ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 44ನೇ ಪಂದ್ಯದಲ್ಲಿ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡವು ಭರ್ಜರಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ಮತ್ತೊಂದು ಗೆಲುವು ಸಾಧಿಸಿದ್ದು, ಆಡಿದ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿ 16 ಅಂಕ ಸಂಪಾದಿಸುವುದರ ಜೊತೆಗೆ ಪ್ಲೇ ಆಫ್ ಟಿಕೆಟ್ ಖಚಿತಪಡಿಸಿಕೊಂಡಿದೆ. ಸಂಜು ಸ್ಯಾಮ್ಸನ್ ನೇತೃತ್ವದ ತಂಡವು 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿದಿದೆ.
Winning streak continues 🩷
A Sanju Samson special & Dhruv Jurel’s attractive innings propel Rajasthan Royals to their 8th win this season🙌
Scorecard ▶️ https://t.co/Dkm7eJqwRj#TATAIPL | #LSGvRR | @rajasthanroyals pic.twitter.com/cam0GepXVo
— IndianPremierLeague (@IPL) April 27, 2024
ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ, ನಾಯಕ ಕೆಎಲ್ ರಾಹುಲ್ ಮತ್ತು ದೀಪಕ್ ಹೂಡಾ ಅವರ ಅರ್ಧಶತಕಗಳ ನೆರವಿನಿಂದ 20 ಓವರ್ಗಳಲ್ಲಿ ಐದು ವಿಕೆಟ್ಗೆ 196 ರನ್ ಗಳಿಸಿತ್ತು. 197 ರನ್ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡವು, ನಾಲ್ಕನೇ ವಿಕೆಟ್ಗೆ ಸ್ಯಾಮ್ಸನ್ ಮತ್ತು ಜುರೆಲ್ ಅವರ ಶತಕದ ಜೊತೆಯಾಟದಿಂದಾಗಿ ಒಂದು ಓವರ್ ಬಾಕಿ ಇರುವಂತೆಯೇ ಮೂರು ವಿಕೆಟ್ಗಳಿಗೆ 199 ರನ್ ಗಳಿಸಿ ಜಯಗಳಿಸಿತು.
ಸ್ಮರ್ಧಾತ್ಮಕ ಮೊತ್ತದ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ 24 ರನ್ ಮತ್ತು ಜೋಸ್ ಬಟ್ಲರ್ 34 ರನ್ ಗಳಿಸಿದರೆ, ರಿಯಾನ್ ಪರಾಗ್ 14 ರನ್ ಮಾತ್ರ ಗಳಿಸಲಷ್ಟೇ ಶಕ್ತವಾದರು. ಪರಾಗ್ ವಿಕೆಟ್ ಕಳೆದುಕೊಂಡ ಬಳಿಕ ಜೊತೆಯಾದ ನಾಯಕ ಸಂಜು ಸ್ಯಾಮ್ಸನ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಧ್ರುವ್ ಜುರೆಲ್, ಅಗತ್ಯಕ್ಕೆ ತಕ್ಕಂತೆ ರನ್ ಕಸಿದರು.
RAJASTHAN ROYALS HAVE 16 POINTS FROM JUST 9 MATCHES. 🤯 pic.twitter.com/XWBtXYC5lr
— Mufaddal Vohra (@mufaddal_vohra) April 27, 2024
ಈ ಜೋಡಿಯು ಮುರಿಯದ ನಾಲ್ಕನೇ ವಿಕೆಟ್ಗೆ 121 ರನ್ಗಳ ಜೊತೆಯಾಟವಾಡಿದರು. ಇದಲ್ಲದೆ, ಇಬ್ಬರು ಸಹ ತಲಾ ಅರ್ಧಶತಕ ಬಾರಿಸಿದರು. ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಜುರೆಲ್ (52*), ಸೆಲ್ಯೂಟ್ ಸೆಲೆಬ್ರೇಷನ್ ಮಾಡಿ ಗಮನ ಸೆಳೆದರು. ಸಂಜು ಇದೇ ಟೂರ್ನಿಯಲ್ಲಿ 4ನೇ ಅರ್ಧಶತಕ (71*) ಸಿಡಿಸಿದರು.
8 out of 9, Rajasthan Royals keep roaring in #IPL2024 https://t.co/FNkwgM1SfI #LSGvRR pic.twitter.com/ghNEoX8Zpv
— ESPNcricinfo (@ESPNcricinfo) April 27, 2024
ಬೌಲಿಂಗ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಯಶ್ ಠಾಕೂರ್, ಮಾರ್ಕಸ್ ಸ್ಟೋಯಿನಿಸ್ ಮತ್ತು ಅಮಿತ್ ಮಿಶ್ರಾ ತಲಾ ಒಂದೊಂದು ವಿಕೆಟ್ ಮಾತ್ರ ಪಡೆದರು.





