇಡವಾಗಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳನ್ನು ಕನ್ನಡಿಗರಿಗೆ ನೀಡಲಾಗುತ್ತಿದೆಯೇ ಎಂಬ ಚರ್ಚೆ ಮಾಡಿದಾಗ ಅದೂ ಕೂಡಾ ಅನುಷ್ಠಾನವಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಅನೇಕ ಹೋಟೆಲ್‌ಗಳಲ್ಲಿ ಕನ್ನಡಿಗರ ಹೊರತಾಗಿ ಅನ್ಯರೂ ಇದ್ದಾರೆ. ಸಂವಿಧಾನದ ಪ್ರಕಾರ ಇದು ತಪ್ಪಲ್ಲ. ಆದರೆ ಸ್ಥಳೀಯ ಭಾಷೆ ಅನ್ಯ ಭಾಷಿಗರ ಹಾವಳಿಯಲ್ಲಿ ಕುಸಿಯದಂತೆ ಕಾಯಬೇಕಿದೆ. ಇಲ್ಲಿನ ಸಂಖ್ಯೆಗೆ ಅನುಗುಣವಾಗಿ ಕನ್ನಡಿಗರು ಎಷ್ಟು ಮಂದಿ ಇರಬೇಕು ಎಂಬುದನ್ನು ಪರಿಗಣಿಸುವುದು ಅನಿವಾರ್ಯವಾಗಿದೆ” ಎಂದರು. 

“ಸರೋಜಿನಿ ಮಹಿಷಿಯ ವರದಿಯಂತೆ ಖಾಸಗಿಯ ಕನ್ನಡಿಗರನ್ನು ಹೊರಗುತ್ತಿಗೆಯಾಗಿ ನೇಮಕ ಮಾಡಬೇಕಿದೆ. ಇದು ಸವಾಲಾಗಿದೆ. ಹೊರಗುತ್ತಿಗೆ ಮತ್ತು ಕನ್ನಡ ಸಂಖ್ಯೆ ಬಗ್ಗೆ ಚರ್ಚೆಯಾಗಬೇಕಿದೆ. ಸಾಮಾಜಿಕ ಸಾಮರಸ್ಯ ಕೆಡುವುತ್ತಿರುವ ಕ್ಷೇತ್ರ ಬ್ಯಾಂಕ್‌ ಕ್ಷೇತ್ರವಾಗಿದೆ. ಪ್ರಾಂತೀಯ ಹುದ್ದೆ ನೇಮಕಾತಿ ಇಲ್ಲವಾದ್ದರಿಂದ, ಇದು ರಾಷ್ಟ್ರೀಕೃತವಾದ ಕಾರಣ ಕನ್ನಡಿಗರ ಸಂಖ್ಯೆ ಕಡಿಮೆಯಾಗಿದೆ. ಬ್ಯಾಂಕ್‌ಗಳಲ್ಲಿ ಪ್ರಾದೇಶಿಕ ಫಲಕವನ್ನು ಪುನರ್ ಪರಿಶೀಲಿಸಬೇಕಿದೆ” ಎಂದು ಹೇಳಿದರು.

“ಬ್ಯಾಂಕ್‌ನಲ್ಲಿ ಕನ್ನಡಿಗರು ಬೇಕು ಎಂಬುದಲ್ಲ, ಸ್ಥಳೀಯರಿರಬೇಕು ಎಂಬುದಾಗಿದ್ದು, ಸಚಿವ  ಧರ್ಮೇಂದ್ರ ಪ್ರಸಾದ್, ಹೆಚ್ ಡಿ ದೇವೇಗೌಡ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕುಮಾರಸ್ವಾಮಿ ಅವರ ಜತೆಗೆ ಮಾತನಾಡಲಾಗಿದ್ದು, ಇದರ ಬಗ್ಗೆ ಒಪ್ಪಿದ್ದಾರೆ” ಎಂದರು. 

“ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಸ್ಥಳೀಯ ಊರಿನ ಹೆಸರು ಬರೆಯುವುದೂ ಕೂಡಾ ತಪ್ಪಾಗುತ್ತಿದೆ. ಫಲಕ ಬರೆಯುವ ಪೇಂಟರ್‌ಗಳು ಕನ್ನಡಿಗರು ಇಲ್ಲದಿರುವುದು ಶೋಚನೀಯ. ಕನ್ನಡ ಮನಸ್ಥಿತಿಯಲ್ಲಿ ಬದಲಾಗಬೇಕಿದೆ. 3000 ಸರ್ಕಾರಿ ಆದೇಶಗಳಿವೆ. ಆದರೆ ಮನಸ್ಥಿತಿ ಬದಲಾಗದ ಹೊರತು ಕನ್ನಡ ಅನುಷ್ಠಾನ ಕಷ್ಟ” ಎಂದರು. 

“ಅನೇಕ ವರ್ಷಗಳಿಂದ ಸಹ್ಯಾದ್ರಿ ಉತ್ಸವ ನಡೆದಿಲ್ಲ. ಡಿಸಿಗೆ ಮನವಿ ಕಳುಹಿಸಲು ಸೂಚಿಸಲಾಗುತ್ತದೆ. ಸ್ಥಳೀಯ ಉತ್ಸವಗಳನ್ನು ಸಂಭ್ರಮಿಸದಿದ್ದರೆ ಹೃದಯ ಭಾಷೆಯಾಗದು. ಮನವಿ ಸಲ್ಲಿಸಿದರೆ ಮುಂದಿನ ವರ್ಷದಿಂದ ಆಚರಣೆಯಾಗುವಂತೆ ಪ್ರಯತ್ನಿಸಲಾಗುವುದು” ಎಂದರು. 

ಈ ಸುದ್ದಿ ಓದಿದ್ದೀರ ? ಉಡುಪಿ | ಟೋಲ್ ಗೇಟ್ ಒಳಗೆ ನುಗ್ಗಿದ ಟಿಪ್ಪರ್ ಲಾರಿ

ಶಿವಮೊಗ್ಗವನ್ನು ಕನ್ನಡ ಚಟುವಟಿಕೆಗಳ ಮುಖ್ಯ ಕೇಂದ್ರವನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಜೆಎನ್‌ಯುನಲ್ಲಿ ಜೂನ್‌ನಿಂದ ಕನ್ನಡ ಪೀಠ ಆರಂಭಿಸಲಾಗುವುದು. ಬನಾರಸ್‌ನಲ್ಲಿ ಕನ್ನಡ ಪೀಠಗಳಿಲ್ಲ. ಹೊರ ಕನ್ನಡಿಗ ಪೀಠಗಳಿಗೆ ಒಂದು ಬಾರಿ ಹಿಡಿಗಂಟು ನೀಡಿ ₹10 ಕೋಟಿ ಬಿಡುಗಡೆ ಮಾಡಬೇಕು. ಅದನ್ನು ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ನಡೆಸಬೇಕಿದೆ” ಎಂದರು. 

“ದ್ವಿಭಾಷ ಸೂತ್ರವನ್ನು ತಮಿಳುನಾಡು ಅಳವಡಿಸಿದೆ. ಆದರೆ ನಾವು ಯಾಕೆ ಬಳಸಿಕೊಳ್ಳಲಿಲ್ಲ. ಕರ್ನಾಟಕವೂ ದ್ವಿಭಾಷ ಸೂತ್ರವನ್ನು ಅಳವಡಿಸಿಕೊಳ್ಳಬೇಕಿದೆ. ಭಾಷೆ ಬೆಂಕಿ ಇದ್ದಂತೆ. ಇದರ ಜತೆಗೆ ಆಟವಾಡಬಾರದು. ಅಖಿಲ ಭಾರತ ಮಟ್ಟದಲ್ಲಿ ಭಾಷಾನೀತಿ ಬೇಕಿದೆ. ಕರ್ನಾಟಕದ ಒಳಗಡೆ ಕನ್ನಡ ಬಿಟ್ಟು 350 ಭಾಷೆಗಳಿವೆ. ರಾಜ್ಯದಲ್ಲಿ ಕನ್ನಡ ಭಾಷಿಗರು ಎಷ್ಟು ಜನರಿದ್ದಾರೆ ಎಂಬುದೂ ಕೂಡಾ ಸರಿಯಾದ ಅಂಕಿ ಅಂಶವಿಲ್ಲ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...