ವಿಶಾಖಪಟ್ಟಣದ ಡಾ. ವೈ ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರ ದ್ವಿಶತಕ ಹಾಗೂ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ಎರಡನೇ ದಿನ ಮೇಲುಗೈ ಸಾಧಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾದ ಆರಂಭಿಕ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಆಕರ್ಷಕ ದ್ವಿಶತಕ(209 ರನ್) ನೆರವಿನಿಂದ 396 ರನ್ ಗಳಿಸಿ ಟೀಮ್ ಇಂಡಿಯಾ ಆಲೌಟಾಗಿತ್ತು. ಆ ಬಳಿಕ ಕ್ರೀಸ್ಗಿಳಿದ ಇಂಗ್ಲೆಂಡ್ ಬ್ಯಾಟಿಂಗ್ ಪಡೆಯು, ಜಸ್ಪ್ರೀತ್ ಬುಮ್ರಾ ಹಾಗೂ ಸ್ಪಿನ್ನರ್ ಕುಲ್ದೀಪ್ ಯಾದವ್ ಮಾರಕ ದಾಳಿಗೆ ರನ್ ಗಳಿಸಲು ಪರದಾಡಿದರು. 253 ರನ್ ಗಳಿಸುವಷ್ಟರಲ್ಲಿ ಪ್ರವಾಸಿಗರು ಆಲೌಟ್ ಆದರು.
Stumps on Day 2 in Vizag! 🏟️
A fabulous day with the bat & ball 🙌#TeamIndia will resume Day 3 with a lead of 171 runs in the second innings 👌👌
Scorecard ▶️ https://t.co/X85JZGt0EV#INDvENG | @IDFCFIRSTBank pic.twitter.com/c3mVHem1Ty
— BCCI (@BCCI) February 3, 2024
ಇಂಗ್ಲೆಂಡ್ 253ಕ್ಕೆ ಆಲೌಟ್ ಆದ್ದರಿಂದ ಟೀಮ್ ಇಂಡಿಯಾ 143 ರನ್ಗಳ ಮುನ್ನಡೆ ಪಡೆದುಕೊಂಡಿತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ದಿನದಾಟದ ಮುಕ್ತಾಯದ ವೇಳೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 28 ರನ್ ದಾಖಲಿಸಿತು. ಆ ಮೂಲಕ ಒಟ್ಟು 171 ರನ್ಗಳ ಮುನ್ನಡೆ ಪಡೆದುಕೊಂಡಿದೆ. 13 ರನ್ಗಳಿಸಿರುವ ನಾಯಕ ರೋಹಿತ್ ಶರ್ಮಾ ಹಾಗೂ 15 ರನ್ ಗಳಿಸಿರುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಬುಮ್ರಾ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದ ಸ್ಟೋಕ್ಸ್ ಪಡೆ
ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಪ್ರವಾಸಿಗರು ಉತ್ತಮ ಮೊತ್ತ ಕಲೆ ಹಾಕುವ ಯೋಜನೆ ಹಾಕಿಕೊಂಡಿದ್ದರು. ಅದರ ಪ್ರಕಾರವೇ ಉತ್ತಮ ಆರಂಭ ಕೂಡ ನೀಡಿದ್ದರು. ಆದರೆ ಇದಕ್ಕೆ ಮೊದಲು ಕಡಿವಾಣ ಹಾಕಿದ್ದು ಟೀಮ್ ಇಂಡಿಯಾದ ಎಡಗೈ ಸ್ಪಿನ್ ಮಾಂತ್ರಿಕ ಕುಲ್ದೀಪ್ ಯಾದವ್.
Timber Striker Alert 🚨
A Jasprit Bumrah special 🎯 🔥
Drop an emoji in the comments below 🔽 to describe that dismissal
Follow the match ▶️ https://t.co/X85JZGt0EV#TeamIndia | #INDvENG | @Jaspritbumrah93 | @IDFCFIRSTBank pic.twitter.com/U9mpYkYp6v
— BCCI (@BCCI) February 3, 2024
ಬೆನ್ ಡಕೆಟ್ ಹಾಗೂ ಜಾಕ್ ಕ್ರಾಲಿ 59 ರನ್ಗಳ ಉತ್ತಮ ಜೊತೆಯಾಟ ನೀಡುತ್ತಾ ಮುಂದುವರಿಯುತ್ತಿದ್ದಾಗ ಬೆನ್ ಡಕೆಟ್(21 ರನ್) ಅವರನ್ನು ಔಟ್ ಮಾಡುವ ಕುಲ್ದೀಪ್ ಯಾದವ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.
