ವಿಜಯನಗರ | ಆಡಂಬರವಿಲ್ಲದೆ ಸಂವಿಧಾನ ಸಾಕ್ಷಿಯಾಗಿ ಅಂತರ್ಜಾತಿ ವಿವಾಹವಾದ ನವದಂಪತಿ

Date:

ಮದುವೆ ಎಂದರೆ ಅಲ್ಲಿ ಆಡಂಬರ, ವೈಭವವಿರುತ್ತದೆ. ಆದರೆ, ಹೊಸಪೇಟೆಯ ಇಲ್ಲೊಂದು ಜೋಡಿ ಆಡಂಬರವಿಲ್ಲದೆ ಸಂವಿಧಾನ ಸಾಕ್ಷಿಯಾಗಿ ಅಂತರ್ಜಾತಿ ವಿವಾಹವಾಗುವ ಮೂಲಕ ಮಾದರಿಯಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯ ಶಿವಕುಮಾರ್ ಹಾಗೂ ಸ್ವಾತಿಯವರ ವಿವಾಹ ಆಡಂಬರವಿಲ್ಲದೆ ಸರಳ ಹಾಗೂ ಅಂತರ್ಜಾತಿಯ ಸಂವಿಧಾನ ಸಾಕ್ಷಿ ವಿವಾಹ ನಗರದ ಚರ್ಚ್ ಹಾಲ್‌ನಲ್ಲಿ ಜರುಗಿತು.

ಹೊಸಪೇಟೆ ಶಿವಕುಮಾರ್ ಹಾಗೂ ತೆಲಂಗಾಣ ಮೂಲದ ಸ್ವಾತಿ ಇಬ್ಬರು ಪದವೀಧರರು. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಎರಡೂ ಕುಟುಂಬವನ್ನು ಒಪ್ಪಿಸಿ ಸರಳವಾಗಿ ಸಂವಿಧಾನ ಬದ್ಧವಾಗಿ ಸಬ್‌ರಜಿಸ್ಟರ್ ಕಛೇರಿಯಲ್ಲಿ ಮದುವೆ ನೊಂದಣಿ ಮಾಡಿಸಿ ಬಾಳ ಪೀಠಿಕೆ ಓದುವುದರ ಮೂಲಕ ಹೊಸ ಜೀವನಕ್ಕೆ ಹೆಜ್ಜೆ ಇಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಧು-ವರ ಇಬ್ಬರೂ ಬೇರೆಬೇರೆ ಜಾತಿಯವರು. ಹುಡುಗಿ ಹಿಂದುಳಿದ ಜಾತಿಯವಳು ಹುಡುಗ ಪರಿಶಿಷ್ಟ ಜಾತಿಯವನು. ಪರಸ್ಪರ ಪ್ರೀತಿಸುತ್ತಿದ್ದರಿಂದ ಎರಡೂ ಕುಟುಂಬಗಳನ್ನು ಒಪ್ಪಿಸಿ ವಿಶ್ವಾಸಕ್ಕೆ ತೆಗೆದು ಕೊಂಡು ಮದುವೆಯಾದರು. ವಿಶೇಷವಾಗಿ ಗಂಡು ಹೆಣ್ಣಿನ ತಂದೆ-ತಾಯಿ ಪರಸ್ಪರ ಒಪ್ಪಿ ‘ನಮ್ಮ ಮಗಳನ್ನು ಶಿವಕುಮಾರ್‌ಗೆ ಕೊಟ್ಟಿರುತ್ತೇವೆ ಹಾಗೂ ನಮ್ಮ ಮಗನನ್ನ ಸ್ವಾತಿಗೆ ಕೊಟ್ಟು ಮದುವೆ ಮಾಡಿರುತ್ತೇವೆ’ ಎಂದು ಎರಡೂ ಕುಟುಂಬದ‌ ತಂದೆ-ತಾಯಿಯವರು ಪರಸ್ಪರ ಹಾರವನ್ನು ಹಾಕಿ ವಿನಿಮಯ ಮಾಡಿಕೊಂಡರು.

