ವೈಚಾರಿಕ ನಿಲುವು, ಬರಹಗಳ ಮೂಲಕ ಕನ್ನಡಿಗರಿಗೆ ಓದುವ ಅಭಿರುಚಿ ಪೋಷಿಸಿದವರು ‘ಕೆ.ಟಿ.ಗಟ್ಟಿ’

Date:

ಇಂದು ನಮ್ಮನ್ನು ಅಗಲಿದ ಖ್ಯಾತ ಸಾಹಿತಿ ಕೆ.ಟಿ.ಗಟ್ಟಿಯವರು ತನ್ನ ವೈಚಾರಿಕ ನಿಲುವು, ಬರಹಗಳ ಮೂಲಕ ಕನ್ನಡಿಗರ ಓದುವ ಅಭಿರುಚಿಯನ್ನು ಪೋಷಿಸಿದವರು. ಪತ್ರಿಕಾ ಧಾರಾವಾಹಿಗಳ ಮೂಲಕವೇ ಅವರು ಕನ್ನಡಿಗರನ್ನು ತಲುಪಿದ್ದು ಹೆಚ್ಚು.

ತುಳು,ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಬರೆಯುತ್ತಿದ್ದ ಕೆ.ಟಿ.ಗಟ್ಟಿ (85 ವರ್ಷ)ಅವರು ಕಾದಂಬರಿಗಾರನಾಗಿ ಹೆಚ್ಚು ಜನಪ್ರಿಯರಾಗಿದ್ದರು. ಕವಿತೆ, ನಾಟಕ, ಭಾಷಾ ಶಾಸ್ತ್ರದ ಬಗ್ಗೆ ಕೆ.ಟಿ.ಗಟ್ಟಿಯವರ ಕೊಡುಗೆಗಳು ಕೂಡ ಮಹತ್ವದ್ದಾಗಿದೆ.

ಕಾಸರಗೋಡು ಜಿಲ್ಲೆಯ ಮಧೂರು ಸಮೀಪದ ಕೂಡ್ಲೂವಿನಲ್ಲಿ ಕೆ.ಟಿ.ಗಟ್ಟಿ ಅವರು 1938 ಜುಲೈ 22 ರಂದು ಜನಿಸಿದ್ದರು. ಕೂಡ್ಲು ತಿಮ್ಮಪ್ಪ ಗಟ್ಟಿ ಇದು ಅವರ ಪೂರ್ಣ ಹೆಸರು.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯಕ್ಷಗಾನ ಕಲಾವಿದರಾಗಿದ್ದ ತಂದೆ ದೂಮಪ್ಪ ಅವರು ಮನೆಯಲ್ಲಿ ಹೇಳುತ್ತಿದ್ದ ಕಥೆಗಳು ಹಾಗೂ ಅವರು ತರುತ್ತಿದ್ದ ಪುಸ್ತಕಗಳು ಮತ್ತು ತಾಯಿ ಪರಮೇಶ್ವರಿಯರು ಹಾಡುತ್ತಿದ್ದ ತುಳು-ಮಲಯಾಳಂ ಪಾಡ್ದನಗಳ ಪ್ರೇರಣೆಯಿಂದಾಗಿ ಕೆ.ಟಿ.ಗಟ್ಟಿ ಅವರು 1957ರಿಂದಲೇ ಬರೆಯಲು ಆರಂಭಿಸಿದರು. ಕೆ.ಟಿ.ಗಟ್ಟಿಯವರು ವಯೋಸಹಜ ಆರೋಗ್ಯ ಸಮಸ್ಯೆಗೆ ಎದುರಾಗಿ ಬರೆಯುವುದಕ್ಕೆ ಪೂರ್ಣ ವಿರಾಮ ಕೊಡುವ ವೇಳೆಗೆ 40 ಕಾದಂಬರಿಗಳನ್ನು ಓದುಗರ ಕೈಗಿಟ್ಟಿದ್ದರು.

ಕೆ.ಟಿ.ಗಟ್ಟಿ ಅವರು ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಓದುಗ ಅಭಿಮಾನಿಗಳು, ಶಿಷ್ಯ ವರ್ಗವನ್ನು ಅಗಲಿದ್ದಾರೆ.

