ತೆಲಂಗಾಣದ ವೇಮುಲವಾಡದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಕಳೆದ ಐದು ವರ್ಷಗಳಿಂದ ಅಂಬಾನಿ–ಅದಾನಿಯನ್ನು ಗುರಿಯಾಗಿಸಿಕೊಂಡು ಪ್ರಶ್ನೆ ಮಾಡುತ್ತಿದ್ದ ಶೆಹಜಾದಾ (ರಾಹುಲ್ ಗಾಂಧಿ), ಇದೀಗ ಏಕಾಏಕಿ ಅಂಬಾನಿ-ಅದಾನಿ ವಿರುದ್ಧ ಪ್ರಶ್ನಿಸುವುದನ್ನು ನಿಲ್ಲಿಸಿದ್ದಾರೆ. ಅವರು ಟೆಂಪೋದಲ್ಲಿ ಕಪ್ಪು ಹಣ ಕಳುಹಿಸಿದ್ದಾರಾ” ಎಂದು ಪ್ರಶ್ನಿಸಿದ್ದರು.
ಇದಕ್ಕೆ ವಿಡಿಯೋ ಹೇಳಿಕೆಯ ಮೂಲಕ ಉತ್ತರ ನೀಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ನಮಸ್ಕಾರ ಮೋದಿ ಅವರೇ, ಏನು ಭಯಗೊಂಡಿದ್ದೀರಾ? ಸಾಮಾನ್ಯವಾಗಿ ನೀವು ಮುಚ್ಚಿದ ಕೋಣೆಯಲ್ಲಿ ಅಂಬಾನಿ, ಅದಾನಿ ಬಗ್ಗೆ ನೀವು ಮಾತನಾಡುತ್ತೀರಿ. ಆದರೆ ಇಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದೀರಿ. ಅವರು ಟೆಂಪೋದಲ್ಲಿ ಹಣ ಕೊಡ್ತಾರೆ ಅಂತಾ ನಿಮಗೆ ಗೊತ್ತು. ಇದು ನಿಮ್ಮ ಮಾತು ಸ್ವಂತ ಅನುಭವದಿಂದ ಬಂದಿದ್ದೇ?” ಎಂದು ಕೇಳಿದ್ದಾರೆ.
भाजपा के भ्रष्टाचार के टेम्पो का ‘ड्राइवर’ और ‘खलासी’ कौन है, देश जानता है। pic.twitter.com/62N5IkhHWk
— Rahul Gandhi (@RahulGandhi) May 8, 2024
“ಸಿಬಿಐ, ಇಡಿ ಕಳುಹಿಸಿ ಸಾಧ್ಯವಾದಷ್ಟು ಬೇಗ ವಿಚಾರಣೆ ನಡೆಸಿ. ಹೆದರಿಕೊಳ್ಳಬೇಡಿ. ನಾನು ಮತ್ತೆ ಹೇಳುತ್ತೇನೆ ಪ್ರಧಾನಿ ನರೇಂದ್ರ ಮೋದಿಯವರು ಅಂಬಾನಿ, ಅದಾನಿಗೆ ನೀಡಿದ್ದಾರೆ. ಅಷ್ಟೇ ಹಣವನ್ನು ನಾನು ಭಾರತದ ಬಡವರಿಗೆ ನೀಡುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದರು.
“ಮಹಾಲಕ್ಷ್ಮಿ ಹಾಗೂ ಉದ್ಯೋಗ ಯೋಜನೆ ಮೂಲಕ ಕೋಟ್ಯಂತರ ಜನರನ್ನು ಲಕ್ಷಾಧಿಪತಿಯನ್ನಾಗಿ ನಾವು ಮಾಡುತ್ತೇವೆ. ಮೋದಿ ಅವರು 22 ಜನರನ್ನು ಕೋಟ್ಯಾಧಿಪತಿ ಮಾಡಿದ್ದಾರೆ. ಆದರೆ ನಾವು ಕೋಟ್ಯಾಂತರ ಜನರನ್ನು ಲಕ್ಷಾಧಿಪತಿ ಮಾಡಲಿದ್ದೇವೆ” ಎಂದು ರಾಹುಲ್ ಗಾಂಧಿ ಪ್ರಧಾನಿಗೆ ತಿರುಗೇಟು ಕೊಟ್ಟಿದ್ದಾರೆ.
This video, in which Rahul Gandhi Ji has challenged Narendra Modi on #Adani #Ambani, is spreading like fire….
Even neutral people are sharing it in WhatsApp groups..
On Instagram, it’s reaching towards 4 million views in just 2 hours…🔥🔥 pic.twitter.com/FXgPDeEKs7
— Shantanu (@shaandelhite) May 8, 2024
ರಾಹುಲ್ ಗಾಂಧಿ ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಪುಟಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದೊಂದಿಗೆ, “ಬಿಜೆಪಿಯ ಭ್ರಷ್ಟಾಚಾರದ ಟೆಂಪೋಗೆ ‘ಚಾಲಕ’ ಮತ್ತು ‘ಸಹಾಯಕ’ ಯಾರು ಎಂಬುದು ದೇಶಕ್ಕೇ ಗೊತ್ತಿದೆ” ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ‘Yes’, ಮೋದಿ ಹೇಳಿದ್ದು ಸರಿ; ಚುನಾವಣೆ ವೇಳೆ ಅದಾನಿ-ಅಂಬಾನಿ ವಿಷಯ ಚರ್ಚೆಯಾಗಲೇಬೇಕು!
ರಾಹುಲ್ ಗಾಂಧಿ ಈ ವಿಡಿಯೋವನ್ನು ಎಕ್ಸ್‌ನಲ್ಲಿ ಈಗಾಗಲೇ 1.7 ಮಿಲಿಯನ್ ಜನ ನೋಡಿದ್ದರೆ, ಇನ್‌ಸ್ಟಾಗ್ರಾಂನಲ್ಲಿ ಸುಮಾರು 4 ಮಿಲಿಯನ್ ಜನ ವೀಕ್ಷಿಸಿದ್ದಾರೆ.





