ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಪಡೆದ ಪ್ರಧಾನಿ: ಪ್ರಮೋದ್ ಮಧ್ವರಾಜ್‌ಗೆ ದೊರಕದ ಮೋದಿ ದರ್ಶನ!

Date:

ಪ್ರಧಾನಿ ನರೇಂದ್ರ ಮೋದಿಯವರ ಉಡುಪಿಯ ಕೃಷ್ಣ ಮಠದ ಶುಕ್ರವಾರ ಕಾರ್ಯಕ್ರಮದಲ್ಲಿ ಮತ್ತೊಬ್ಬ ಕನಕದಾಸನಾಗಿ ದೂರ ಉಳಿದವರು ಪ್ರಮೋದ್ ಮಧ್ವರಾಜ್. ಮಠದವರು ಅವರಿಂದ ಸೇವೆಯನ್ನು ಪಡೆದಿದ್ದಾರೆ. ಆದರೆ, ಕಿಂಡಿಯಿಂದ ದೂರ ಇಟ್ಟಿದ್ದಾರೆ.

ಪ್ರಧಾನಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿ ಸಕ್ರಿಯರಾಗಿರುವ ಉಡುಪಿಯ ರಾಜಕೀಯ ನಾಯಕ ಪ್ರಮೋದ್ ಮಧ್ವರಾಜ್ ಅವರ ‘ಗೈರು ಹಾಜರಿ’ಯ ಬಗ್ಗೆ ಅನುಕಂಪದ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಧಾನಮಂತ್ರಿ ಬಂದು ಹೋದ ಬಳಿಕ ವೈರಲ್ ಆಗುತ್ತಿವೆ.

ಕಾರಣವಿಷ್ಟೇ, ಪ್ರಧಾನಿ ನರೇಂದ್ರ ಮೋದಿಯ ಉಡುಪಿ ಶ್ರೀಕೃಷ್ಣ ಮಠದ ಕಾರ್ಯಕ್ರಮದ ಪಟ್ಟಿಯಲ್ಲಿ ಹೆಸರು ಕೈಬಿಟ್ಟ ಕಾರಣಕ್ಕಾಗಿ ಬಿಜೆಪಿ ಮುಖಂಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶುಕ್ರವಾರದ ಕಾರ್ಯಕ್ರಮದಲ್ಲಿ ಭಾಗವಹಿಸದೆ ಗೈರು ಹಾಜರಾಗಿದ್ದಾರೆ.

ಪ್ರಮೋದ್ ಮಧ್ವರಾಜ್ ಶ್ರೀಕೃಷ್ಣ ಮಠದ ಕನಕನ ಕಿಂಡಿಗೆ ಲಕ್ಷಾಂತರ ರೂ. ಮೌಲ್ಯದ ಸ್ವರ್ಣ ಕವಚವನ್ನು ಸೇವಾ ರೂಪದಲ್ಲಿ ನೀಡಿದ್ದು, ಅದನ್ನು ನರೇಂದ್ರ ಮೋದಿ ಆಗಮನದ ವೇಳೆ ಉದ್ಘಾಟಿಸಲು ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆ ಪ್ರಮೋದ್ ಮಧ್ವರಾಜ್ ಕೂಡ ಪಾಲ್ಗೊಳ್ಳಲಿದ್ದರು. ಕಾರ್ಯಕ್ರಮದ ಪಟ್ಟಿಯನ್ನು ಮಠದ ವತಿಯಿಂದ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಪ್ರಧಾನಿ ಕಾರ್ಯಾಲಯದಿಂದ ಬಂದ ಕಾರ್ಯಕ್ರಮದ ಪಟ್ಟಿಯಲ್ಲಿ ಪ್ರಮೋದ್ ಮಧ್ವರಾಜ್ ಹೆಸರು ಮಾತ್ರ ಇರಲಿಲ್ಲ. ಈ ಕಾರಣಕ್ಕೆ ಪ್ರಮೋದ್ ಮಧ್ವರಾಜ್, ಪ್ರಧಾನಿ ಮೋದಿ ಅವರ ಉಡುಪಿಯ ಇಡೀ ಕಾರ್ಯಕ್ರಮಕ್ಕೆ ಆಗಮಿಸದೆ ದೂರ ಉಳಿದಿದ್ದರು. ಸದ್ಯ, ಪ್ರಮೋದ್ ಮಧ್ವರಾಜ್ ಅವರ ‘ಗೈರು ಹಾಜರಿ’ಯ ಬಗ್ಗೆ ಅನುಕಂಪದ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕಾರ್ಯಕ್ರಮದ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ಆ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದಿಲ್ಲ. ಆ ಬಳಿಕ ನನ್ನನ್ನು ಯಾರು ಕೂಡ ಸಂಪರ್ಕಿಸಿಲ್ಲ. ನಾನು ಸೇವಾ ರೂಪದಲ್ಲಿ ಕನಕನ ಕಿಂಡಿಗೆ ಸ್ವರ್ಣ ಕವಚ ನೀಡಿದ್ದೆ. ಅದನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಇದರಿಂದ ನನಗೆ ಸಂತೋಷ ಆಗಿದೆ” ಎಂದು ಪ್ರಮೋದ್ ಮಧ್ವರಾಜ್ ಅವರು ತಿಳಿಸಿದ್ದರೂ ಕೂಡ, ಬಹಿರಂಗವಾಗಿ ತಮ್ಮ ಬೇಸರವನ್ನು ತೋರ್ಪಡಿಸದೆ, ನೋವನ್ನು ನುಂಗಿಕೊಂಡಿದ್ದಾರೆ.