WhatsApp Image 2025 05 24 at 6.41.10 PM 1

ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರೊ.ಟಿ.ಎಸ್.ಬಸವರಾಜ್ ಮಾತನಾಡಿ, “ಈ ದೇಶದಲ್ಲಿ ಜಾತಿ ತಾರತಮ್ಯ ಹೆಚ್ಚಾಗಿದೆ. ಬೇರೆ ಜಾತಿಯ ಗಂಡು ಹೆಣ್ಣು ಪರಸ್ಪರ ಪ್ರೀತಿಸಿ ಮದುವೆಯಾದರೆ ಮರ್ಯಾದಾ ಹತ್ಯೆಯಂತಹಾ ಘಟನೆಗಳು ಸಂಭವಿಸುತ್ತವೆ. ಆದರೆ, ಇಲ್ಲಿ ಇಬ್ಬರ ಕುಟುಂಬದವರೂ ಒಪ್ಪಿ ಮದುವೆ ಮಾಡುತ್ತಿದ್ದಾರೆ. ಇದು ಸಂತಸದ ವಿಚಾರ. ಇಂತಹ ಕುಟುಂಬಗಳ ಒಪ್ಪಿಗೆ ಮದುವೆ ಹೆಚ್ಚಾಗಬೇಕು. ಜಾತಿಯ ಭೇದ ಭಾವ ತೊಲಗಬೇಕು. ನಾವು ಜೊತೆಯಾಗಿ ಹೇಗೆ ಬದುಕುತ್ತೇವೆ. ನಮ್ಮ ಬದುಕಿನಲ್ಲಿ ತಪ್ಪು ಹೆಜ್ಜೆ ಇಟ್ಟಾಗ ತಿದ್ದುವ ಕೆಲಸ ಮಾಡುವುದಕ್ಕೆ ಎಲ್ಲರನ್ನೂ ಕರೆಸಿರುತ್ತಾರೆ. ಬದುಕಿನಲ್ಲಿ ಓಲೈಕೆಯಾಗಬಾರದು, ಹೊಂದಾಣಿಕೆ ಬಹಳ ಮುಖ್ಯ. ಈ ನೆಲ ಸಂವಿಧಾನಕ್ಕೆ ಒಳಪಟ್ಟು ಅಂತರ್ಜಾತಿ ವಿವಾಹವಾಗುತ್ತಿದ್ದಾರೆ. ಸಂವಿಧಾನವು ಯಾವ ಸಂಪ್ರದಾಯಕ್ಕೂ ಒಳಪಟ್ಟಿಲ್ಲ ಅಂತ ಸಂವಿಧಾನ ಸಾಕ್ಷಿ ಮದುವೆಯಾಗುತ್ತಿದ್ದಾರೆ” ಎಂದು ನೂತನ ದಂಪತಿಗೆ ಶುಭ ಹಾರೈಸಿದರು.

ವರ ಶಿವಕುಮಾರ್ ಮಾತನಾಡಿ, “ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ಇಬ್ಬರಲ್ಲೂ ಒಪ್ಪಿಗೆ ಇತ್ತು. ಮದುವೆ ಆಗಬೇಕಾದರೆ ಇಬ್ಬರ ಕುಟುಂಬವನ್ನು ಪರಸ್ಪರ ಒಪ್ಪಿಸಿ, ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಸಾಕ್ಷಿಯಾಗಿಯೇ ಮದುವೆ ಆಗಬೇಕು. ಈ ಪುರೋಹಿತಶಾಹಿ ಆಚರಣೆಗಳನ್ನು ಧಿಕ್ಕರಿಸಬೇಕು ಎಂದು ನಿರ್ಧರಿಸಿದ್ದೆವು. ಸ್ವಾತಿಯವರ ಕುಟುಂಬವನ್ನೂ ಒಪ್ಪಿಸಿದೆವು” ಎಂದು ಹೇಳಿದರು.

ಇದನ್ನು ಓದಿದ್ದೀರಾ? ಹಿನಕಲ್ ಗ್ರಾಮ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಗ್ರಾಮ; ಸಂಪೂರ್ಣ ಅಭಿವೃದ್ಧಿಗೆ ನಾನು ಸಿದ್ದ: ಸಿಎಂ ಸಿದ್ದರಾಮಯ್ಯ

ವಧು ಸ್ವಾತಿ ಮಾತನಾಡಿ, “ನಮ್ಮ ಪ್ರೀತಿಗೆ ಮೊದಲು ಕುಟುಂಬದಿಂದ ವಿರೋಧ ವ್ಯಕ್ತವಾಯಿತಾದರೂ ನಂತರ ಒಪ್ಪಿಸಿದೆವು. ಸರಳವಾಗಿ, ಯಾವುದೇ ಅಡಂಬರ ಹಾಗೂ ವೈಭವವಿಲ್ಲದೆ ಮದುವೆ ಆಗಬೇಕು ನಾನು ಮತ್ತು ಶಿವಕುಮಾರ್ ನಿರ್ಣಯ ತೆಗೆದುಕೊಂಡೆವು. ಆ ಪ್ರಕಾರವಾಗಿ ನಾವು ಸಂವಿಧಾನ ಬದ್ಧವಾಗಿ ನಾವಿಂದು ಸಂಗಾತಿಗಳಾಗಿ ಹೊಸ ಬದುಕಿಗೆ ಹೆಜ್ಜೆ ಇಟ್ಟಿದ್ದೇವೆ” ಎಂದು ಹರ್ಷ ವ್ಯಕ್ತಪಡಿಸಿದರು.

ವಿಶ್ಯಾಲ ಮ್ಯಾಸರ್, ಪೀರ್ ಭಾಷಾ, ಸಂತೋಷ ಬಡಿಗೇರ, ಖಾಸಿಮ್‌ ಅಲಿ, ಶರಣು, ಸರ್ದಾರ್, ಶರಣು ಕುಷ್ಟಗಿ, ವಧು-ವರನ ಕುಟುಂಬ ಹಾಗೂ ಮದುವೆಗೆ ಬಂದ ಹಿತೈಷಿಗಳೆಲ್ಲ ಈ ಸಂಭ್ರಮಕ್ಕೆ ಸಾಕ್ಷಿಯಾದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...