ದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಹಾಸನ ಸಂಸದ ಪ್ರಜ್ವಲ್ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಹಿರಂಗ ಹೇಳಿಕೆ ನೀಡಿದ್ದ ಪ್ರಜ್ವಲ್ ರೇವಣ್ಣ ಅವರ ಮಾಜಿ ಡ್ರೈವರ್ ಕಾರ್ತಿಕ್ ಮಲೇಷ್ಯಾದಲ್ಲಿರುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಇಂದು ಸಂಜೆ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಕುಮಾರಸ್ವಾಮಿ ಆಗಮಿಸಿದರು. ಈ ವೇಳೆ ಡ್ರೈವರ್ ಕಾರ್ತಿಕ್ ಹೇಳಿಕೆಯ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, “ತರಾತುರಿಯಲ್ಲಿ ವಿಡಿಯೋ ಬಿಟ್ಟು ನನ್ನನ್ನು ಕೆಣಕಿದ್ದಾರೆ. ನನಗೆ ಏನು ಮಾಡಬೇಕು ಅಂತ ಗೊತ್ತಿದೆ. ಮೊದಲು ಕಾರ್ತಿಕ್ ಎಲ್ಲಿದ್ದಾನೆ ಎಂದು ಹುಡುಕಿಕೊಳ್ಳಿ” ಎಂದರು.
“ಮಂಗಳವಾರ ಡ್ರೈವರ್ ಕಾರ್ತಿಕ್ ವಿಡಿಯೋ ಬಿಡುಗಡೆಯಾಗಿದೆ. ಕಾರ್ತಿಕ್ ಎಲ್ಲಿಯಾದ್ರೂ ಪ್ರೆಸ್ ಮೀಟ್ ಮಾಡಿದ್ದಾನಾ? ವಿಡಿಯೋವನ್ನು ಬಿಡುಗಡೆ ಮಾಡಿದವರು ಯಾರು? ಅವನು ದೇವರಾಜೇಗೌಡನ ಕೈಯಲ್ಲಿ ನಾನು ವಿಡಿಯೋ ಕೊಟ್ಟಿದ್ದೇನೆ ಎಂದಿದ್ದಾನೆ. ಕಾರ್ತಿಕ್ ಈಗ ಮಲೆಷ್ಯಾದಲ್ಲಿ ಇದ್ದಾನೆ. ನಿಮಗೆ ವಿಡಿಯೋ ರಿಲೀಸ್ ಮಾಡಿದ್ದು ಎಲ್ಲಿಂದ? ಮೊದಲು ಆತನನ್ನು ಕರೆದುಕೊಂಡು ಬನ್ನಿ ಎಂದು 420 ಬ್ರದರ್ಸ್” ಎಂದು ಪರೋಕ್ಷವಾಗಿ ಡಿ ಕೆ ಸಹೋದರರ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
.@hd_kumaraswamy ಚಿಲ್ಲರೆ ಅಣ್ಣಾ ತಮ್ಮ / 420 ಗಳು ಅಂದಿದ್ದು ಯಾರಿಗೆ?
ವಿಡಿಯೋ ರಲೀಸ್ ಮಾಡಿದ ಕಾರ್ತಿಕ್ ಈಗ ಎಲ್ಲಿದ್ದಾನೆ?
ಕುಮಾರಸ್ವಾಮಿನ ಕೆಣಕಿದ್ದು ಯಾರು?#PrajwalRevannavideo #prajwalvideos #PrajwalRevanna #PrajwalRevannaPendrive #Hassanpendrive #HassanFiles #HDKumaraswamy #News18Kannada pic.twitter.com/fg7a69UzwY
— News18 Kannada (@News18Kannada) May 1, 2024
“ದೇವರಾಜ್ ಮೊದಲು ನನ್ನನ್ನು ಭೇಟಿಯಾಗಿದ್ದಾನೆಂದು ಈ 420ಗಳು ಹೇಳಿದ್ದಾರೆ. ಎಲ್ಲಿಂದ ವಿಡಿಯೋ ಮಾಡಿ ಬಿಟ್ಟಿದ್ದಾನೆ ಅದನ್ನು ಮೊದಲು ತಿಳಿದುಕೊಳ್ಳಿ. ಸುಲಭವಾಗಿ ನಮ್ಮನು ಕೆಣಕಿದರೆ ನಾವು ಸುಮ್ಮನೇ ಬಿಡುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
ಮಾಧ್ಯಮದವರ ಮೇಲೆಯೇ ಕೋಪಗೊಂಡ ಕುಮಾರಸ್ವಾಮಿ
ಇದೇ ವೇಳೆ ಮಾಧ್ಯಮಗಳ ವಿರುದ್ಧವೇ ಗರಂ ಆದ ಹೆಚ್‌ಡಿಕೆ, “ನಮ್ಮ ಮನೆ ಬಳಿ ಯಾಕೆ ಬಂದಿದ್ದೀರಿ. ಅಲ್ಲೂ ಬರ್ತೀರಾ ಇಲ್ಲೂ ಪದೇ ಪದೇ ಬರುತ್ತೀರಿ. ಬೆಳಗ್ಗೆ ಮನೆ ಹತ್ತಿರ ಬಂದಿದ್ದೀರಿ. ಈಗ ಮತ್ತೆ ಇಲ್ಲಿ ಬಂದಿದ್ದೀರಿ. ಸಂಪೂರ್ಣವಾಗಿ ನಿನ್ನೆ ಒಂದು ಗಂಟೆ ಹೇಳಿದ್ದೇನೆ. ಮತ್ತೆ ಯಾಕೆ ಬರುತ್ತೀರಿ. ಸುದ್ದಿ ಬೇರೆಯವರು ಕೊಡುತ್ತಿದ್ದಾರೆ. ಅವರ ಬಳಿ ಹೋಗಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇವೇಗೌಡರ ನಿವಾಸಕ್ಕೆ ರೇವಣ್ಣ, ಕುಮಾರಸ್ವಾಮಿ ಭೇಟಿ
ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಿಂದ ಪಕ್ಷಕ್ಕಾಗಿರುವ ಮುಜುಗರದ ಬಗ್ಗೆ ಮಾತುಕತೆ ನಡೆಸಲು ಹೆಚ್.ಡಿ.ದೇವೇಗೌಡ ನಿವಾಸಕ್ಕೆ ಹೆಚ್.ಡಿ.ರೇವಣ್ಣ ಮತ್ತು ಹೆಚ್ಡಿ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.