udupi 13

ಪ್ರಧಾನಮಂತ್ರಿ ಬಂದು ಹೋದ ಬಳಿಕ ತಮ್ಮ ಫೇಸ್‌ಬುಕ್‌ನಲ್ಲಿ “1965ರಲ್ಲಿ ನನ್ನ ಪೂಜ್ಯ ತಂದೆಯವರಾದ ಮಲ್ಪೆ ಮಧ್ವರಾಜರು ಶಾಸಕರಾಗಿದ್ದ ಸಂದರ್ಭದಲ್ಲಿ ಉಡುಪಿಯಲ್ಲಿ ಕನಕದಾಸರಿಗಾಗಿ ನಿರ್ಮಿಸಲಾದ ಪವಿತ್ರ ಗುಡಿಯಲ್ಲಿ, ರಾಷ್ಟ್ರದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದೀಜೀ ಇಂದು ಭೇಟಿ ನೀಡಿ ಕನಕದಾಸರ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಅಂದು ಈ ಕನಕದಾಸರ ಗುಡಿಯ ಉದ್ಘಾಟನೆಗೆ ಕರ್ನಾಟಕದ ಮುಖ್ಯಮಂತ್ರಿ ನಿಜಲಿಂಗಪ್ಪನವರು ಸ್ವತಃ ಆಗಮಿಸಿದ್ದರೆ, ಇಂದು ಅದೇ ಕನಕದಾಸರಿಗಾಗಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಶಯದಂತೆ ನಾನು ಸೇವಾರೂಪದಲ್ಲಿ ಅರ್ಪಿಸಲಾದ ಸ್ವರ್ಣಮಯ ಚಿನ್ನದ ಕವಚದ ಕನಕನ ಕಿಂಡಿಯ ಉದ್ಘಾಟನೆಗೆ ರಾಷ್ಟ್ರದ ಹೆಮ್ಮೆಯ ಪ್ರಧಾನಮಂತ್ರಿಗಳೇ ಆಗಮಿಸಿರುವುದು, ಕನಕದಾಸರ ದಿವ್ಯ ಪವಾಡಕ್ಕೆ ನಿಜವಾದ ಸಾಕ್ಷಿಯಾಗಿದೆ” ಎಂದು ಮೋದಿಯವರ ವೀಡಿಯೋ ಹಂಚಿಕೊಂಡು ಮಧ್ವರಾಜ್ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್‌ಗೆ ಹಲವಾರು ಮಧ್ವರಾಜ್ ಅವರ ಅಭಿಮಾನಿಗಳು ‘ಅನುಕಂಪದ ಕಾಮೆಂಟ್‌’ಗಳನ್ನು ಸುರಿದಿದ್ದಾರೆ.