ಕೇರಳದ ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ. ಪದವಿ ಪಡೆದ ಕೆ.ಟಿ.ಗಟ್ಟಿ, 1968ರಲ್ಲಿ ಮಣಿಪಾಲ ಎಂ.ಐ.ಟಿ.ಯಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿ ಆರು ವರ್ಷ ಅಲ್ಲಿ ಸೇವೆ ಸಲ್ಲಿಸಿ ಬಳಿಕ ಒಂದು ವರ್ಷ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರಾಗಿ ಸಲ್ಲಿಸುತ್ತಾರೆ. ಆ ಬಳಿಕ ಭಾರತ ಸರಕಾರದ ವಿಶೇಷ ನಿಯೋಜನೆ ಮೂಲಕ ಇಥಿಯೋಪಿಯಾ ದೇಶದಲ್ಲಿ ಶಿಕ್ಷಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದರು.
ಇಥಿಯೋಪಿಯಾ ದೇಶದಲ್ಲಿ ಅಧ್ಯಾಪನ ಮಾಡುತ್ತಿದ್ದ ಅವಧಿಯಲ್ಲಿ ಕೆ.ಟಿ.ಗಟ್ಟಿಯವರು ಇಂಗ್ಲೆಂಡ್ ನ ಟ್ರಿನಿಟಿ ಮತ್ತು ಆಕ್ಸ್‌ಫರ್ಡ್ ಕಾಲೇಜಿನಿಂದ ಇಂಗ್ಲೀಷ್ ಕಲಿಕೆಯಲ್ಲಿ ಡಿಪ್ಲೊಮಾ ಪಡೆದಿದ್ದರು.

1982ರಲ್ಲಿ ಸ್ವದೇಶಕ್ಕೆ ಮರಳಿದ ಗಟ್ಟಿಯವರು, ಉಜಿರೆಯಲ್ಲಿ ‘ವನಸಿರಿ’ಯಲ್ಲಿ ಪ್ರಕೃತಿಯ ನಡುವೆ ನೆಲೆಸಿ ಬರೆಯುವುದನ್ನು ಮುಂದುವರಿಸಿದ್ದರು. ಇತ್ತೀಚೆಗೆ ಅವರು ಮಂಗಳೂರಿಗೆ ಬಂದು ನೆಲೆಸಿದ್ದರು.

ಸನ್ನಿವೇಶ, ಕಾರ್ಮುಗಿಲು, ಪುನರುಪಿ ಜನನಂ, ಗ್ಲಾನಿ, ಬಿಸಿಲುಗುದುರೆ, ಶಬ್ದಗಳು , ನಿರಂತರ, ಸ್ವರ್ಣ ಮೃಗ, ಅಬ್ರಾಹ್ಮಣ, ಅರಗಿನ ಅರಮನೆ, ಯುದ್ಧ, ಕಾಮರೂಪಿ, ಯುಗಾಂತರ, ರಾಗಲಹರಿ, ಮಿತಿ , ಭೂಮಿಗೀತೆ, ಕರ್ಮಣ್ಯೇವಾಧಿಕರಸ್ತೆ ಇವೆಲ್ಲಾ ಕೆ.ಟಿ.ಗಟ್ಟಿಯವರ ಪ್ರಮುಖ ಕಾದಂಬರಿಗಳು.

WhatsApp Image 2024 02 19 at 6.16.08 PM
ಕೆ.ಟಿ.ಗಟ್ಟಿಯವರ ಆತ್ಮಕಥೆ ‘ತೀರ’

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಸಾಹಿತ್ಯ ಪ್ರಶಸ್ತಿ, ಚದುರಂಗ ನಾಟಕ ಪ್ರಶಸ್ತಿ , ಸಾಹಿತ್ಯ ಸವ್ಯಸಾಚಿ ಪ್ರಶಸ್ತಿ ಪುರಸ್ಕೃತರಾಗಿದ್ದ ಕೆ.ಟಿ.ಗಟ್ಟಿ ಅವರು, ಹತ್ತನೇ ದ‌.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ, 2ನೇ ಕಾಸರಗೋಡು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ಪಡೆದಿದ್ದರು.

ಯಾವುದೇ ಪ್ರಶಸ್ತಿ, ಪುರಸ್ಕಾರ, ಪ್ರಚಾರದ ಹಿಂದೆ ಹೋದವರಲ್ಲ ಗಟ್ಟಿಯವರು. ‌ಈ ಕಾರಣದಿಂದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ತೀರಾ ಇಳಿ ವಯಸ್ಸಿನಲ್ಲಿ ಬಂತು. ಸಾಹಿತ್ಯ ಕೂಟ, ಚಳವಳಿ, ಸಮಾವೇಶದಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ಗಟ್ಟಿಯವರು ಬರವಣಿಗೆಗೆ ಮಾತ್ರ ತನ್ನ ಸಮಯ ಕೊಡುತ್ತಿದ್ದರು.

