ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರ ನೀಡುವಾಗ ವಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದ್ದಾರೆ.
ಭಾಷಣ ಆರಂಭಿಸಿ ಒಂದೂವರೆ ಗಂಟೆಯಾದರೂ ಮಣಿಪುರದ ಬಗ್ಗೆ ಒಂದೂ ಮಾತನಾಡದ್ದಕ್ಕೆ ಆಕ್ರೋಶಗೊಂಡ ಇಂಡಿಯಾ ಮೈತ್ರಿಕೂಟದ ಸದಸ್ಯರು ಸಭಾತ್ಯಾಗ ಮಾಡಿದರು. ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ಸದಸ್ಯರು ಕಲಾಪದಿಂದ ಹೊರನಡೆದರು.
ಪ್ರತಿಪಕ್ಷಗಳು ಹೊರಗೆ ಹೋದ ಬಳಿಕ ಮಣಿಪುರದ ಬಗ್ಗೆ ಮೋದಿ ಮಾತನಾಡಲಾರಂಭಿಸಿ, ಮಣಿಪುರದ ಘಟನೆ ಉಲ್ಲೇಖಿಸಿ ಭಾರತ ಮಾತೆಯ ಹತ್ಯೆಯಾಗಿದೆ ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಹೆಸರೆತ್ತದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.