md

“ನಿಮ್ಮ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಸ್ವಾಮೀಜಿಗಳಾದರೂ ಪ್ರಧಾನಿಯವರಿಗೆ ಪ್ರಮೋದ್ ಮಧ್ವರಾಜ್ ಅವರ ಬಗ್ಗೆ ಹೇಳಬೇಕಿತ್ತು. ಎಲ್ಲ ಸೇವೆ ಮಾಡಿ ಕೊನೆಗೆ ನೀವೇ ಅಲ್ಲಿ ಇರಲಿಲ್ಲ. ಬಹಳ ಬೇಜಾರಾಯಿತು. ಸೇವಾದಾರರಾದ ನಿಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಿಲ್ಲವೇ ಸರ್..? ನಿಮ್ಮನ್ನು ನಮ್ಮವರೇ ಸ್ವಲ್ಪ ದೂರವಿಟ್ಟಿದ್ದಾರೆ ಅನಿಸಿತು. ನೀವು ಅಲ್ಲಿ ಇರಲೇಬೇಕಿತ್ತು” ಎಂಬಿತ್ಯಾದಿ ಅನುಕಂಪದ ಕಾಮೆಂಟ್‌ಗಳು ಮಧ್ವರಾಜ್ ಪರ ಬಂದಿದ್ದರೆ, “ಬಿಜೆಪಿಯ ಆಶ್ರಯದಲ್ಲಿ ಉಡುಪಿಯಲ್ಲಿ ರಾಜಗಾಂಭೀರ್ಯದಲ್ಲಿ ಮೆರೆಯಬಹುದೆಂಬ ಪ್ರಮೋದ್ ಮಧ್ವರಾಜರ ಭ್ರಮೆ ಶ್ರೀಕೃಷ್ಣನಿಗೆ ಸರಿಯೆನಿಸಲಿಲ್ಲ” ಎಂದು ಹಲವರು ವಿರುದ್ಧವಾಗಿಯೂ ಪೋಸ್ಟ್ ಹಾಕಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಲಕಿಯರಿಗೆ ಲೈಂಗಿಕ ಕಿರುಕುಳ; ಪೋಕ್ಸೋ ಆರೋಪಿಯ ಖುಲಾಸೆ, ಕಾಯ್ದೆಯ ಅಣಕವಲ್ಲವೇ?

“ಕನಕನ ಕಿಂಡಿಗೆ ಚಿನ್ನದ ಕವಚದ ಸೇವೆ ಮಾಡಿಸಿದ್ದು ಪ್ರಮೋದ್ ಮಧ್ವರಾಜ್ ಕುಟುಂಬ. ಅದನ್ನು ಅನಾವರಣ ಮಾಡಿದ್ದು ಪ್ರಧಾನಿ ಮೋದಿ. ಇಡೀ ಕಾರ್ಯಕ್ರಮದಲ್ಲಿ ಮೊಗವೀರ ಮುಂದಾಳು, ಕೊಡುಗೈ ದಾನಿ, ಸಮಾಜ ಸೇವಕ, ಉಡುಪಿ ಶ್ರೀ ಕೃಷ್ಣನ ಪರಮ ಭಕ್ತ, ಪ್ರತಿಯೊಂದು ಪರ್ಯಾಯದ ಮಂಚೂಣಿಯ ಸೇವಾಕರ್ತ, ತನ್ನ ಅವಧಿಯಲ್ಲಿ ಕರ್ನಾಟಕದ ನಂಬರ್ ಒನ್ ಶಾಸಕ ಮತ್ತು ಸದ್ಯ ಬಿಜೆಪಿ ನಾಯಕ ಮತ್ತು ಮೋದಿಯ ಪ್ರಬಲ ಸಮರ್ಥಕ ಜನನಾಯಕ ಪ್ರಮೋದ್ ಮಧ್ವರಾಜ್ ಅವರ ಸುಳಿವೂ ಸಹ ಇಲ್ಲ. ಮಠದಿಂದ ಕನಕನನ್ನು ದೂರವಿಟ್ಟಂತೆ ಕನಕನ ಕಿಂಡಿಯಿಂದ ಪ್ರಮೋದ್ ಮಧ್ವರಾಜ್‌ರನ್ನು ದೂರವಿಟ್ಟರಲ್ಲೊ ಕೃಷ್ಣ. ಇದು ನಿನಗೆ ಸಹ್ಯವೇ ಕೃಷ್ಣ? ಕೃಷ್ಣಾ, ವಿಠಲ, ರಂಗ, ಎಲ್ಲಿ ಮರೆಯಾದೆ…!” ಶಶಿಧರ್ ಹೆಮ್ಮಾಡಿ ವ್ಯಂಗ್ಯದ ಪೋಸ್ಟ್‌ ಅನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ.

