ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಇಂದು ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಕೇವಲ 1 ರನ್ಗಳಿಂದ ಸೋತಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಫಿಲ್ ಸಾಲ್ಟ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿ, ಆರ್ಸಿಬಿ ತಂಡಕ್ಕೆ 223 ರನ್ಗಳ ಸವಾಲಿನ ಗುರಿ ನೀಡಿತ್ತು.
ಈ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ, ಕೊನೆಯ ಓವರ್ನಲ್ಲಿ ಎಡವಿದ ಪರಿಣಾಮ ಕೇವಲ 1 ರನ್ಗಳ ಅಂತರದಿಂದ ಸೋಲಿಗೆ ಶರಣಾಯಿತು.
📽️ WATCH: A jaw-dropping finish!
The final delivery that sealed the win for the @KKRiders 👏👏
Scorecard ▶️ https://t.co/hB6cFsk9TT#TATAIPL | #KKRvRCB pic.twitter.com/BR5RYrOeDM
— IndianPremierLeague (@IPL) April 21, 2024
ಆರ್ಸಿಬಿಗೆ ಗೆಲ್ಲಲು ಕೊನೆಯ ಓವರ್ನಲ್ಲಿ 21 ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಕೆಕೆಆರ್ ಪರ ಬೌಲಿಂಗ್ ದಾಳಿಗಿಳಿದ ಮಿಚೆಲ್ ಸ್ಟಾರ್ಕ್ ಓವರ್ನಲ್ಲಿ ಕ್ರೀಸ್ನಲ್ಲಿದ್ದ ಆರ್ಸಿಬಿ ಸ್ಪಿನ್ ಬೌಲರ್ ಕರಣ್ ಶರ್ಮಾ, ಅನಿರೀಕ್ಷಿತವಾಗಿ ಮೂರು ಸಿಕ್ಸರ್ ಬಾರಿಸುವ ಮೂಲಕ ಗೆಲುವಿನ ನಿರೀಕ್ಷೆ ಹುಟ್ಟಿಸಿದರು. ಆದರೆ 5ನೇ ಎಸೆತದಲ್ಲಿ ಸ್ಟಾರ್ಕ್ಗೆ ಕ್ಯಾಚಿತ್ತು ನಿರ್ಗಮಿಸಿದರು.
THE WINNING MOMENT OF KKR. 💥
– Phil Salt, the hero of the day! pic.twitter.com/avMnuI5DKK
— Mufaddal Vohra (@mufaddal_vohra) April 21, 2024
ಕೊನೆಯ ಬಾಲ್ನಲ್ಲಿ ಮೂರು ರನ್ಗಳ ಅವಶ್ಯಕತೆ ಇದ್ದಾಗ ಬ್ಯಾಟಿಂಗ್ಗೆ ಬಂದ ಲಾಕಿ ಫರ್ಗೂಸನ್ ಬೌಂಡರಿ ಹೊಡೆಯುವ ಪ್ರಯತ್ನ ವಿಫಲವಾಯಿತು. ಎರಡು ರನ್ ಕದಿಯುವ ಯತ್ನದಲ್ಲಿ ವಿಫಲವಾದ ಫರ್ಗೂಸನ್, ಕೆಕೆಆರ್ನ ಫಿಲ್ ಸಾಲ್ಟ್ ಅವರು ಅದ್ಭುತ ಡೈವಿಂಗ್ ಮೂಲಕ ರನೌಟ್ ಮಾಡಿದ್ದರಿಂದ ಆರ್ಸಿಬಿ 1 ರನ್ನಿಂದ ವಿರೋಚಿತವಾಗಿ ಸೋಲಿಗೆ ಶರಣಾಯಿತು.
Karn Sharma was emotional after the match. 🥺💔
– We’re proud of your efforts, Karn! 👏 pic.twitter.com/JVmt1lNYIT
— Mufaddal Vohra (@mufaddal_vohra) April 21, 2024
ಒಂದು ವೇಳೆ ರನ್ ಪೂರ್ತಿಯಾಗಿದ್ದಿದ್ದರೆ ಪಂದ್ಯ ಟೈ ಆಗಿ, ಸೂಪರ್ ಓವರ್ ಆಗುತ್ತಿತ್ತು. ಆದರೆ ಆರ್ಸಿಬಿಗೆ ನಸೀಬು ಕೈಕೊಟ್ಟಿತು. ಆರ್ಸಿಬಿ ಸೋತ ಬಳಿಕ ಪಂದ್ಯವನ್ನು ರೋಚಕತೆಗೆ ಸಾಗಿಸಿದ್ದ ಕರಣ್ ಶರ್ಮಾ ಕಣ್ಣೀರಿಟ್ಟರು. 223 ರನ್ ಗುರಿ ಬೆನ್ನಟ್ಟಿದ ಆರ್ಸಿಬಿ 20 ಓವರ್ಗಳಲ್ಲಿ 221 ರನ್ ಗಳಿಸಿ ಆಲೌಟಾಯಿತು.
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2024ರಲ್ಲಿ ಸೋಲಿನ ಕೂಪದಿಂದ ಎದ್ದು ಬರಲು ಮತ್ತೊಮ್ಮೆ ವಿಫಲವಾಗಿದ್ದು, ಪ್ಲೇ ಆಫ್ ಹಂತ ತಲುಪುವ ಕನಸು ಬಹುತೇಕ ಅಂತ್ಯಗೊಂಡಂತಾಗಿದೆ. ಆಡಿದ 8 ಪಂದ್ಯಗಳಲ್ಲಿ 7 ಸೋಲು ಮತ್ತು 1 ಗೆಲುವು ಸಾಧಿಸಿದ್ದು, ಕೇವಲ 2 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.





