ವಿಟ್ಲ | ‘ನಮ್ಮ ಗೆಳೆಯರು ಒಕ್ಕೆತ್ತೂರು’ ಸಂಘದ 10ನೇ ವಾರ್ಷಿಕೋತ್ಸವ; ಬಡ ಹೆಣ್ಣು‌ಮಗಳ ಮದುವೆಗೆ ನೆರವು

Date:

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಒಕ್ಕೆತ್ತೂರು ಎಂಬ ಪರಿಸರದಲ್ಲಿ ‘ನಮ್ಮ ಗೆಳೆಯರು ಒಕ್ಕೆತ್ತೂರು’ ಎಂಬ ಹೆಸರಿನಲ್ಲಿ ಸಾಮಾಜಿಕ ಸೇವಾ ಕಾರ್ಯ ಚಟುವಟಿಕೆಗಳಲ್ಲಿ ಪ್ರಸಿದ್ಧಿಯನ್ನು ಪಡೆದಿರುವ, ಸ್ಥಳೀಯ ಉತ್ಸಾಹಿ ಯುವಕರ ಬಳಗದಿಂದ ಬಡ ಹೆಣ್ಣು ಮಕ್ಕಳ ಮದುವೆಯ ಕಾರ್ಯಕ್ರಮವು ಇತ್ತೀಚೆಗೆ ಒಕ್ಕೆತ್ತೂರು ಜುಮಾ ಮಸೀದಿಯ ಅಂಗಣದಲ್ಲಿರುವ ನೂರ್ ಮಹಲ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ, ಒಕ್ಕೆತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1999-2000 ರ ಶೈಕ್ಷಣಿಕ ವರ್ಷದಲ್ಲಿ ಏಳನೇ ತರಗತಿಯಲ್ಲಿ ಕಲಿಯುತ್ತಿದ್ದ ಸಹಪಾಠಿಗಳು ರಚಿಸಿದ ಮಿತ್ರ ವೃಂದದ ವಾಟ್ಸ್ ಆ್ಯಪ್ ವಿಭಾಗವು ಇಪ್ಪತ್ತೈದು ವರ್ಷಗಳ ಹಿಂದೆ, ಜತೆಯಾಗಿ ಕಲಿಯುತ್ತಿದ್ದ, ಸ್ನೇಹಿತರನ್ನು ಮತ್ತೆ ಒಂದಾಗಿಸಿ‌ತ್ತು. ಹೀಗೆ ಬೆಳೆದ ಈ ಸಮಾಜಮುಖಿ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಒಕ್ಕೆತ್ತೂರು ಶಾಲಾ  ಅಕ್ಕಪಕ್ಕದ ಮಂಗಿಲಪದವು, ಕೆಲಿಂಜ, ಕೊಡಂಗೆ ಪರಿಸರದ ನಿವಾಸಿಗಳು ಯೋಜಿಸಿದ ಈ “ನಮ್ಮ ಗೆಳೆಯರು ಬಳಗ”ವು ಸಾರ್ವಜನಿಕ ರಸ್ತೆ ದುರಸ್ತಿ, ಸಾಮೂಹಿಕ ಇಫ್ತಾರ್ ಕೂಟ, ಇತ್ಯಾದಿಯಾಗಿ ಸಣ್ಣಪುಟ್ಟ ಸೇವಾ ಕಾರ್ಯಗಳನ್ನು ಕೈಗೆತ್ತಿಕೊಂಡು ಮುನ್ನಡೆದು, ಇದೀಗ ಇದರ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂಧರ್ಭದಲ್ಲಿ ಗೆಳೆಯರ ಬಳಗದವರು ತಮ್ಮ ಕನಸಿನ ಯೋಜನೆಯಾಗಿ ಇರಿಸಿಕೊಂಡಿದ್ದ ಬಡ ಹೆಣ್ಣು ಮಗಳ ವಿವಾಹ ಆಯೋಜನೆಯನ್ನು ನೆರವೇರಿಸುವ ತಮ್ಮ ಗುರಿಯನ್ನು ಇದರ ಹತ್ತನೇ ವಾರ್ಷಿಕೋತ್ಸವದ ಸಲುವಾಗಿರುವ ಕಾರ್ಯಕ್ರಮದ ಭಾಗವಾಗಿ, ಒಕ್ಕೆತ್ತೂರು ‌ ಬದ್ರಿಯಾ ಜುಮಾ  ಮಸೀದಿಯ ಮಾಜಿ ಖತೀಬ್ ಅಬ್ದುಲ್ಲಾ ಮದನಿಯವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು. ವಾಲೆಮುಂಡೋವು ಉಸ್ತಾದ್ ಎಂದೇ  ಪ್ರಸಿದ್ಧರಾಗಿರುವ ಶೈಖುನಾ ಮಹಮೂದ್ ಫೈಝಿ ದುವಾ ಪ್ರಾರ್ಥನೆ ಮಾಡುವ ಮೂಲಕ, ಒಕ್ಕೆತ್ತೂರು ಜುಮಾ ಮಸೀದಿಯ ಖತೀಬ್ ಅಲ್ ಹಾಜ್ ಇಬ್ರಾಹಿಂ ಕಾಮಿಲ್ ಸಖಾಫಿ ಅವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

1131398

ರಫೀಕ್ ಅಹ್ಸನಿ, ಅಬೂಬಕರ್ ಸಖಾಫಿ ಮಾಡಾವು, ಅಶ್ರಫ್ ಸಖಾಫಿ ಅಲ್ ಮಹ್ಲರಿ, ಮಹಮ್ಮದ್ ಅಲಿ ಇರ್ಫಾನಿ ಫೈಝಿ, ಆರಿಫ್ ಬಾಖವಿ, ಅಬ್ಬಾಸ್ ಮದನಿ,ಯೂಸುಫ್ ಮದನಿ,ರಶೀದ್ ಸುರೈಝಿ ಸಖಾಫಿ,ವಿ.ಎಂ.ಅಶ್ರಫ್, ಶಾಕಿರ್ ಅಳಕೆಮಜಲು, ಮುಹಮ್ಮದ್ ಅಶ್ರಫ್  ಪೊನ್ನೋಟು, ಎಮ್ ಎಸ್ ಮುಹಮ್ಮದ್, ಬಶೀರ್ ನಬಾ, ಕರೀಮ್ ಕಂಪದಬೈಲು, ಡಿ .ಬಿ.ಅಬೂಬಕರ್, ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ, ವಿ.ಎಸ್ ಸುಲೈಮಾನ್, ಮಹಮ್ಮದ್ ಸಿದ್ದೀಕ್, ತೌಸೀಫ್ ಎಂ. ಜಿ. ಇಸ್ಮಾಯಿಲ್ ಮಾಸ್ಟರ್ ಹಾಗೂ ಸಫ್ವಾನ್  ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಆರಂಭದಲ್ಲಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಸ್ಮಾಯಿಲ್ ಸೂಪರ್ ಸ್ವಾಗತಿಸಿದರು ಹಾಗೂ ಅಬ್ದುಲ್ ಲತೀಫ್ ಕೋಡಂಗೆಯವರು ಧನ್ಯವಾದವಿತ್ತರು.‌ಸ್ವಾದಿಕ್ ಸಖಾಫಿ ನಿರೂಪಣೆ ಮಾಡಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...