ಮಧ್ವರಾಜ್‌ರನ್ನು ದೂರವಿಟ್ಟ ಬಗ್ಗೆ ಈದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಕೋಟ ನಾಗೇಂದ್ರ ಪುತ್ರನ್, “ಪ್ರಮೋದ್ ಮಧ್ವರಾಜ್ ಹೆಸರಿನ ಹಿಂದೆ ಇರುವ ‘ಮಾಜಿ ಸಚಿವ’ ಪ್ರಮೋದ್ ಮಧ್ವರಾಜ್ ಎನ್ನುವ ಪದ ಕಾಂಗ್ರೆಸ್ ಕೊಟ್ಟಿರುವ ಶ್ರೀ ಕ್ರಷ್ಣ ದೇವರ ಪ್ರಸಾದ. ಅದನ್ನ ಮರೆತು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದರಿಂದ ಇವತ್ತು ಉಡುಪಿ ಜಿಲ್ಲೆಗೆ ಮೋದಿ ಬರುವಾಗ ನಿಮ್ಮನ್ನು ದೂರ ಇಟ್ಟಿದ್ದಾರೆ. ಮಧ್ವರಾಜರು ಕನಕದಾಸರ ಮೂರ್ತಿ ಮಾಡಿಸಿದ್ರು, ಪ್ರಮೋದ್ ಮಧ್ವರಾಜ್ ಚಿನ್ನದ ಕನಕನ ಕಿಂಡಿ ಲೋಕಾರ್ಪಣೆಗೆ ಅನುವು ಮಾಡಿಕೊಟ್ಟರು. ಇದು ಸಂತೋಷದ ವಿಚಾರ. ಆದರೆ ಉಡುಪಿ ಕ್ಷೇತ್ರದ ಶಾಸಕರು ನನ್ನ ವರ್ಚಸ್ಸು ಕಡಿಮೆ ಆಗುತ್ತದೆ ಎಂಬ ದೃಷ್ಟಿಯಿಂದ ಹಾಗೂ ಮುಂದಿನ ವಿಧಾನಸಭಾ ಟಿಕೆಟ್ ಕೈ ತಪ್ಪುತ್ತದೆ ಎಂಬ ದೂರದೃಷ್ಟಿಯಿಂದ ಇವತ್ತು ಪ್ರಧಾನಿ ಬರುವ ಸಂದರ್ಭದಲ್ಲಿ ಪ್ರಮೋದ್ ಮಧ್ವರಾಜ್ ಅವರನ್ನು ದೂರ ಇಟ್ಟಿದ್ದಾರೆ. ಮಾಜಿ ಶಾಸಕ ರಘುಪತಿ ಭಟ್ ಇಬ್ಬರಿಗೂ ಇಂದಿನ ಕಾರ್ಯಕ್ರಮ ಆಹ್ವಾನ ಇರಲಿಲ್ಲ. ಇದರೆ ಹಿಂದೆ ಶಾಸಕರ ಕೈವಾಡವಿದೆ. ಪ್ರಧಾನಿ ಮೋದಿಯ ಕಣ್ಣ ಮುಂದೆ ಇವರು ಬರಬಾರದು, ಬಂದರೆ ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ಕೈ ತಪ್ಪಬಹುದು ಎಂಬ ಭಯದಿಂದ ಇಬ್ಬರು ಪ್ರಭಾವಿ ನಾಯಕರಿಗೆ ಆಹ್ವಾನ ನೀಡಿಲ್ಲ” ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರು ಭಾಗವಹಿಸಿದ್ದ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರುವ ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು, “ನನಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಕಾರ್ಯಕ್ರಮವನ್ನು ಲೈವ್ ಆಗಿ ಕಂಡ ಬಳಿಕ, ವೈಯಕ್ತಿಕವಾಗಿ ಬಹಳ ಕುತೂಹಲ ಅನ್ನಿಸಿದ್ದು ಒಂದು ಗೈರುಹಾಜರಿ. ಕರಾವಳಿಯಲ್ಲಿ ಅತ್ಯಂತ ಸಕ್ರಿಯ ಸೋಷಿಯಲ್ ಮೀಡಿಯಾ ತಂಡ ಹೊಂದಿರುವ (ನನಗೆ ಕರಾವಳಿಯಲ್ಲಿ ಎಷ್ಟು ಮದುವೆ -ಮನೆ ಒಕ್ಕಲು ಇತ್ಯಾದಿ ಆಗಿವೆ ಎಂಬ ಲೆಕ್ಕ ಸಿಗುವುದೇ ಅಲ್ಲಿ!) ರಾಜಕಾರಣಿಯೊಬ್ಬರು ಸಮಾರಂಭದಲ್ಲಿ ಕಾಣಿಸಲಿಲ್ಲ. ನಿಜಕ್ಕೆಂದರೆ, ಅವರು ಇಂದಿನ ಪ್ರಮುಖ ಸೇವೆಯೊಂದರ (ಕನಕನ ಕಿಂಡಿಗೆ ಚಿನ್ನದ ತಗಡಿನ ಹೊದಿಕೆ) ಸೇವಾದಾರರು ಕೂಡ. ಅವರ ಗೈರುಹಾಜರಿಯಲ್ಲೇ ಪ್ರಧಾನಮಂತ್ರಿಯವರು ಆ ಸೇವೆಯನ್ನು ಕೃಷ್ಣಾರ್ಪಣಗೊಳಿಸಿದರು. ಈ ಕಾರ್ಯಕ್ರಮದ ಬಗ್ಗೆ ಆ ನಾಯಕರ ಸೋಷಿಯಲ್ ಮೀಡಿಯಾ ತಂಡ ಕೂಡ ಈ ಕ್ಷಣದ ತನಕ ಮೌನ ತಳೆದಿದೆ. ರಾಜ್ಯ ಸರ್ಕಾರದ ಕುರ್ಚಿ ಕದನದ ಸುದ್ದಿ ಬಂದರೆ ‘ವಾಸನೆಯನ್ನು’ ಅರಸಿ ಹೋಗುವ ಮಾಧ್ಯಮಗಳು, ಈ ಗೈರು ಹಾಜರಿಯ ಬಗ್ಗೆ ನಾಳೆ ಏನು ಹೇಳಲಿವೆ (ಏನಾದರೂ ಹೇಳಲಿವೆಯೆ?!) ಎಂದು ನೋಡುವ ಕುತೂಹಲ ಇದೆ” ಎಂದು ಬರೆದುಕೊಂಡಿದ್ದಾರೆ.

