ಇಂದಿನಿಂದ (ಜ.9) ಆರಂಭಗೊಂಡ ವಿಮೆನ್ಸ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 3 ವಿಕೆಟ್ಗಳ ರೋಚಕ ಜಯ ಗಳಿಸುವ ಮೂಲಕ ಶುಭಾರಂಭಗೈದಿದೆ.
ನವಿ ಮುಂಬೈಯ ಡಾ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಕೊನೆಯ ಬಾಲ್ ತನಕವೂ ರೋಚಕವಾಗಿತ್ತು.
ಆರ್ಸಿಬಿಗೆ ಕೊನೆಯ ಓವರ್ನಲ್ಲಿ 18 ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಕ್ರೀಸ್ನಲ್ಲಿದ್ದ ನಾಡಿನ್ ಡಿ ಕ್ಲರ್ಕ್, ಸೋಲುವ ಪಂದ್ಯವನ್ನು 2 ಸಿಕ್ಸರ್ ಹಾಗೂ ಒಂದು ಬೌಂಡರಿಯ ನೆರವಿನಿಂದ ಗೆಲುವು ತಂದುಕೊಟ್ಟರು. ಆ ಮೂಲಕ ಡಿಫೆಂಡಿಂಗ್ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಅನ್ನು ರೋಚಕವಾಗಿ ಸೋಲಿಸಿದರು.
ಆರ್ಸಿಬಿಯ ನಾಡಿನ್ ಡಿ ಕ್ಲರ್ಕ್ ಅಜೇಯ 63*(44 ಎಸೆತಗಳು) ರನ್ ಗಳಿಸುವ ಮೂಲಕ ಹಾಗೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ 26ಕ್ಕೆ 4 ವಿಕೆಟ್ ಪಡೆದಿದ್ದರಿಂದ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ನಾಡಿನ್ ಡಿ ಕ್ಲರ್ಕ್ ಅವರ ಆಲ್ ರೌಂಡರ್ ಪ್ರದರ್ಶನದ ಪರಿಣಾಮವಾಗಿ ಆರ್ಸಿಬಿ ಶುಭಾರಂಭಗೈದಿದೆ.
RCBಯ ಕ್ಯಾಪ್ಟನ್ ಸ್ಮೃತಿ ಮಂದಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತ್ತು.





