ಐಪಿಎಲ್ | ಅಭಿಮಾನಿಗಳನ್ನು ಸತಾಯಿಸಿ ಗುಜರಾತ್ ವಿರುದ್ಧ ಜಯ ಪಡೆದ ಆರ್‌ಸಿಬಿ: ಪ್ಲೇ-ಆಫ್ ಆಸೆ ಜೀವಂತ?

Date:

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌ನ 52ನೇ ಪಂದ್ಯದಲ್ಲಿ ಆತಿಥೇಯ ಆರ್‌ಸಿಬಿ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 4 ವಿಕೆಟ್‌ಗಳ ಜಯ ದಾಖಲಿಸಿದೆ. ಆದರೆ, ಈ ಪಂದ್ಯವು ಹಲವು ನಾಟಕೀಯ ತಿರುವುಗಳಿಗೆ ಸಾಕ್ಷಿಯಾಗುವ ಮೂಲಕ ಅಭಿಮಾನಿಗಳನ್ನು ಆತಂಕಕ್ಕೆ ದೂಡಿದ ಪ್ರಸಂಗವೂ ನಡೆಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟನ್ಸ್ ತಂಡವು ಆರ್‌ಸಿಬಿ ತಂಡದ ಬಿಗಿ ಬೌಲಿಂಗ್ ದಾಳಿಗೆ ನಲುಗಿ 19.3 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಗುವ ಮೂಲಕ, 148 ರನ್‌ಗಳ ಗುರಿ ನೀಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಗುರಿಯನ್ನು ಬೆನ್ನಟ್ಟಿದ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ಉತ್ತಮ ಆರಂಭ ಪಡೆದಿತ್ತು. ಮೊದಲ ಓವರ್‌ನಿಂದಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ 5.4 ಓವರ್‌ಗಳಲ್ಲಿ 92 ರನ್ ದಾಖಲಿಸಿದ್ದರು. ಆದರೆ ಫಾಫ್ ಡು ಪ್ಲೆಸಿಸ್ ಔಟಾದ ನಂತರ ನಡೆದ ದಿಢೀರ್ ಬೆಳವಣಿಗೆಯಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 92 ರನ್ ವೇಳೆ ಯಾವುದೇ ವಿಕೆಟ್ ನೀಡದಿದ್ದ ಆರ್‌ಸಿಬಿ, 117 ರನ್ ಗಳಿಸುವಷ್ಟರಲ್ಲಿ ಜೋಶ್ ಲಿಟ್ಟಲ್ ಅವರ ಮಾರಕ ದಾಳಿಗೆ ಸಿಲುಕಿ 6 ವಿಕೆಟ್ ಕಳೆದುಕೊಂಡಿತು.

ಕೊನೆಯಲ್ಲಿ ಆಧಾರವಾಗಿ ನಿಂತ ದಿನೇಶ್ ಕಾರ್ತಿಕ್ ಹಾಗೂ ಸ್ವಪ್ನಿಲ್ ಸಿಂಗ್ ತಾಳ್ಮೆಯ ಆಟವಾಡಿ 13.4 ಓವರ್‌ಗಳಲ್ಲಿ 152 ರನ್ ಗಳಿಸಿ, ಇನ್ನೂ 38 ಎಸೆತಗಳು ಬಾಕಿ ಇರುವಾಗಲೇ ಗೆಲುವು ದಾಖಲಿಸಿತು.

ಕಳೆದ ಮೂರೂ ಪಂದ್ಯಗಳಲ್ಲಿ ಮೂರನ್ನೂ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್‌ಸಿಬಿ, 7ನೇ ಸ್ಥಾನಕ್ಕೆ ಬಂದು ನಿಂತಿದೆ. ಆ ಮೂಲಕ ಪ್ಲೇ-ಆಫ್ ಆಸೆಯನ್ನೂ ಇನ್ನೂ ಕೂಡ ಅಭಿಮಾನಿಗಳಲ್ಲಿ ಜೀವಂತವಾಗಿರಿಸಿದೆ.

92ಕ್ಕೆ ಶೂನ್ಯ ವಿಕೆಟ್; 117ಕ್ಕೆ ಆರು ವಿಕೆಟ್!

ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ 5.4 ಓವರ್‌ಗಳಲ್ಲಿ 92 ರನ್‌ಗಳ ಜೊತೆಯಾಟ ನಡೆಸುವ ಮೂಲಕ ಸುಲಭ ಜಯ ನಿರೀಕ್ಷೆ ಹುಟ್ಟಿಸಿದ್ದರು.