“ಉಡುಪಿಯ ಕೃಷ್ಣ ಮಠದ ಇಂದಿನ ಕಾರ್ಯಕ್ರಮದ ಮಟ್ಟಿಗೆ ಮತ್ತೊಬ್ಬ ಕನಕದಾಸನಾಗಿ ದೂರ ಉಳಿದವರು ಪ್ರಮೋದ್ ಮಧ್ವರಾಜ್… ಸೇವೆಯನ್ನು ಪಡೆದಿದ್ದಾನೆ ಆದರೆ, ಕಿಂಡಿಯ ಹತ್ತಿರ ಬಾ ಎನ್ನಲಿಲ್ಲ ಕೃಷ್ಣ…” ಎಂದು ವಿ.ಕೆ. ವಾಲ್ಪಾಡಿ ಬರೆದುಕೊಂಡಿದ್ದಾರೆ.

ಪ್ರಧಾನಿ ಆಗಮನ ಹಿನ್ನೆಲೆ: ಆಡಳಿತ ವೈಖರಿಯ ಬಗ್ಗೆಯೂ ಪ್ರಶ್ನೆ ಎತ್ತಿದ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು

ಪ್ರಧಾನಿ ಮೋದಿಯವರು ಉಡುಪಿಗೆ ಬರುವುದಕ್ಕೂ ಮುನ್ನ ರಸ್ತೆ ಮೂಲಭೂತ ಸೌಲಭ್ಯ ಸೇರಿದಂತೆ ಹಲವಾರು ಅಭಿವೃದ್ಧಿಗಳು ನಡೆದಿದೆ. ಇದರ ಬಗ್ಗೆಯೂ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, “ಪ್ರಧಾನಿ ಬರುವ ವೇಳೆ ಇಷ್ಟೆಲ್ಲ ಸೌಲಭ್ಯ ಕಲ್ಪಿಸಲು ಸಾಮರ್ಥ್ಯ ಇರುವ ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರಕ್ಕೆ ಬೇರೆ ಸಮಯಗಳಲ್ಲಿ ಇಂತಹ ಕಾರ್ಯ ಸಾಮರ್ಥ್ಯ ಯಾಕಿರುವುದಿಲ್ಲ” ಎಂದು ಪ್ರಶ್ನಿಸಿದ್ದಾರೆ.

