ಕೇರಳದ ಕೋಝಿಕ್ಕೋಡ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, ತಮ್ಮ ಭಾಷಣದ ಕೊನೆಯಲ್ಲಿ ಕೂಗಿದ್ದ ‘ಭಾರತ್ ಮಾತಾಕೀ ಜೈ’ ಘೋಷಣೆಗೆ ಸಭಿಕರು ಸಹಕರಿಸದ ಕಾರಣ ತಾಳ್ಮೆ ಕಳೆದುಕೊಂಡ ಪ್ರಸಂಗ ನಡೆದಿದೆ.
ಇಂದು(ಫೆ.3) ಕೇರಳದ ಕೋಝಿಕ್ಕೋಡ್‌ನಲ್ಲಿ ‘ಅವೇಕ್ ಯೂತ್ ಕಾನ್‌ಕ್ಲೇವ್ 2024’ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ತಮ್ಮ ಮಾತಿನ ಕೊನೆಯಲ್ಲಿ ‘ಭಾರತ್ ಮಾತಾಕೀ ಜೈ’ ಎಂದು ಘೋಷಣೆ ಕೂಗಿದರು. ಈ ವೇಳೆ ಎಲ್ಲ ಪ್ರೇಕ್ಷಕರ ಬದಲಿಗೆ ಕೆಲವರಷ್ಟೇ ಸಹಕಾರ ನೀಡಿದರು.
ಈ ವೇಳೆ ಸಭೆಯಲ್ಲಿದ್ದ ಎಲ್ಲರೂ ಘೋಷಣೆಗೆ ಸಹಕಾರ ನೀಡುವಂತೆ ಮತ್ತೊಮ್ಮೆ ಹೇಳಿದರು. ಆ ಬಳಿಕವೂ ಕೆಲವರು ಮಾತ್ರ ಸಹಕರಿಸಿದ್ದರಿಂದ ತಾಳ್ಮೆ ಕಳೆದುಕೊಂಡ ಕೇಂದ್ರ ಸಚಿವೆ,” ಇಲ್ಲಿ ಕೂತಿರುವ ಕೆಲವರು ಕೈ ಕಟ್ಟಿ ಕುಳಿತಿದ್ದಾರೆ. ಭಾರತವು ನನ್ನ ತಾಯಿ ಮಾತ್ರವೇ? ನಿಮಗೆ ತಾಯಿಯಲ್ಲವೇ? ಘೋಷಣೆ ಕೂಗಲು ಏನು ಕಷ್ಟ” ಎಂದು ಪ್ರಶ್ನಿಸಿದರು.
Addressed Youth Conclave 2024 today in Kozhikode, Kerala.
The Modi Government in the last 10 years has been committed towards youth-led development as a result of which India has emerged as world’s third largest startup ecosystem. The Yuva Shakti will play a key role in the… pic.twitter.com/0Wxud2kUCV
— Meenakashi Lekhi (@M_Lekhi) February 3, 2024
ಆ ಬಳಿಕ ಹಳದಿ ಬಟ್ಟೆ ಧರಿಸಿದ್ದ ಮಹಿಳೆಯೋರ್ವರನ್ನು ಮೀನಾಕ್ಷಿ ಲೇಖಿ ಬೊಟ್ಟು ಮಾಡಿದರು. ಈ ವೇಳೆಯೂ ಪ್ರತಿಕ್ರಿಯೆ ನೀಡದ್ದಕ್ಕೆ ಆಕ್ರೋಶಗೊಂಡ ಸಚಿವೆ, “ಒಂದು ವೇಳೆ ನಿಮಗೆ ಭಾರತ್ ಮಾತಾಕಿ ಘೋಷಣೆ ಕೂಗುವುದಕ್ಕೆ ಕಷ್ಟವಾಗುವುದಾರೆ ಇಲ್ಲಿಂದ ಹೋಗಬಹುದು” ಎಂದು ಸೂಚಿಸಿದರು. ಈ ಎಲ್ಲ ಬೆಳವಣಿಗೆಗಳು ಕಾರ್ಯಕ್ರಮದಲ್ಲಿದ್ದ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.
Union Minister and BJP leader Meenakshi Lekhi loses her cool at Kerala audience for not responding loud enough to her “Bharat Mata ki Jai” chants in Kozhikode. She later asks the lady in the audience to leave the house. What arrogance! pic.twitter.com/xheHDEtwRX
— Mohammed Zubair (@zoo_bear) February 3, 2024
ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿರುವ ಸ್ವಾಯತ್ತ ಸಂಸ್ಥೆಯಾದ ನೆಹರು ಯುವ ಕೇಂದ್ರ, ಖೇಲೋ ಇಂಡಿಯಾ ಮತ್ತು ತಪಸ್ಯ ಸಂಘಟನೆಯು ‘ಅವೇಕ್ ಯೂತ್ ಕಾನ್‌ಕ್ಲೇವ್’ ಸಮಾವೇಶವನ್ನು ಆಯೋಜಿಸಿತ್ತು.
ಕೇಂದ್ರ ಸಚಿವೆಯ ಈ ರೀತಿಯ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿರುವ ದೇಶಾಭಿಮಾನ ಬಿಜೆಪಿ ಹಾಗೂ ಸಂಘಪರಿವಾರಕ್ಕೆ ತೋರುವ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.





