ಮತಗಳ್ಳತನ | ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಿ: ಎದ್ದೇಳು ಕರ್ನಾಟಕ ಆಗ್ರಹ

Date:

ಸಂಸತ್ತಿನ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ ಪತ್ರಿಕಾಗೋಷ್ಠಿ ಮತ್ತು ಬಿಚ್ಚಿಟ್ಟ ಮಾಹಿತಿಗಳು ಅನುಮಾನಕ್ಕೆ ಆಸ್ಪದವಿಲ್ಲದಂತಿದೆ. ಮಹದೇವಪುರ ವಿಧಾನಸಭಾ ವಲಯದ ಮತದಾರರ ಪಟ್ಟಿಯಲ್ಲಿ ನಡೆದಿರುವ ಅಪರಾಧಿ ಚಟುವಟಿಕೆಗಳು ಸಾಬೀತಾಗಿವೆ. ಈ ಕೂಡಲೇ ಚುನಾವಣಾ ಆಯೋಗ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಬೇಕು ಎಂದು ಎದ್ದೇಳು ಕರ್ನಾಟಕ ಆಗ್ರಹಿಸಿದೆ.

ಸೋಮವಾರ ಎದ್ದೇಳು ಕರ್ನಾಟಕದ ಕೇಂದ್ರಕಾರಿ ಸಮಿತಿ ಸದಸ್ಯರಾದ ತಾರಾರಾವ್, ಮುಹಮ್ಮದ್ ಯೂಸುಫ್ ಕನ್ನಿ, ಫಾ.ಅರುಣ್ ಲೂಯಿಸ್, ಕೆ.ಎಲ್.ಅಶೋಕ್, ಜೆ.ಎಂ.ವೀರಸಂಗಯ್ಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮತದಾರರ ಪಟ್ಟಿಯಲ್ಲಿ ಅಪರಾಧಿ ಚಟುವಟಿಕೆಗಳು ನಡೆದಿದೆ ಎಂದು ಹೇಳುತ್ತಿರುವುದು ಆರೋಪ ಮಾತ್ರವಲ್ಲ, ಸಾಕ್ಷ್ಯ. ಐದು ಬಗೆಯ ಅಕ್ರಮಗಳ ಕುರಿತು ಒಂದಲ್ಲ, ಸಾವಿರಾರು ಸಾಕ್ಷಿಗಳನ್ನು ಒದಗಿಸಲಾಗಿದೆ. ನಕಲು ಮತದಾರರನ್ನು ಸೃಷ್ಟಿಸಿರುವ, ತಂದೆಯ ಹೆಸರಿಲ್ಲದ, ವಿಳಾಸವಿಲ್ಲದ ಮತ ಚೀಟಿಗಳನ್ನು ವಿತರಿಸಿರುವ, ಭಾವಚಿತ್ರವೇ ಇಲ್ಲದಂತೆ ಅಥವಾ ಕಾಣದಂತೆ ಮತದಾನ ಚೀಟಿ ನೀಡಿರುವ, ಒಂದೇ ವಿಳಾಸದಲ್ಲಿ 40, 80 ಜನರಿಗೆ ಮತಚೀಟಿ ಸೃಷ್ಟಿಸಿರುವ, ಹೊಸ ಮತದಾರರಿಗೆ ನೀಡಬೇಕಾದ ಫಾರಂ ನಂಬರ್ 6ನ್ನು ದುರುಪಯೋಗ ಪಡಿಸಿಕೊಂಡಿರುವ, ಅಪರಾಧ ಸಾಕಷ್ಟು ಸಾಕ್ಷ್ಯಗಳ ಮೂಲಕ ಸಾಬೀತಾಗಿದೆ ಎಂದು ವಿವರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದು ಒಂದು ಲೋಕಸಭಾ ಕ್ಷೇತ್ರದ, ಒಂದು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಅಕ್ರಮ. ಇಡೀ ದೇಶದಲ್ಲಿ ನೂರಾರು ಕಡೆ ಇದು ನಡೆದಿರುವ ಎಲ್ಲ ಸಾಧ್ಯತೆಗಳೂ ಇವೆ. ಚುನಾವಣಾ ಫಲಿತಾಂಶ ಬಂದ ಕೂಡಲೇ ಅಕ್ರಮ ನಡೆದಿರುವ ಸಾಧ್ಯತೆಗಳ ಬಗ್ಗೆ ಎದ್ದೇಳು ಕರ್ನಾಟಕ ಹೇಳಿಕೆ ನೀಡಿತ್ತು. ಮರು ಮತದಾನಕ್ಕೆ ಹಾಕುವಂತೆ ಬೆಂಗಳೂರು ಕೇಂದ್ರದ ಅಭ್ಯರ್ಥಿಯನ್ನೂ ಒತ್ತಾಯಿಸಿತ್ತು. ಜುಲೈ 2024 ರಲ್ಲಿ ವೋಟ್ ಫಾರ್ ಡೆಮಾಕ್ರಸಿ ಎಂಬ ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿ, ಅದರಲ್ಲಿ ದೇಶದ 79 ಕ್ಷೇತ್ರಗಳಲ್ಲಿ ಮತ ಕಳವು ನಡೆದಿರುವುದಕ್ಕೆ ಸಾಂದರ್ಭಿಕ ಸಾಕ್ಷ್ಯವನ್ನು ಮುಂದಿಟ್ಟಿತ್ತು ಎಂದು ಸಮಿತಿ ಮಾಹಿತಿ ನೀಡಿದೆ.

