ಯಮುನಾ ನದಿಯ ನೀರನ್ನು ಕುಡಿದು ತೋರಿಸಿ: ಅರವಿಂದ್‌ ಕೇಜ್ರಿವಾಲ್‌ಗೆ ಸವಾಲೆಸೆದ ರಾಹುಲ್ ಗಾಂಧಿ

Date:

ಕೊಳಕಾಗಿರುವ ದೆಹಲಿಯ ಯಮುನಾ ನದಿಯ ನೀರನ್ನು ಕುಡಿದು ತೋರಿಸುವಂತೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಅವರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸವಾಲೆಸೆದಿದ್ದಾರೆ.

ದೆಹಲಿಯಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ದೆಹಲಿಯ ಹೌಜ್ ಖಾಜಿ ಚೌಕ್‌ನಲ್ಲಿ ಮಾಜಿ ಸಿಎಂ ನಡೆಯನ್ನು ಟೀಕಿಸಿದ ಲೋಕಸಭೆಯ ವಿಪಕ್ಷ ನಾಯಕ, “ಅರವಿಂದ್ ಕೇಜ್ರಿವಾಲ್ ಅವರು ಹೊಸ ರಾಜಕೀಯ ವ್ಯವಸ್ಥೆಯನ್ನು ತರುವುದಾಗಿ ಹೇಳಿದ್ದರು. ಭ್ರಷ್ಟಾಚಾರವನ್ನು ಕೊನೆಗೊಳಿಸುತ್ತೇನೆ, ಕೇವಲ ಐದು ವರ್ಷಗಳಲ್ಲಿ ಯಮುನಾ ನದಿಯ ನೀರನ್ನು ಸ್ವಚ್ಛಗೊಳಿಸುತ್ತೇನೆ ಮತ್ತು ಅದರಲ್ಲಿ ಸ್ನಾನ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಅದಿನ್ನೂ ಕೊಳಕಾಗಿಯೇ ಇದೆ. ಯಮುನಾ ನದಿಯ ನೀರನ್ನು ಕುಡಿಯಲು ನಾನು ಕೇಜ್ರಿವಾಲ್ ಅವರಲ್ಲಿ ಕೇಳುತ್ತೇನೆ. ಅದರ ನಂತರ ನಾವು ಆಸ್ಪತ್ರೆಯಲ್ಲಿ ಭೇಟಿಯಾಗುತ್ತೇವೆ” ಎಂದು ಹೇಳಿದರು.

ಒಂದೆಡೆ, ದೆಹಲಿಯ ಬಡ ಜನರು ಕೊಳಕು ನೀರನ್ನು ಕುಡಿಯಲು ಒತ್ತಾಯಿಸಲಾಗುತ್ತಿದೆ. ಮತ್ತೊಂದೆಡೆ, ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕೇಜ್ರಿವಾಲ್ ಅವರು ಗಾಜಿನ ಅರಮನೆಯಲ್ಲಿ ಕುಳಿತು ತಮ್ಮ ತಂಡದೊಂದಿಗೆ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಟೀಕಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮನೀಶ್ ಸಿಸೋಡಿಯಾ, ಆತಿಶಿ, ಸಂಜಯ್ ಸಿಂಗ್, ರಾಘವ್ ಚಡ್ಡಾ, ಸತ್ಯೇಂದ್ರ ಜೈನ್ ಮತ್ತು ಇತರರು ಸೇರಿದಂತೆ ಎಎಪಿಯ 9 ಜನರ ಕೋರ್ ತಂಡವನ್ನು ಟೀಕಿಸಿದ ಅವರು, “ಈ 9 ಜನರು ಕೇಜ್ರಿವಾಲ್ ಅವರ ಪ್ರಮುಖ ತಂಡ. ಈ 90% ರಲ್ಲಿ ಎಷ್ಟು ಜನರಿದ್ದಾರೆ? ದಲಿತ, ಒಬಿಸಿ ಅಥವಾ ಮುಸ್ಲಿಂ ಸಮುದಾಯದ ಮುಖಂಡರು ಯಾರೂ ಇಲ್ಲ. ಅವರು ತಮ್ಮ ತಂಡವನ್ನು ರಚಿಸುತ್ತಾರೆ ಮತ್ತು ಎಲ್ಲಿಯಾದರೂ ಗಲಭೆ ಸಂಭವಿಸಿದಾಗ ಅವರು ಕಣ್ಮರೆಯಾಗುತ್ತಾರೆ” ಎಂದು ಜರೆದರು.

