ಲಡಾಖಿನ ನಾಜೂಕು ಪರಿಸರದ ಉಳಿವು ಮತ್ತು 6ನೇ ಶೆಡ್ಯೂಲಿನೊಂದಿಗೆ ರಾಜ್ಯದ ಸ್ಥಾನಮಾನಕ್ಕೆ ಒತ್ತಾಯಿಸಿ ಇಂಜಿನಿಯರ್ ಮತ್ತು ಶಿಕ್ಷಣ ಸುಧಾರಕ ಸೋನಮ್ ವಾಂಗ್‌ಚುಕ್ ಕಳೆದ 21 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಮಾ.26ರಂದು ಕೊನೆಗೊಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
21 ದಿನಗಳ ಕಾಲ ಉಪ್ಪು ಮತ್ತು ನೀರನ್ನು ಮಾತ್ರ ಸೇವಿಸಿ ಸತ್ಯಾಗ್ರಹ ನಡೆಸುತ್ತಿದ್ದರು. ನನ್ನ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದರೂ ಕೂಡ, ಹೋರಾಟ ಮುಂದುವರಿಯಲಿದೆ ಎಂದು ಸೋನಮ್ ವಾಂಗ್‌ಚುಕ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಇವರ ಹೋರಾಟಕ್ಕೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
#SonamWangchuk #Ladakh pic.twitter.com/8ziiuxoliA
— NDTV (@ndtv) March 26, 2024
“ಲಡಾಖ್‌ಗೆ ಸಾಂವಿಧಾನಿಕ ರಕ್ಷಣೆ ಮತ್ತು ಜನರ ರಾಜಕೀಯ ಹಕ್ಕುಗಳಿಗಾಗಿ ನಾನು ಹೋರಾಟವನ್ನು ಮುಂದುವರಿಸುತ್ತೇನೆ” ಎಂದು ಹೇಳುವ ಮೂಲಕ ವಾಂಗ್‌ಚುಕ್ ಅವರು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.
ಉಪವಾಸ ಅಂತ್ಯಗೊಳ್ಳುತ್ತಿದ್ದಂತೆ ಕೇಂದ್ರಾಡಳಿತ ಪ್ರದೇಶದ ವಿವಿಧ ಭಾಗಗಳಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದು, ಇದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಮಹಿಳಾ ಸಂಘಟನೆಗಳು ಘೋಷಿಸಿವೆ.
#WATCH | Sonam Wangchuk, an engineer turned educational reformist called off his hunger strike today in Leh, Ladakh.
The hunger strike was for the statehood of Ladakh and the protection of the fragile Himalayan ecology. pic.twitter.com/TDjt2LUrIn
— ANI (@ANI) March 26, 2024
ಮಾರ್ಚ್ 6ರಂದು ಸೋನಮ್ ವಾಂಗ್‌ಚುಕ್ ತಮ್ಮ ಉಪವಾಸವನ್ನು ಪ್ರಾರಂಭಿಸಿದ್ದರು. 21 ದಿನಗಳವರೆಗೆ ಸತ್ಯಾಗ್ರಹ ನಡೆಸುತ್ತೇನೆ. ಕೇಂದ್ರ ಸರ್ಕಾರವು ಒಂದು ವೇಳೆ ನಮ್ಮ ಮನವಿಗೆ ಓಗೊಡದಿದ್ದರೆ, ನನ್ನ ಹೋರಾಟವನ್ನು ಸಾವಿನವರೆಗೂ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲೂಬಹುದು” ಎಂದು ಹೇಳಿದ್ದರು.
Prakash raj shows spine ,travels all the way to Ladakh to show his support to Sonam Wangchuk who is on a hunger strike for days now.
Reel life villain, Real life hero @prakashraaj 👏 pic.twitter.com/vBRx00vXNI
— Roshan Rai (@RoshanKrRaii) March 26, 2024
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಲಡಾಖ್‌ಗೆ ತೆರಳಿದ್ದ ಖ್ಯಾತ ನಟ ಪ್ರಕಾಶ್ ರಾಜ್, ಹೋರಾಟದಲ್ಲಿ ಭಾಗವಹಿಸುವ ಮೂಲಕ ಸೋನಮ್ ವಾಂಗ್‌ಚುಕ್ ಅವರನ್ನು ಬೆಂಬಲಿಸಿದ್ದರು. ಅಲ್ಲದೇ, ಈ ಕುರಿತು ಅವರು ಟ್ವಿಟರ್ನಲ್ಲಿ ಪೋಸ್ಟ್ ಕೂಡ ಹಂಚಿಕೊಂಡಿದ್ದರು.
ಇದನ್ನು ಓದಿದ್ದೀರಾ? ಲಡಾಖ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟ ಪ್ರಕಾಶ್ ರಾಜ್; ವಾಂಗ್‌ಚುಕ್ ಹೋರಾಟಕ್ಕೆ ಬೆಂಬಲ
ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್‌ಚುಕ್, ಬಾಲಿವುಡ್ ನಟ ಅಮೀರ್ ಖಾನ್, ಕರೀನಾ ಕಪೂರ್, ಬೊಮನ್ ಇರಾನಿ ನಟನೆಯ, ರಾಜ್‌ಕುಮಾರ್ ಹಿರಾನಿ ನಿರ್ದೇರ್ಶನದ ‘ತ್ರೀ ಈಡಿಯಟ್ಸ್ (3 idiots) ಸಿನಿಮಾಕ್ಕೆ ಪ್ರೇರಣೆಯಾಗಿದ್ದರು. ಆದರೆ, ಈ ಹೋರಾಟಕ್ಕೆ ಚಿತ್ರತಂಡವಾಗಲೀ, ನಟರಾಗಲೀ ಬೆಂಬಲ ಸೂಚಿಸಿರಲಿಲ್ಲ. ಹೀಗಾಗಿ, ಸೋಷಿಯಲ್ ಮೀಡಿಯಾಗಳಲ್ಲಿ ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.