ಕ್ಯಾಪ್ಟನ್​​​ ಫಾಫ್​ ಡುಪ್ಲೆಸಿಸ್​​ ಭರ್ಜರಿ ಬ್ಯಾಟಿಂಗ್​ ಮಾಡಿ, ವಲ 23 ಬಾಲ್​ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದರು. ಬರೋಬ್ಬರಿ 3 ಸಿಕ್ಸರ್​​, 10 ಬೌಂಡರಿ  ಸಮೇತ 64 ರನ್​ ಸಿಡಿಸಿದರು. ಬಳಿಕ ಬಂದ ಬ್ಯಾಟರ್‌ಗಳಾದ ವಿಲ್ ಜಾಕ್ಸ್‌(1 ರನ್), ರಜತ್ ಪಾಟೀದಾರ್(2 ರನ್), ಗ್ಲೆನ್ ಮ್ಯಾಕ್ಸ್‌ವೆಲ್ (4), ಕ್ಯಾಮರೂನ್ ಗ್ರೀನ್(1 ರನ್) ಪೆವಿಲಿಯನ್ ಪರೇಡ್ ನಡೆಸಿದರು. 42 ರನ್( ಗಳಿಸಿ ಆಸರೆಯಾಗುತ್ತಿದ್ದ ವಿರಾಟ್ ಕೊಹ್ಲಿ ಕೂಡ ಕ್ಯಾಚಿತ್ತು ನಿರ್ಗಮಿಸಿದರು.

ಜೋಶ್ ಲಿಟ್ಟಲ್ ಹಾಗೂ ನೂರ್ ಅಹ್ಮದ್ ಅವರ ಕರಾರುವಾಕ್ಕಾದ ಮಾರಕ ದಾಳಿಗೆ ಸಿಲುಕಿದ ಆರ್‌ಸಿಬಿ, 117ಕ್ಕೆ ಆರು ವಿಕೆಟ್ ಕಳೆದುಕೊಳ್ಳುವ ಮೂಲಕ ಅಭಿಮಾನಿಗಳ ಎದೆಯಲ್ಲಿ ಸೋಲಿನ ಆತಂಕ ಮೂಡಿಸುವ ಮೂಲಕ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.

ಕೊನೆಯಲ್ಲಿ ದಿನೇಶ್ ಕಾರ್ತಿಕ್ ಹಾಗೂ ಸ್ವಪ್ನಿಲ್ ಸಿಂಗ್ ತಾಳ್ಮೆಯ ಆಟವಾಡಿದ್ದರಿಂದ 13.4 ಓವರ್‌ಗಳಲ್ಲಿ ಗೆಲುವಿನ ದಡ ತಲುಪಿಸಿದರು. ಮೊದಲು ಅಭಿಮಾನಿಗಳೆಲ್ಲರಿಗೂ ಖುಷಿ ನೀಡಿ, ಆ ಬಳಿಕ ಭಾರೀ ಭಯ ಹುಟ್ಟಿಸಿ, ಕೊನೆಯಲ್ಲಿ ಬಳಿಕ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.

ದಿನೇಶ್ ಕಾರ್ತಿಕ್ 12 ಎಸೆತಗಳಲ್ಲಿ 3 ಬೌಂಡರಿಯ ನೆರವಿನಿಂದ 21 ರನ್ ಗಳಿಸಿದರೆ, ಸ್ವಪ್ನಿಲ್ ಸಿಂಗ್ 9 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 2 ಬೌಂಡರಿಯ ನೆರವಿನಿಂದ 15 ರನ್ ಬಾರಿಸಿದರು.

ಗುಜರಾತ್ ಪರ ಉತ್ತಮ ಬೌಲಿಂಗ್ ನಡೆಸಿದ ಐರ್ಲೆಂಡ್‌ನ ಯುವ ಬೌಲರ್ ಜೋಶ್ ಲಿಟ್ಟಲ್ 4 ಓವರ್‌ಗಳಲ್ಲಿ 45 ರನ್ ನೀಡಿದರೂ 4 ವಿಕೆಟ್ ಕಬಳಿಸಿ ಮಿಂಚಿದರೆ, ಅಫ್ಘಾನಿಸ್ತಾನ ಮೂಲದ ಸ್ಪಿನ್ನರ್ ನೂರ್ ಅಹ್ಮದ್ 23ಕ್ಕೆ 2 ವಿಕೆಟ್ ಪಡೆದುಕೊಂಡರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...