ಚುನಾವಣಾ ಆಯೋಗ ಎಷ್ಟು ಮತದಾನ ನಡೆದಿದೆ ಎಂಬ ಬಗ್ಗೆ ನೀಡಿದ ಎರಡು ಸಂಖ್ಯೆಗಳ ನಡುವಿನ ಅಂತರ ಆ ಕ್ಷೇತ್ರದ ಗೆಲುವಿನ ಅಂತರಕ್ಕಿಂತ ಹೆಚ್ಚಿರುವುದನ್ನು ಗುರುತಿಸಿ ಈ ಕ್ಷೇತ್ರಗಳಲ್ಲಿ ಕಳವಾಗಿರುವ ಎಲ್ಲ ಸಾಧ್ಯತೆಗಳಿವೆ ಎಂದು ಆರೋಪಿಸಿತ್ತು. ಆ 79 ಕ್ಷೇತ್ರಗಳ ಪಟ್ಟಿಯನ್ನು ಒದಗಿಸಿತ್ತು. ಅದರಲ್ಲಿ ಕರ್ನಾಟಕದ 6 ಕ್ಷೇತ್ರಗಳ ಹೆಸರುಗಳು ಇದ್ದವು. ಅದರಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರವೂ ಇತ್ತು. ಈಗ ಈ 79 ಕ್ಷೇತ್ರದ ಪೈಕಿ ಒಂದು ಕ್ಷೇತ್ರದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ ಎಂದು ಸಮಿತಿ ತಿಳಿಸಿದೆ.

ಸಂವಿಧಾನ ಪದ್ದತಿಗೆ ವಿರುದ್ಧವಾಗಿ ಚುನಾವಣಾ ಆಯೋಗವನ್ನು ತಾನೇ ನೇಮಿಸಿರುವ ಬಿಜೆಪಿ ಸರಕಾರ, ಅದನ್ನು ಬಳಸಿಕೊಂಡು ಪ್ರಜಾತಂತ್ರವನ್ನು ಕೊಲೆಮಾಡಲು ಹೊರಟಿದೆ. ಜನಾಕ್ರೋಶ ಬೆಳೆಯುತ್ತಿದ್ದು, ಚುನಾವಣೆಗಳಲ್ಲಿ ಸೋಲುವ ಭೀತಿ ಹೆಚ್ಚಿರುವುದರಿಂದ, ಮತಗಳನ್ನು ಅಪಹರಿಸುವ ಮತ್ತು ಕಳ್ಳ ಮತಗಳನ್ನು ಬರೆಸುವ ಮತಮಾಫಿಯಾ ಕೆಲಸಕ್ಕೆ ಕೈಹಾಕಿದೆ. ಸಾಕ್ಷ್ಯಗಳನ್ನು ಮುಂದಿಟ್ಟಾಗ ಮೌನ ವಹಿಸುವುದು ಅಪರಾಧವನ್ನು ಮುಚ್ಚಿಡುವ ತಂತ್ರವಾಗುತ್ತದೆ. ಚುನಾವಣಾ ಆಯೋಗ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಬೇಕು ಎಂದು ಎದ್ದೇಳು ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.