“2021ರಲ್ಲಿ ಕನ್ಸೀವ್ ಆದ, ಹೆರಿಗೆ ಆಗದೆ ಹೊಟ್ಟೆ ನೋವಿನಲ್ಲೇ ದಿನದೂಡುತ್ತಿದ್ದ ಮಲ್ಪೆ-ಮಣಿಪಾಲ ಹೆದ್ದಾರಿಯ ಆದಿ ಉಡುಪಿ-ಉಡುಪಿ ಸ್ಟ್ರೆಚ್ ಹೆದ್ದಾರಿ ಕೇವಲ 8 ದಿನಗಳಲ್ಲಿ ಪೂರ್ಣಗೊಂಡು, ಅಲಂಕಾರಗೊಂಡು, ಪ್ರಧಾನಿಯವರ ಸಂಚಲನಕ್ಕೆ ಸಿದ್ಧಗೊಂಡಿತು. ಇದಕ್ಕೆ ನಿಧಿ ಎಲ್ಲಿಂದ, ಹೇಗೆ ಬಂತು, ಶ್ರಮಶಕ್ತಿ-ಇಚ್ಛಾಶಕ್ತಿ ಹೇಗೆ ಕೆಲಸ ಮಾಡಿತು? ಇಷ್ಟು ಸಾಮರ್ಥ್ಯ ಇರುವ ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರಕ್ಕೆ ಬೇರೆ ಸಮಯಗಳಲ್ಲಿ ಇಂತಹ ಕಾರ್ಯಸಾಮರ್ಥ್ಯ ಯಾಕಿರುವುದಿಲ್ಲ ಎಂಬುದು ಅಧ್ಯಯನ ಯೋಗ್ಯ” ಎಂದು ಬರೆದುಕೊಂಡಿದ್ದಾರೆ.

“ಉಡುಪಿಯಲ್ಲಿ ಶುಕ್ರವಾರ ನಡೆದದ್ದು ಅರೆಖಾಸಗಿ ಕಾರ್ಯಕ್ರಮ. ಪ್ರಧಾನಮಂತ್ರಿಗಳ ದೇವಾಲಯ ಭೇಟಿ. ಆದರೆ ಅವರ ಪಕ್ಷದ ಕಾರ್ಯಕರ್ತರು, ಜಿಲ್ಲೆಯ ನಾಗರಿಕರ ಸಂಭ್ರಮ ಒಂದೆರಡು ದಿನಗಳಿಂದಲೇ ಕಣ್ಣಿಗೆ ಕಾಣಿಸುವಷ್ಟಿತ್ತು. ಮಾಧ್ಯಮಗಳಂತೂ ರೋಮಾಂಚದ ತುರೀಯದಲ್ಲಿದ್ದವು ಎಂಬುದನ್ನು ಇಂದು ಬೆಳಗಿನ ಸ್ಥಳೀಯ ಪತ್ರಿಕೆಗಳು ಸಾಬೀತುಪಡಿಸಿದವು. ಇದು ಸಹಜ ಕೂಡ. ದೇಶದ ಪ್ರಧಾನಿಯಾಗಿ ಅವರ ಮೊದಲ ಭೇಟಿ ಇದಂತೆ (ಚುನಾವಣಾ ಕಾಲದ್ದು ಬೇರೆ ಲೆಕ್ಕ). ಪ್ರತಿಪಕ್ಷಗಳವರು ಎಚ್ಚರದಲ್ಲಿ ಇದ್ದರೆ, ಇಂದಿನ ಈ ಕಾರ್ಯಕ್ರಮದ ವಿನ್ಯಾಸ, ನಿರ್ವಹಣೆ ಮತ್ತು ಅದರ ಸ್ವರೂಪ ಅವರಿಗೆ ಅಧ್ಯಯನ ಯೋಗ್ಯ. ಸಮುದಾಯ-ರಾಜಕೀಯ-ಧರ್ಮಗಳ ಹದವಾದ ಬೆರಕೆ, ಕರಾವಳಿಯಲ್ಲಿ ಯಾಕೆ ಬಿಜೆಪಿ ಬೇರುಗಳು ಗಟ್ಟಿ ಇವೆ ಎಂಬುದನ್ನು ಇಂದಿನ ಕಾರ್ಯಕ್ರಮ ತೋರಿಸಿದೆ. ಬರಿಯ ಹೊರಪದರದ ಟೀಕೆ, ಟ್ರೋಲಿಂಗ್‌ಗಳಿಂದ ಆಚೆ ತಳಮಟ್ಟದಲ್ಲಿ ನಿಜಕ್ಕೂ ಏನು ನಡೆಯುತ್ತಿದೆ ಎಂಬುದನ್ನು ಪ್ರತಿಪಕ್ಷಗಳು ಅರ್ಥ ಮಾಡಿಕೊಂಡು, ತಾವೆಲ್ಲಿದ್ದೇವೆ ಎಂದು ಮುಟ್ಟಿ ನೋಡಿಕೊಳ್ಳಲು ಇದು ಸಕಾಲ” ಎಂದು ತಿಳಿಸಿದ್ದಾರೆ.

