ಬೀಫ್ ರಫ್ತುದಾರರ ಪೈಕಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತ

Date:

2023ರಲ್ಲಿ ಬೀಫ್ ರಫ್ತುದಾರರ ಪೈಕಿ ಭಾರತ ಮತ್ತೊಂದು ಪ್ರಮುಖ ರಫ್ತು ದೇಶವಾಗಿ ಹೊರ ಹೊಮ್ಮಿರುವುದಾಗಿ ಅಂಕಿ-ಅಂಶಗಳ ವಿವರಗಳನ್ನು ವರದಿ ಮಾಡುವ Statista ಎಂಬ ಅಂತಾರಾಷ್ಟ್ರೀಯ ವೆಬ್‌ಸೈಟ್‌ ವರದಿ ಮಾಡಿದೆ.

ಈ ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ‘ದಿ ವೈರ್’ ವೆಬ್‌ಸೈಟ್, “ನೀರು ಕೋಣದ ಮಾಂಸವನ್ನು ರಫ್ತು ಮಾಡುವ ದೇಶಗಳ ಪೈಕಿ ಮೊದಲನೇ ಸ್ಥಾನವನ್ನು ಬ್ರೆಝಿಲ್ ಪಡೆದಿದೆ. ಭಾರತ ಎರಡನೇ ಸ್ಥಾನದಲ್ಲಿದ್ದು, ಭಾರತದ ನಂತರದ ಸ್ಥಾನದಲ್ಲಿ ಅಮೆರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳಿವೆ” ಎಂದು ತಿಳಿಸಿದೆ.

“ಅತೀ ಹೆಚ್ಚು ಬೀಫ್ ಉತ್ಪಾದನೆಯಲ್ಲಿ ಅಮೆರಿಕಾ ಅಗ್ರ ಕ್ರಮಾಂಕದಲ್ಲಿದ್ದು ಅದು ಉತ್ಪಾದಿಸುವ ಬಹುತೇಕ ಬೀಫ್ ಅನ್ನು ದೇಶೀಯ ಬಳಕೆಗೇ ಮಾರಾಟ ಮಾಡುತ್ತದೆ” ಎಂದು ವರದಿ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

beef

2023ರ ಎಪ್ರಿಲ್ ವರೆಗೆ ಭಾರತವು 14.75 ಲಕ್ಷ ಟನ್‌ಗಳಷ್ಟು ಬೀಫ್ ರಫ್ತು ಮಾಡಿದೆ. ಇಷ್ಟು ಬೃಹತ್ ಪ್ರಮಾಣದಲ್ಲಿ ಬೀಫ್ ರಫ್ತು ಮಾಡಿ ಜಗತ್ತಲ್ಲೇ 2ನೇಕ್ಕೇರಿದೆ. ಜಗತ್ತಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೀಫ್ ರಫ್ತು ಮಾಡುವ ದೇಶ ಬ್ರೆಝಿಲ್ 2023ರ ಎಪ್ರಿಲ್ ವೇಳೆಗೆ 30 ಲಕ್ಷ ಟನ್ ಗಳಷ್ಟು ಬೀಫ್ ರಫ್ತು ಮಾಡಿತ್ತು. 14 ಲಕ್ಷದ 22 ಸಾವಿರ ಟನ್ ಬೀಫ್ ರಫ್ತು ಮಾಡುವ ಮೂಲಕ ಅಮೆರಿಕ ಮೂರನೆ ಸ್ಥಾನದಲ್ಲಿದ್ದರೆ, 14 ಲಕ್ಷ ಟನ್ ರಫ್ತು ಮಾಡಿರುವ ಆಸ್ಟ್ರೇಲಿಯಾ 4ನೆ ಸ್ಥಾನದಲ್ಲಿದೆ. ಭಾರತವು 2022ರಲ್ಲಿ 11 ಲಕ್ಷದ 75 ಸಾವಿರ ಟನ್ ಗಳಷ್ಟು ಬೀಫ್ ರಫ್ತು ಮಾಡಿತ್ತು ಎಂದು ಅಮೆರಿಕದ ಕೃಷಿ ಇಲಾಖೆ ನೀಡಿದ ವರದಿಯಲ್ಲಿರುವ ಅಂಕಿ ಅಂಶಗಳನ್ನು Statista ತಿಳಿಸಿವೆ.