ರಾಹುಲ್ ಗಾಂಧಿ ಬಿಚ್ಚಿಟ್ಟ ಸತ್ಯ ಎಂಬುದಾದರೆ ಅದನ್ನು ಚುನಾವಣಾ ಆಯೋಗ ತಡಮಾಡದೆ ಜನತೆಯ ಮುಂದಿಡಬೇಕು. ಅಥವಾ ತಾನು ಮಾಡಿದ ತಪ್ಪಿಗಾಗಿ ಜನತೆಯ ಮುಂದೆ ಕ್ಷಮೆ ಯಾಚಿಸಬೇಕು. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ, ಈ ಅಕ್ರಮದ ಕುರಿತು ತನಿಖೆಯಾಗಬೇಕು. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮರು ಮತದಾನಕ್ಕೆ ಆದೇಶ ಹೊರಡಿಸಬೇಕು. ಮತದಾರರ ಪಟ್ಟಿ ಮತ್ತು ಮತದಾನ ನಡೆದ ವಿಧಾನಕ್ಕೆ ಸಂಬಂಧಪಟ್ಟಂತೆ ಇರುವ ಎಲ್ಲ ಡಿಜಿಟಲ್ ಡಾಟಾವನ್ನು ಬಿಡುಗಡೆ ಮಾಡಬೇಕು ಎಂದು ಎದ್ದೇಳು ಕರ್ನಾಟಕ ಇದೇ ವೇಳೆ ಆಗ್ರಹಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

UAPA ದುರ್ಬಳಕೆ; ವಿಕಸಿತ ಭಾರತಕ್ಕೆ ಶೋಭೆ ತರಲ್ಲ: ಮೋಶಾ ಆಡಳಿತಕ್ಕೆ ಸುಪ್ರೀಂ ನ್ಯಾಯಮೂರ್ತಿ ತಪರಾಕಿ

"2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ...

ಕೇರಳ ಚುನಾವಣೆ | ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಪ್ರಕರಣಗಳು

ಏಪ್ರಿಲ್ 9ರಂದು ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಅಭ್ಯರ್ಥಿಗಳು...

ಸರ್ಕಾರಿ ಅಧಿಕಾರಿಯ ಆತ್ಮಹತ್ಯೆ ಪ್ರಕರಣ: ಪಂಜಾಬ್ ಮಾಜಿ ಸಚಿವ ಲಾಲ್ಜಿತ್ ವಿರುದ್ಧ ಎಫ್‌ಐಆರ್

ಪಂಜಾಬ್ ರಾಜ್ಯ ಗೋದಾಮು ನಿಗಮದ (ಪಿಎಸ್‌ಡಬ್ಲ್ಯೂಸಿ) ಜಿಲ್ಲಾ ವ್ಯವಸ್ಥಾಪಕ ಗಗನ್‌ದೀಪ್ ಸಿಂಗ್...

ಕೇರಳ | ಭಿನ್ನಮತೀಯರಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಆಗಲ್ಲ: ಸಿಪಿಐಎಂ

ಕೇರಳದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್‌ಡಿಎಫ್, ಯುಡಿಎಫ್‌,...