ಕಾದಂಬರಿಕಾರರಾಗಿ ದೊಡ್ಡ ಖ್ಯಾತಿ ಪಡೆದಿದ್ದ ಕೆ.ಟಿ.ಗಟ್ಟಿಯವರ ಮೊದಲ ಕಾದಂಬರಿ ಶಬ್ದಗಳು 1976 ರಲ್ಲಿ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿ, ಬಳಿಕ ಅಂದಿನ ಕಾಲದಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿತ್ತು. ಕಥೆಗಾರರಾಗಿ, ನಾಟಕಗಾರರಾಗಿ, ಭಾಷಾಶಾಸ್ತ್ರಜ್ಞರಾಗಿಯೂ ಗಟ್ಟಿಯವರು ಅನೇಕ ಕೃತಿಗಳನ್ನು ರಚಿಸಿದವರು.
ಕನ್ನಡ ಆಲಿಸಿ ಕಲಿಸಿ, ಇಂಗ್ಲೀಷ್ ಆಲಿಸಿ ಕಲಿಸಿ , ಹೌ ಟು ಟೀಚ್ ಯುವರ್ ಚೈಲ್ಡ್ ಇಂಗ್ಲೀಷ್ ಆಂಡ್ ಕನ್ನಡ, ಲರ್ನ್ ಕನ್ನಡ ತ್ರೂ ಇಂಗ್ಲೀಷ್, ಲರ್ನ್ ತುಳು ತ್ರೂ ಇಂಗ್ಲೀಷ್ ಮೊದಲಾದ ಕೃತಿಗಳ ಮೂಲಕ ಗಟ್ಟಿಯವರು ಜನರ ಭಾಷಾ ಕಲಿಕೆಗೆ ನೆರವಾದವರು.

‘ಝೇಂಕಾರದ ಹಕ್ಕಿ’ ಕನ್ನಡ ಕವಿತಾ ಸಂಕಲನವಾಗಿದ್ದರೆ, ‘ನನ್ನ ಪ್ರೇಮದ ಹುಡುಗಿ’ , ಇಂಗ್ಲೀಷ್ ನಿಂದ ಅನುವಾದಿಸಿದ ಕವನ ಸಂಕಲನ.

ಕೆಂಪು ಕಾಗೆ, ಕುರುಡರು, ಸತ್ಯಕ್ಕೆ ಜಯ, ನಗರ ಪರ್ವ, ಬೊಂಬೆಯಾಟ ಕೆ.ಟಿ.ಗಟ್ಟಿಯವರ ಪ್ರಮುಖ ನಾಟಕಗಳು. ಅವರ ಇಪ್ಪತಕ್ಕೂ ಹೆಚ್ಚು ಬಾನುಲಿ ನಾಟಕಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ. ನಿಸರ್ಗ ಕನ್ಯೆ ಅಂಡಮಾನ್ ಪ್ರವಾಸ ಕಥನವಾಗಿದ್ದರೆ, ‘ತೀರ’ ಕೆ.ಟಿ.ಗಟ್ಟಿಯವರ ಆತ್ಮಕಥೆ.

ಇದನ್ನು ಓದಿದ್ದೀರಾ? ಕಾದಂಬರಿಕಾರ, ಭಾಷಾತಜ್ಞ, ಪ್ರಾಧ್ಯಾಪಕ ಕೆ.ಟಿ. ಗಟ್ಟಿ ನಿಧನ

ಇಥಿಯೋಪಿಯಾ ದೇಶದಿಂದ ಕೆ.ಟಿ.ಗಟ್ಟಿಯವರು ಮರಳಿ ತಾಯ್ನಾಡಿಗೆ ಬಂದು ನಾಲ್ಕು ದಶಕಗಳ ಬಳಿಕ ಈಗ ಕೂಡ ಇಥಿಯೋಪಿಯಾದ ಶಾಲೆಯಲ್ಲಿ ಹತ್ತನೇ ತರಗತಿಗೆ ಇಂಗ್ಲಿಷ್ ವ್ಯಾಕರಣ ಪಠ್ಯ ಪುಸ್ತಕವಾಗಿ ಕೆ.ಟಿ. ಗಟ್ಟಿಯವರು ಬರೆದ ಪುಸ್ತಕವನ್ನೇ ಬಳಸಲಾಗುತ್ತಿದೆ.

ದೇಹದಾನ ಮಾಡಬೇಕೆಂಬ ಕೆ.ಟಿ.ಗಟ್ಟಿಯವರ ಇಚ್ಛೆಯನ್ನು ಅವರ ಪತ್ನಿ ಮಕ್ಕಳು ದೇಹದಾನದ ಮುಖಾಂತರ ನೆರವೇರಿಸಿದರು.

1600x960 1174498 taranath
ತಾರಾನಾಥ್‌ ಗಟ್ಟಿ ಕಾಪಿಕಾಡ್‌
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...