ನಾನಿನ್ನೂ ಜೀವಂತವಿದ್ದೇನೆ : ನಿಧನ ವದಂತಿಗೆ ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಹೀತ್‌ ಸ್ಟ್ರೀಕ್‌ ತೆರೆ

Date:

  • ‘ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟ್‌ ದಿಗ್ಗಜ ಹೀತ್‌ ಸ್ಟ್ರೀಕ್‌ ನಿಧನ’ ಎಂದು ಸುದ್ದಿ
  • ‘ಥರ್ಡ್ ಅಂಪೈರ್‌ ಅವರನ್ನು ಮರಳಿ ಕರೆತಂದಿದ್ದಾರೆ’ ಎಂದ ಗೆಳೆಯ ಹೆನ್ರಿ ಒಲಾಂಗ

ತನ್ನ ನಿಧನ ವದಂತಿಗೆ ಸ್ಪಷ್ಟೀಕರಣ ನೀಡಿರುವ ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಹೀತ್‌ ಸ್ಟ್ರೀಕ್‌, ‘ನಾನಿನ್ನೂ ಜೀವಂತವಿದ್ದೇನೆ. ದಯವಿಟ್ಟು ಈ ಕೂಡಲೇ ರನೌಟ್ ತೀರ್ಪನ್ನು ಹಿಂಪಡೆಯಿರಿ’ ಎಂದು ತಿಳಿಸಿದ್ದಾರೆ.

ಜಿಂಬಾಬ್ವೆ ಕ್ರಿಕೆಟ್‌ ದಿಗ್ಗಜ ಹೀತ್‌ ಸ್ಟ್ರೀಕ್‌ (49) ಕೊನೆಯುಸಿರೆಳೆದಿದ್ದಾರೆ. ಮಾಜಿ ಆಲ್‌ರೌಂಡರ್‌ ಕ್ಯಾನ್ಸರ್‌ನಿಂದ ಬಳಲಿದ್ದರು. ಕ್ಯಾನ್ಸರ್‌ ವಿರುದ್ಧ ಹೋರಾಡಿ ಚೇತರಿಸುವ ಪ್ರಯತ್ನ ಮಾಡಿದ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ ಎಂದು ಹೀತ್‌ ಸ್ಟ್ರೀಕ್‌ ಅವರ ಮಾಜಿ ಸಹೋದ್ಯೋಗಿಗಳು ಮಾಹಿತಿ ಹಂಚಿಕೊಂಡಿರುವುದಾಗಿ ವರದಿಯಾಗಿತ್ತು. ಇದು ಸೋಷಿಯಲ್ ಮೀಡಿಯಾ ಸೇರಿದಂತೆ ಮಾಧ್ಯಮಗಳಲ್ಲೂ ಬಿತ್ತರಗೊಂಡಿತ್ತು.

ಈ ಬಗ್ಗೆ ‘ಮಿಡ್-ಡೇ’ ಮಾಧ್ಯಮದೊಂದಿಗೆ ಮಾತನಾಡಿರುವ ಹೀತ್‌ ಸ್ಟ್ರೀಕ್‌, ‘ಇದು ಸಂಪೂರ್ಣ ಸುಳ್ಳು ವದಂತಿ. ನಾನು ಜೀವಂತವಾಗಿದ್ದೇನೆ ಮತ್ತು ಚೆನ್ನಾಗಿಯೇ ಇದ್ದೇನೆ. ಸಾಮಾಜಿಕ ಮಾಧ್ಯಮ ಇರುವ ಈ ಯುಗದಲ್ಲಿಯೂ ಕೂಡ ಇಂತಹ ಸುದ್ದಿಗಳನ್ನು ದೃಢಪಡಿಸದೆ ಹಂಚಿರುವುದು ನಿಜಕ್ಕೂ ಬೇಸರ ತರಿಸಿದೆ. ಇದರಿಂದ ನಾನು ತುಂಬಾ ಅಸಮಾಧಾನಗೊಂಡಿದ್ದೇನೆ. ಇದನ್ನು ಹರಡಿದವರು ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ಹೀತ್‌ಸ್ಟ್ರೀಕ್‌ ನಿಧನ ಹೊಂದಿದ್ದಾರೆ’ ಎಂದು ಟ್ವಿಟರ್‌ನಲ್ಲಿ ಅವರ ಮಾಜಿ ಸಹೋದ್ಯೋಗಿ ಹಾಗೂ ಆಪ್ತ ಗೆಳೆಯ ಹೆನ್ರಿ ಒಲಾಂಗ ಕೂಡ ಹಂಚಿಕೊಂಡಿದ್ದರು. ಬಳಿಕ ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು.

‘ಅವರು ನಿಧನರಾಗಿಲ್ಲ’ ಎಂದು ದೃಢವಾದ ನಂತರ ಮೊದಲ ಟ್ವೀಟ್ ಅನ್ನು ಡಿಲೀಟ್ ಮಾಡಿರುವ ಹೆನ್ರಿ ಒಲಾಂಗ, ಹೀತ್‌ ಸ್ಟ್ರೀಕ್‌ ಜೊತೆಗಿನ ವಾಟ್ಸ್‌ಆಪ್‌ ಸಂಭಾಷಣೆಯ ಸ್ಕ್ರೀನ್‌ ಶಾಟ್‌ ಅನ್ನು ಹಂಚಿಕೊಂಡಿದ್ದಾರೆ.

“ಹೀತ್‌ ಸ್ಟ್ರೀಕ್‌ ಸತ್ತಿದ್ದಾರೆ ಎಂಬ ಸುದ್ದಿ ತಪ್ಪಾಗಿ ಹಬ್ಬಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಇದರ ವೈಭವೀಕರಣವೂ ನಡೆದಿದೆ. ಅವರಿಂದಲೇ ಈಗ ಮಾಹಿತಿ ಲಭ್ಯವಾಗಿದ್ದು, ಥರ್ಡ್ ಅಂಪೈರ್‌ ಅವರನ್ನು ಮರಳಿ ಕರೆತಂದಿದ್ದಾರೆ. ಪ್ರೀತಿಯ ಜನರೇ, ಅವರಿನ್ನೂ ಬದುಕಿದ್ದಾರೆ,” ಎಂದು ಹೆನ್ರಿ ಒಲಾಂಗ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...