ಸೈಂಟ್ ಲೂಸಿಯಾದ ಡೇರೆನ್ ಸಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು(ಜೂನ್ 24) ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್ 2024ರ ಸೂಪರ್ 8ರ ಘಟ್ಟದ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ 24 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಆ ಮೂಲಕ 2023ರ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಸೆಮಿಫೈನಲ್ ಪ್ರವೇಶಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಟೀಮ್ ಇಂಡಿಯಾವು, ನಾಯಕ ರೋಹಿತ್ ಶರ್ಮಾ ಅವರ ಭರ್ಜರಿ ಅರ್ಧಶತಕದ ನೆರವಿನಿಂದ 205 ರನ್‌ಗಳನ್ನು ದಾಖಲಿಸಿತ್ತು.
206 ರನ್‌ಗಳ ಗುರಿಯನ್ನು ಬೆನ್ನಟ್ಟಲು ಹೊರಟ ಮಿಚೆಲ್ ಮಾರ್ಷ್ ನೇತೃತ್ವದ ಆಸ್ಟೇಲಿಯಾವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 24 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಆಸ್ಟ್ರೇಲಿಯಾವು ಸೋಲೊಪ್ಪಿಕೊಂಡಿದೆ.
ಜೂನ್ 24ರಂದು ಸೈಂಟ್ ವಿನ್ಸೆಂಟ್‌ನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ವ್ಯರ್ಥವಾದ ಟ್ರಾವಿಸ್ ಹೆಡ್ ಹೋರಾಟ
ಭಾರತ ನೀಡಿದ್ದ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಕೇವಲ 6 ರನ್ ಗಳಿಸಿ ವಾರ್ನರ್ ಅರ್ಶ್ ದೀಪ್ ಸಿಂಗ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಈ ಹಂತದಲ್ಲಿ ಜೊತೆಗೂಡಿದ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಶ್ 81 ರನ್ ಗಳ ಅಮೋಘ ಜೊತೆಯಾಟವಾಡಿದರು.
ಒಂದು ಹಂತದಲ್ಲಿ ಪಂದ್ಯ ಭಾರತ ತಂಡದ ಕೈತಪ್ಪುವ ಅಪಾಯ ಕೂಡ ಇತ್ತು. ಈ ಹಂತದಲ್ಲಿ ಅಕ್ಸರ್ ಪಟೇಲ್ ಹಿಡಿದ ಕ್ಯಾಚ್ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ಭಾರತ ತಂಡಕ್ಕೆ ಅಪಾಯಕಾರಿಯಾಗಿ ಬ್ಯಾಟ್ ಮಾಡುತ್ತಿದ್ದ ಮಿಚೆಲ್ ಮಾರ್ಶ್ ಅಕ್ಸರ್ ಪಟೇಲ್ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರು.
𝐀𝐗𝐀𝐑, 𝘮𝘶𝘫𝘩𝘦 𝘭𝘰𝘨 𝙎𝙪𝙥𝙚𝙧𝙢𝙖𝙣 𝘬𝘦𝘩𝘵𝘦 𝘩𝘢𝘪𝘯 💥
An incredible catch by #AxarPatel to dismiss the Aussie skipper and #KuldeepYadav provides a much-needed breakthrough in the #𝐒𝐮𝐩𝐞𝐫𝐑𝐢𝐯𝐚𝐥𝐫𝐲 💪🏽
𝐒𝐔𝐏𝐄𝐑 𝟖 👉 #AUSvIND | LIVE NOW |… pic.twitter.com/OOC5OkCymx
— Star Sports (@StarSportsIndia) June 24, 2024
ಕುಲ್‌ದೀಪ್ ಯಾದವ್ ಎಸೆದ 9ನೇ ಓವರ್ ನ ಕೊನೆಯ ಎಸೆತದಲ್ಲಿ ಮಾರ್ಶ್ ಅದ್ಭುತ ಹೊಡೆತಕ್ಕೆ ಮುಂದಾಗಿ ಅಕ್ಸರ್ ಪಟೇಲ್ ಕ್ಯಾಚಿತ್ತು ಔಟಾದರು. ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಲು ಮಾರ್ಶ್ ಯತ್ನಿಸಿದರೂ ಬೌಂಡರಿ ಲೈನ್ ಬಳಿ ಅಕ್ಸರ್ ಪಟೇಲ್ ಆ ಎಸೆತವನ್ನು ಅದ್ಭುತವಾಗಿ ಜಂಪ್ ಮಾಡಿ ಹಿಡಿತಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಆ ಮೂಲಕ ಇಡೀ ಪಂದ್ಯಕ್ಕೆ ಮೊದಲ ತಿರುವು ನೀಡಿದರು.
