ಐಪಿಎಲ್ 2024ರಲ್ಲಿ ಮೇ 24ರ ಶುಕ್ರವಾರ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯುತ್ತಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ಸನ್ರೈಸರ್ಸ್ ಹೈದರಾಬಾದ್ ಹಾಗೂ ಎಲಿಮನೇಟರ್ ಪಂದ್ಯದಲ್ಲಿ ಗೆದ್ದ ರಾಜಸ್ಥಾನ್ ರಾಯಲ್ಸ್ ಸೆಣಸಾಡುತ್ತಿದೆ.
ಟಾಸ್ ಗೆದ್ದಿದ್ದ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸಂಘಟಿತ ಬೌಲಿಂಗ್ ಮೂಲಕ 175 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ.
176 to chase in Chennai, to stay in Chennai 💪 pic.twitter.com/jF3ks9I02R
— Rajasthan Royals (@rajasthanroyals) May 24, 2024
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಎಸ್ಆರ್ಹೆಚ್ ಇನ್ನಿಂಗ್ಸ್ ಮುಕ್ತಾಯಗೊಂಡಿದ್ದು, 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಹೆನ್ರಿಚ್ ಕ್ಲಾಸೆನ್ 50 ರನ್ ಗಳಿಸಿದ್ದೇ ಹೈದರಾಬಾದ್ ಪರ ಗರಿಷ್ಠ ಸ್ಕೋರ್. ರಾಜಸ್ಥಾನ ಪರ ಆವೇಶ್ ಖಾನ್ ಮತ್ತು ಟ್ರೆಂಟ್ ಬೋಲ್ಟ್ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಸಂದೀಪ್ ಶರ್ಮಾ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
SRH need to defend 175 to meet KKR in the Final. 🏆 pic.twitter.com/gsLfYFpu8W
— Mufaddal Vohra (@mufaddal_vohra) May 24, 2024
ಸಂಜು ಪಡೆ 176 ರನ್ ಗಳಿಸಿದರೆ, ಮೂರನೇ ಬಾರಿಗೆ ಫೈನಲ್ ಟಿಕೆಟ್ ಪಡೆದುಕೊಳ್ಳಲಿದೆ. ಮೇ 26ರಂದು ನಡೆಯುವ ಫೈನಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ದ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದೆ.
No wickets for spin as Rajasthan’s pacers excel 🤌
🔗 https://t.co/Uwjmtdw4Jx | #SRHvRR pic.twitter.com/wYNnBa85vx
— ESPNcricinfo (@ESPNcricinfo) May 24, 2024





