ಅಶಿಸ್ತು ಮತ್ತು ಅಸಭ್ಯ ವರ್ತನೆಯ ಆರೋಪದ ಮೇಲೆ ಲೋಕಸಭೆಯಿಂದ ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಅಮಾನತು ಮಾಡಲಾಗಿದೆ.
Leader of opposition Adhir Ranjan Chowdhary @adhirrcinc suspended from the house till the privileges committee not giving his Report. #AdhirRanjan #LokSabha pic.twitter.com/gjg7uZZWFu
— Bharat Verma 🇮🇳💯 (@Imbharatverma) August 10, 2023
ಸಂಸತ್ ಸಮಿತಿಯು ತನ್ನ ವರದಿಯನ್ನು ನೀಡುವವರೆಗೆ ಅವರು ಅಧಿವೇಶನದಿಂದ ಭಾಗವಹಿಸಲು ನಿರ್ಬಂಧ ಹೇರಿ, ಅಮಾನತುಗೊಳಿಸಲಾಗಿದೆ.
ವಿಪಕ್ಷಗಳ ಅವಿಶ್ವಾಸ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಎರಡು ಗಂಟೆ 10 ನಿಮಿಷ ಮಾತನಾಡಿದ ಬಳಿಕ ಅಧೀರ್ ರಂಜನ್ ಚೌಧರಿಯನ್ನು ಅಮಾನತು ಮಾಡಲಾಗಿದೆ.
#WATCH | Parliamentary Affairs Minister Pralhad Joshi moved a resolution that "that this House having taken the serious note of the gross, deliberate and repeated misconduct of Adhir Ranjan Chowdhury in utter disregard to the House and authority of Chair resolve that the matter… pic.twitter.com/UeGoHNCDXf
— ANI (@ANI) August 10, 2023
ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...
ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...
ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಅಶಿಸ್ತು ಮತ್ತು ಅಸಭ್ಯ ವರ್ತನೆಯ ಆರೋಪ ಹೊರಿಸಿ ಅಧೀರ್ ರಂಜನ್ ಚೌಧರಿ ಹೆಸರನ್ನು ಪ್ರಸ್ತಾಪಿಸಿದರು. ಬಳಿಕ ಅದನ್ನು ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅನುಮೋದಿಸಲು ಮತಕ್ಕೆ ಹಾಕಿದರು. ಬಳಿಕ ಅದನ್ನು ಅನುಮೋದಿಸಲಾಗಿದೆ. ಈ ವೇಳೆಗಾಗಲೇ ವಿಪಕ್ಷಗಳು ಸಭಾತ್ಯಾಗ ಮಾಡಿ, ತೆರಳಿದ್ದರು.