ಆ ಬಳಿಕ ಶ್ರೇಯಸ್ ಅಯ್ಯರ್ ಹಿಡಿದ ಅದ್ಭುತ ಕ್ಯಾಚ್ಗೆ ಅರ್ಧಶತಕ ದಾಖಲಿಸಿ ಮುಂದುವರಿಯುತ್ತಿದ್ದ ಜಾಕ್ ಕ್ರಾಲಿ(76 ರನ್) ಬಲಿಯಾದರು. ಬಳಿಕ ಓಲಿ ಪೋಪ್(23 ರನ್) ಬುಮ್ರಾ ಮಾರಕ ಯಾರ್ಕರ್ಗೆ ಬಲಿಯಾದರು. ಜೋ ರೂಟ್(5 ರನ್) ಮತ್ತೆ ವಿಫಲರಾದರೆ, ಅರ್ಧ ಶತಕದತ್ತ ಮುಂದುವರಿಯುತ್ತಿದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (47) ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು.
𝘚𝘵𝘰𝘬𝘦𝘴’ 𝘳𝘦𝘢𝘤𝘵𝘪𝘰𝘯 𝘴𝘢𝘺𝘴 𝘪𝘵 𝘢𝘭𝘭 😱
1⃣5⃣0⃣ Test wickets for the Wrecker-in-chief! 🤌#Bumrah #INDvENG #BazBowled #IDFCFirstBankTestsSeries #JioCinemaSports pic.twitter.com/cWG7HfKqir
— JioCinema (@JioCinema) February 3, 2024
ಈ ವೇಳೆ ಬೆನ್ ಸ್ಟೋಕ್ಸ್ ನೀಡಿದ ಪ್ರತಿಕ್ರಿಯೆಯೇ ಬುಮ್ರಾ ಬೌಲಿಂಗ್ ಅನ್ನು ಹೊಗಳಿದಂತಿತ್ತು. ತನ್ನ ಬ್ಯಾಟನ್ನು ಕೆಳಕ್ಕೆ ಹಾಕಿ, ಯಾವ ರೀತಿಯ ಬೌಲಿಂಗ್ ಇದು ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಬುಮ್ರಾ ಅದ್ಭುತ ಯಾರ್ಕರ್ಗೆ ಓಲಿ ಪೋಪ್ ಕ್ಲೀನ್ಬೌಲ್ಡ್: ‘ಪ್ರಶಸ್ತಿಗೆ ಅರ್ಹವಾದ ಎಸೆತ’ ಎಂದ ನೆಟ್ಟಿಗರು!
ಆ ಬಳಿಕ ಜಾನಿ ಬೈರ್ಸ್ಟೋವ್ (25 ರನ್), ಬೆನ್ ಫೋಕ್ಸ್ (6 ರನ್), ರೆಹಾನ್ ಅಹ್ಮದ್ 6 ರನ್, ಟಾಮ್ ಹಾರ್ಟ್ಲೀ 21, ಜೇಮ್ಸ್ ಆಂಡರ್ಸನ್ 6 ಗಳಿಸಿ ಔಟಾದರು. ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆಗೈದಿರುವ ಶೋಯೇಬ್ ಬಶೀರ್ 8 ರನ್ ಗಳಿಸಿ, ಔಟಾಗದೆ ಉಳಿದರು.
ಬುಮ್ರಾಗೆ 5 ವಿಕೆಟ್ ಗೊಂಚಲಿನ ಜೊತೆಗೆ 150 ವಿಕೆಟ್ ಸಾಧನೆ
ಬುಮ್ರಾ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 45 ರನ್ ನೀಡಿ ಪ್ರಮುಖ ಆರು ವಿಕೆಟ್ಗಳನ್ನು ಪಡೆದಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 10ನೇ ಬಾರಿಗೆ ಐದು ವಿಕೆಟ್ ಗೊಂಚಲು ಪಡೆದುಕೊಂಡ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ 150 ವಿಕೆಟ್ ಪಡೆದ ಸಾಧನೆ ಮಾಡಿದ ಮೈಲಿಗಲ್ಲನ್ನು ತಲುಪಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾದ ಪರ ಬೌಲಿಂಗ್ನಲ್ಲಿ ಬುಮ್ರಾ 45 ರನ್ ನೀಡಿ ಆರು ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 71 ರನ್ ನೀಡಿ ಮೂರು ವಿಕೆಟ್ ಪಡೆದಿದ್ದಾರೆ. ಅಕ್ಸರ್ ಪಟೇಲ್ ಒಂದು ವಿಕೆಟ್ ತನ್ನದಾಗಿಸಿಕೊಂಡರು.





