ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 19 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಕಲಬುರಗಿ ಮತ್ತು ಬೆಂಗಳೂರಿಗೆ ಅವರು ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ, ‘ನಿದ್ದೆಯಿಂದ ಎದ್ದೇಳಿ ಮೋದಿ’ ಎಂಬ ಟ್ಯಾಗ್‌ಲೈನ್ ಜೊತೆಗೆ ಹಲವಾರು ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಈ ಪೋಸ್ಟರ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರ ವಿರುದ್ಧ ಕಿಡಿಕಾರಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್, “ಹೈಕಮಾಂಡ್ ದೊರೆಗಳನ್ನು ಮೆಚ್ಚಿಸಲು ಹಾಗೂ ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಯನ್ನು ನಿಂದಿಸುತ್ತಿದ್ದಾರೆ” ಎಂದಿದ್ದಾರೆ.
ಸಿಎಂ @siddaramaiah ನವರೇ,
ಪ್ರಧಾನಿ @narendramodi ಅವರನ್ನ ನಿಂದಿಸುವ ಮೂಲಕ ನಿಮ್ಮ ಹೈಕಮಾಂಡ್ ದೊರೆಗಳನ್ನು ಮೆಚ್ಚಿಸಿ ಅಲುಗಾಡುತ್ತಿರುವ ತಮ್ಮ ಕುರ್ಚಿ ಉಳಿಸಿಕೂಳ್ಳಬಹುದು ಎಂಬ ಕನಸು ಕಾಣಬೇಡಿ. ತಾವು ಎಷ್ಟೇ ಹಾರಾಡಿದರೂ, ಚೀರಾಡಿದರೂ ಲೋಕಸಭೆ ಚುನಾವಣೆವರೆಗೆ ಮಾತ್ರ ತಮ್ಮ ಕುರ್ಚಿ ಭದ್ರ ಎಂಬುದು ಈಗ ಗುಟ್ಟಾಗಿ ಏನು ಉಳಿದಿಲ್ಲ.
— R. Ashoka (ಆರ್. ಅಶೋಕ) (@RAshokaBJP) January 17, 2024
ಈ ಬಗ್ಗೆ ಟ್ವೀಟ್ ಮಾಡಿರುವ ಅಶೋಕ್, “ಸಿಎಂ ಸಿದ್ದರಾಮಯ್ಯನವರೇ, ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸುವ ಮೂಲಕ ನಿಮ್ಮ ಹೈಕಮಾಂಡ್ ದೊರೆಗಳನ್ನು ಮೆಚ್ಚಿಸಿ ಅಲುಗಾಡುತ್ತಿರುವ ತಮ್ಮ ಕುರ್ಚಿ ಉಳಿಸಿಕೂಳ್ಳಬಹುದು ಎಂಬ ಕನಸು ಕಾಣಬೇಡಿ. ತಾವು ಎಷ್ಟೇ ಹಾರಾಡಿದರೂ, ಚೀರಾಡಿದರೂ ಲೋಕಸಭೆ ಚುನಾವಣೆವರೆಗೆ ಮಾತ್ರ ತಮ್ಮ ಕುರ್ಚಿ ಭದ್ರ ಎಂಬುದು ಈಗ ಗುಟ್ಟಾಗಿ ಏನು ಉಳಿದಿಲ್ಲ” ಎಂದು ಟೀಕಿಸಿದ್ದಾರೆ.
“ಇಡೀ ವಿಶ್ವವೇ ಮೆಚ್ಚಿರುವ, ಇಡೀ ದೇಶವೇ ಪ್ರೀತಿಸುವ ಅದ್ವಿತೀಯ ನಾಯಕ ಪ್ರಧಾನಿ ಮೋದಿ. ಅವರ ಶಿಸ್ತಿನ ಜೀವನ, ಪರಿಶ್ರಮದ ಸ್ವಭಾವ, ಹಿಡಿದ ಕೆಲಸ ಮಾಡಿ ಮುಗಿಸುವ ಬದ್ಧತೆ ಇವೆಲ್ಲವೂ ಈ ದೇಶದ ಸಣ್ಣ ಮಕ್ಕಳಿಗೂ ಗೊತ್ತಿದೆ” ಎಂದು ಪ್ರಧಾನಿಯನ್ನು ಹೊಗಳಿದ್ದಾರೆ.
ಇದೇ ವೇಳೆ ಆರ್ ಅಶೋಕ್,
“ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು,
ನುಡಿದರೆ ಲಿಂಗ ಮೆಚ್ಚಿ ಅಹುದೇನಬೇಕು!
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ?” ಎಂಬ ವಚನವೊಂದನ್ನು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.