ಪರಿಸರ ಮತ್ತು ಮಾನವ ಹಕ್ಕು ಗುಂಪಾದ ಗ್ಲೋಬಲ್ ವಿಟೈಸ್ ನಡೆಸಿರುವ ತನಿಖೆಯ ಪ್ರಕಾರ, ಬ್ರೆಝಿಲ್ ನ ಸೆರಾಡೊ ಪ್ರಸ್ಥ ಭೂಮಿಯಲ್ಲಿನ ಅಕ್ರಮ ಅರಣ್ಯ ನಾಶದೊಂದಿಗೆ ವಿಶ್ವದ ಮೂರು ಪ್ರಮುಖ ಬೀಫ್ ಉತ್ಪಾದನಾ ಸಂಸ್ಥೆಗಳು ಸಂಬಂಧ ಹೊಂದಿವೆ ಎಂಬ ಸಂಗತಿ ಬಯಲಾಗಿತ್ತು.

ಈ ತನಿಖೆಯಲ್ಲಿ ಜೆಬಿಎಸ್, ಮಿನರ್ವ ಹಾಗೂ ಮಾರ್ಫಿಗ್ ಸಂಸ್ಥೆಗಳು ಅಕ್ರಮ ಅರಣ್ಯ.ಶದಲ್ಲಿ ಭಾಗಿಯಾಗಿವೆ ಎಂದು ಹೇಳಲಾಗಿತ್ತು. ಆದರೆ, ಆ ಎಲ್ಲ ಸಂಸ್ಥೆಗಳೂ ಯಾವುದೇ ಅಕ್ರಮದ ಆರೋಪವನ್ನು ಅಲ್ಲಗಳೆದಿದ್ದವು. ಸೆರಾಡೊದ ಸಣ್ಣ ಪ್ರಮಾಣದ ವಿಸ್ತರಣೆಯಾದ ಮ್ಯಾಟೊ ಗ್ರಾಸೊ ಸ್ಥಿತಿಯ ಬಗ್ಗೆ ಈ ತನಿಖೆಯು ಗಮನ ಹರಿಸಿತ್ತು. ಈ ಮೂರು ಸಂಸ್ಥೆಗಳ ಒಡೆತನದ ಜಾನುವಾರುಗಳಿಗಾಗಿ ನಡೆದಿದ್ದ ಅರಣ್ಯ ನಾಶದ ಸಂದರ್ಭದಲ್ಲಿ ಮರಗಳನ್ನು ಕತ್ತರಿಸಲು ಯಾವುದೇ ಪರವಾನಗಿ ಇರಲಿಲ್ಲ ಹಾಗೂ ಅದು ಅಕ್ರಮವಾಗಿತ್ತು ಎಂಬುದು ಈ ತನಿಖೆಯಲ್ಲಿ ಪತ್ತೆಯಾಗಿತ್ತು.

ಇದನ್ನು ಓದಿದ್ದೀರಾ? ಬೆಂಗಳೂರು ಚಲನಚಿತ್ರೋತ್ಸವ | ‘ಜೀವಮಾನ ಸಾಧನೆ ಪ್ರಶಸ್ತಿ’ಗೆ ಖ್ಯಾತ ನಿರ್ದೇಶಕ ಎಂ.ಎಸ್.ಸತ್ಯು ಆಯ್ಕೆ

ಕಿರು ಮತ್ತು ಸಣ್ಣ ವ್ಯವಹಾರಗಳಿಗಾಗಿ ಡಿಸೆಂಬರ್ 30, 2024ರಿಂದ ಜೂನ್ 30, 2025ರವರೆಗೆ ಯೂರೋಪ್ ಒಕ್ಕೂಟದಲ್ಲಿ ಜಾರಿಯಾಗಿರುವ ಯೂರೋಪ್ ಒಕ್ಕೂಟ ಅರಣ್ಯ ನಾಶ ನಿಯಮಗಳು ಕಾನೂನನ್ನು ಪಾಲಿಸುವಂತೆ ಬೀಫ್ ಉತ್ಪಾದನಾ ಸಂಸ್ಥೆಗಳಿಗೆ ನೀಡಿರುವ ಗಡುವಿನ ಬೆನ್ನಿಗೇ ಈ ಸುದ್ದಿಯು ಹೊರ ಬಂದಿದೆ. ಈ ಅಂಕಿ ಅಂಶಗಳನ್ನು Statista ಮಾ.1ರಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...