India dominate Australia to meet England in the semi-finals!
All eyes on Afghanistan vs Bangladesh now 🍿
🔗 https://t.co/etvj2zKuxs | #INDvAUS pic.twitter.com/Pq86hu6XXn
— ESPNcricinfo (@ESPNcricinfo) June 24, 2024
ಆಸ್ಟ್ರೇಲಿಯಾ-ಅಫ್ಘಾನಿಸ್ತಾನಕ್ಕೆ ತೆರೆದ ‘ಸೆಮಿ’ ಬಾಗಿಲು!
ಟೀಮ್ ಇಂಡಿಯಾ ವಿರುದ್ಧದ ಇಂದಿನ ಪಂದ್ಯದಲ್ಲಿ ಸೋತರೂ ಕೂಡ ಆಸ್ಟ್ರೇಲಿಯಾಗೂ ಕೂಡ ಸೆಮಿಫೈನಲ್‌ಗೆ ತೆರಳಲು ಅವಕಾಶವಿದೆ. ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಒಂದು ವೇಳೆ ಅಫ್ಘಾನಿಸ್ತಾನ ಸೋತಲ್ಲಿ, ರನ್‌ರೇಟ್ ಆಧಾರದಲ್ಲಿ ಆಸ್ಟ್ರೇಲಿಯಾವು ಸೆಮಿಫೈನಲ್ ಪ್ರವೇಶಿಸಲಿದೆ. ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಗೆದ್ದಲ್ಲಿ ಆಸ್ಟ್ರೇಲಿಯಾದ ಸೆಮಿಫೈನಲ್ ಕನಸಿಗೆ ತೆರೆ ಬೀಳಲಿದೆ.
ಬಾಂಗ್ಲಾದೇಶಕ್ಕೂ ಇದೆ ಒಂದು ಚಾನ್ಸ್
ಟೀಮ್ ಇಂಡಿಯಾ ಇಂದು ಆಸ್ಟ್ರೇಲಿಯಾ ವಿರುದ್ಧ ಗೆದ್ದ ಬಳಿಕ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ-ಅಫ್ಘಾನಿಸ್ತಾನಕ್ಕೆ ಮಾತ್ರವಲ್ಲದೇ, ಬಾಂಗ್ಲಾದೇಶಕ್ಕೂ ಕೂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವಿದೆ.
ಕುತೂಹಲಕಾರಿ ಅರ್ಹತೆಯ ಸನ್ನಿವೇಶ ಸದ್ಯ ನಿರ್ಮಾಣವಾಗಿದ್ದು, ಅಫ್ಘಾನ್ ವಿರುದ್ಧ ಬಾಂಗ್ಲಾದೇಶವು 61 ರನ್‌ಗಳಿಗಿಂತ ಹೆಚ್ಚು ಗೆದ್ದರೆ ಅಥವಾ 13 ಓವರ್‌ಗಳಲ್ಲಿ ಚೇಸ್ ಮಾಡಿದರೆ ಅರ್ಹತೆ ಪಡೆಯಲಿದೆ. ಬಾಂಗ್ಲಾದೇಶ 61 ರನ್‌ಗಳಿಗಿಂತ ಕಡಿಮೆ ಅಂತರದಲ್ಲಿ ಗೆದ್ದರೆ ಆಸ್ಟ್ರೇಲಿಯಾ ಅರ್ಹತೆ ಪಡೆಯುತ್ತದೆ. ಬಾಂಗ್ಲಾದೇಶವನ್ನು ಸೋಲಿಸಿದರೆ ಅಫ್ಘಾನಿಸ್ತಾನ ಅರ್ಹತೆ ಪಡೆಯುತ್ತದೆ.
AFGHANISTAN WILL QUALIFY FOR SEMI FINAL:
– If they beat Bangladesh, Australia will be knocked out. 🇦🇫 pic.twitter.com/0ZeDp1Ycx6
— Mufaddal Vohra (@mufaddal_vohra) June 24, 2024