ಜೊತೆಗೆ ಪ್ರಧಾನಿಯ ಭಾಷಣದ ಬಗ್ಗೆಯೂ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ತಲ್ಲೂರು, “ಸಾಮಾನ್ಯ ಚುನಾವಣಾ ಭಾಷಣಗಳಿಗೆ ಹೋಲಿಸಿದರೆ, ಪ್ರಧಾನಿ ಇಂದು ಸಾಕಷ್ಟು ಚೆನ್ನಾಗಿಯೇ ಮಾತನಾಡಿದರು. ಈಗಿನ ರಾಜಕಾರಣ ನಿಧಾನಕ್ಕೆ ಮರೆಯತೊಡಗಿರುವ ಡಾ. ವಿ.ಎಸ್. ಆಚಾರ್ಯರ ನೆನಪು ಮಾಡಿಕೊಂಡರು. ಪಕ್ಷದ ಕರಾವಳಿ ಸಾಧನೆಗಳಿಗೆ, ಸ್ವಚ್ಛಭಾರತ, ಶುದ್ಧ ನೀರು, ಒಳಚರಂಡಿಯಂತಹ ಇಂದು ಅಬ್ಬರದಲ್ಲಿರುವ ಯೋಜನೆಗಳನ್ನು 60ರ ದಶಕದಲ್ಲಿ ಡಾ. ಆಚಾರ್ಯರು ಉಡುಪಿಯಲ್ಲಿ ಅನುಷ್ಠಾನ ಮಾಡಿದ್ದನ್ನು ನೆನಪಿಸಿದರು. ಪ್ರಧಾನಿ ಭಾಷಣ ಸಾಕಷ್ಟು ಹೋಂವರ್ಕ್ ಮಾಡಿಯೇ ಸಿದ್ಧಗೊಂಡಂತಿತ್ತು. ಈ ಯೋಜನೆಗಳಲ್ಲಿ ಹೆಚ್ಚಿನವು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಆರಂಭಗೊಂಡಿದ್ದರೂ, ಉದಾರೀಕರಣದ ಬಳಿಕ ಅಬ್ಬರದ ‘ಮಿಷನ್ ಮೋಡ್’ಗೆ ಬದಲಾದದ್ದು ಹಾಲಿ ಆಡಳಿತದಲ್ಲಿ. ಆ ಮಟ್ಟಿಗೆ ಪ್ರಧಾನಮಂತ್ರಿಯವರ ಮಾರ್ಕೆಟಿಂಗ್ ತಂತ್ರ ಗಮನಾರ್ಹ. ಅದೇ ಅವರ ಆಕರ್ಷಣೆಯ ಗುಟ್ಟು ಕೂಡ. ಇರಲಿ, ಉಡುಪಿ ಹಲವಾರು ಕಾರಣಗಳಿಗೆ ಸಾಕಷ್ಟು ದಿನ ನೆನಪಿಟ್ಟುಕೊಳ್ಳಲಿರುವ ಕಾರ್ಯಕ್ರಮ ಇದು ಎಂಬುದರಲ್ಲಿ ಎರಡು ಮಾತಿಲ್ಲ” ಎಂದು ಬರೆದುಕೊಂಡಿದ್ದಾರೆ.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...