“ಕೇಜ್ರಿವಾಲ್ ಮತ್ತು ಮೋದಿ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಮೋದಿ ಬಹಿರಂಗವಾಗಿ ಮಾತನಾಡುತ್ತಾರೆ, ಕೇಜ್ರಿವಾಲ್ ಮೌನವಾಗಿರುತ್ತಾರಷ್ಟೇ ಮತ್ತು ಅಗತ್ಯವಿದ್ದಾಗ ಜನರ ಸಹಾಯಕ್ಕೆ ಬರುವುದಿಲ್ಲ” ಎಂದು ರಾಹುಲ್ ಗಾಂಧಿ ಟೀಕಿಸಿದರು.

ಇದನ್ನು ಓದಿದ್ದೀರಾ? ಯುಜಿಸಿ ಕರಡು ನಿಯಮಗಳ ತಿದ್ದುಪಡಿ 2025: ತಿರಸ್ಕರಿಸುವಂತೆ ಜಾಗೃತ ನಾಗರಿಕರ ವೇದಿಕೆ ಕರೆ

ಚುನಾವಣಾ ಹೋರಾಟವು ವಾಸ್ತವವಾಗಿ ಕೇವಲ ಎರಡು ಸಿದ್ಧಾಂತಗಳ ನಡುವೆ ಇದೆ, ಒಂದು ಏಕತೆ ಮತ್ತು ಇನ್ನೊಂದು ದ್ವೇಷ. ಹೋರಾಟವು ಎರಡು ಪಕ್ಷಗಳ ನಡುವೆ ಇದೆ, ಎರಡು ಪಕ್ಷಗಳು ಎರಡು ಸಿದ್ಧಾಂತಗಳನ್ನು ಹೊಂದಿವೆ. ಒಂದು ದ್ವೇಷದ ಸಿದ್ಧಾಂತವಾದ ಬಿಜೆಪಿ ಆರ್‌ಸ್ಎಸ್ ಮತ್ತು ಇನ್ನೊಂದು ಏಕತೆಯ ಸಿದ್ಧಾಂತವಾದ ಕಾಂಗ್ರೆಸ್. ನರೇಂದ್ರ ಮೋದಿ ಇಂದು ಪ್ರಧಾನಿಯಾಗಿದ್ದಾರೆ, ಆದರೆ ಅವರು ಅಧಿಕಾರದಿಂದ ಕೆಳಗಿಳಿಯುವ ದಿನ ಯಾರೂ ಅವರನ್ನು ನೆನಪಿಸಿಕೊಳ್ಳುವುದಿಲ್ಲ. ಈ ದೇಶದಲ್ಲಿ ಇಬ್ಬರು ಜನರಿದ್ದರು. ಮಹಾತ್ಮ ಗಾಂಧಿ ಮತ್ತು ಗೋಡ್ಸೆ. ಯಾರೂ ಕೂಡ ಗೋಡ್ಸೆಯನ್ನು ನೆನಪಿಸಿಕೊಳ್ಳುವುದಿಲ್ಲ” ಎಂದು ವಿಪಕ್ಷ ನಾಯಕ ಹೇಳಿದರು.

ದೆಹಲಿ ವಿಧಾನಸಭಾ ಚುನಾವಣೆ ಫೆಬ್ರವರಿ 5ರಂದು ನಡೆಯಲಿದ್ದು, ಫೆ.3ರ ಸೋಮವಾರ ಬಹಿರಂಗ ಪ್ರಚಾರ ಸಭೆ ಕೊನೆಯಾಗಲಿದೆ. ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...