ರಾಜಸ್ಥಾನದಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಬೆಂಕಿ ಹಚ್ಚಿ ಕೊಂದಿದ್ದ ಆರೋಪದಲ್ಲಿ ಪ್ರಮುಖ ಆರೋಪಿಯಾಗಿರುವ ಸ್ವಘೋಷಿತ ಗೋರಕ್ಷಕ, ಭಜರಂಗದಳದ ಮೋನು ಮಾನೇಸರ್ನನ್ನು ಪೊಲೀಸರು ಮಂಗಳವಾರ ಬಂಧಿಸಿರುವುದಾಗಿ ವರದಿಯಾಗಿದೆ.
ಮೋನು ಮಾನೇಸರ್, ರಾಜಸ್ಥಾನದ ಇಬ್ಬರು ವ್ಯಕ್ತಿಗಳ ಹತ್ಯೆಗೆ ಸಂಬಂಧಿಸಿದಂತೆ ಮತ್ತು ಕಳೆದ ಜುಲೈನಲ್ಲಿ ಹರ್ಯಾಣದ ನುಹ್ನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಮೋಸ್ಟ್ ವಾಂಟೆಡ್’ ಆರೋಪಿಯಾಗಿದ್ದ ಈತನನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿಯಲ್ಲಿ ಹರಿಯಾಣದಲ್ಲಿ ಕಾರಿನಲ್ಲಿ ಶವ ಪತ್ತೆಯಾದ ರಾಜಸ್ಥಾನದ ಇಬ್ಬರು ಮುಸ್ಲಿಂ ಯುವಕರ ಹತ್ಯೆಯಲ್ಲಿ ