ಮಹಿಳಾ ಪ್ರೀಮಿಯರ್ ಲೀಗ್(WPL 2024) ಎರಡನೇ ಆವೃತ್ತಿಯ ಫೈನಲ್ ಪಂದ್ಯ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರ್ಸಿಬಿ ಹಾಗೂ ದೆಹಲಿ ತಂಡದ ನಡುವೆ ನಡೆಯುತ್ತಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ, ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಆರ್ಸಿಬಿ ಆರಂಭದಲ್ಲಿ ಬೌಲಿಂಗ್ನಲ್ಲಿ ವಿಫಲವಾಯಿತಾದರೂ, ಎಂಟನೇ ಓವರ್ ಎಸೆದ ಆರ್ಸಿಬಿ ಬೌಲರ್ ಸೋಫಿ ಮೋಲಿನೆಕ್ಸ್, 4 ಎಸೆತಗಳಲ್ಲಿ ಮೂರು ವಿಕೆಟ್ ಕಿತ್ತು ಮಿಂಚಿದ್ದಾರೆ.
Wickets of Shafali, Jemimah and Capsey! A game-changing over from Sophie Molineux 🔥 https://t.co/8hcR0QoQBj | #DCvRCB | #WPLFinal pic.twitter.com/GHpiu0xOkb
— ESPNcricinfo (@ESPNcricinfo) March 17, 2024
ಮೋಲಿನೆಕ್ಸ್ ಎಸೆದ ಎಂಟನೇ ಓವರ್ನ ಮೊದಲ ಎಸೆತದ ಎದುರಿಸಿದ ದೆಹಲಿ ತಂಡದ ಶಫಾಲಿ ವರ್ಮಾ ಅವರು ದೊಡ್ಡ ಹೊಡೆತಕ್ಕೆ ಯತ್ನಿಸಿ, ಕ್ಯಾಚಿತ್ತು ನಿರ್ಗಮಿಸಿದರು. ಆ ಬಳಿಕ ಕ್ರೀಸ್ಗೆ ಬಂದ ಜೆಮೀಮಾ ರೋಡ್ರಿಗಸ್ ತಾನೆದುರಿಸಿದ ಎರಡನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಕ್ರೀಸ್ಗೆ ಬಂದ ಕ್ಯಾಪ್ಸೆ ಕೂಡ ಕ್ಲೀನ್ ಬೌಲ್ಡ್ ಆದರು. ಆ ಮೂಲಕ ಆರ್ಸಿಬಿ ಬೌಲರ್ ಮೋಲಿನೆಕ್ಸ್, 4 ಎಸೆತಗಳಲ್ಲಿ ಮೂರು ವಿಕೆಟ್ ಕಿತ್ತು ದೆಹಲಿ ತಂಡಕ್ಕೆ ಆಘಾತ ನೀಡಿದರು.
Changing the course of the match and how 🔥
A dream over by Sophie Molineux 👏#DCvRCB #TATAWPL #TATAWPLonSports18 #TATAWPLonJioCinema #JioCinemaSports #CheerTheW pic.twitter.com/69Lc78iOHX
— JioCinema (@JioCinema) March 17, 2024
64 ರನ್ ವೇಳೆ ಶೂನ್ಯ ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ ತಂಡ, ಸದ್ಯ 15 ಓವರ್ಗಳು ಮುಕ್ತಾಯ ಕಂಡಿದ್ದು, 90 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
Bengaluru to Delhi. The two host cities in the Final.
Here we go, for one last time this #WPL 👊#PlayBold #ನಮ್ಮRCB #SheIsBold #WPL2024 #WPLFinal #DCvRCB pic.twitter.com/rnnkcxHE18
— Royal Challengers Bangalore (@RCBTweets) March 17, 2024
ದೆಹಲಿ- ಆರ್ಸಿಬಿ ಮುಖಾಮುಖಿ
ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಇತ್ತ ಎಲಿಮಿನೇಟರ್ ಪಂಡ್ಯ ಆಡಿದ್ದ ಬೆಂಗಳೂರು ತಂಡ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಈ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಂಪೂರ್ಣ ಮೇಲುಗೈ ಸಾಧಿಸಿದೆ. ಅಂದರೆ ಆರ್ಸಿಬಿ ತಂಡ ಡೆಲ್ಲಿ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆರ್ಸಿಬಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.
2023ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು, ಡೆಲ್ಲಿ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿ ಚಾಂಪಿಯನ್ ಆಗಿತ್ತು. ಫೈನಲ್ ಪಂದ್ಯದ ನೇರಪ್ರಸಾರವು ಜಿಯೋ ಸಿನಿಮಾ ಆ್ಯಪ್ನಲ್ಲಿ ಪ್ರಸಾರವಾಗುತ್ತಿದೆ.





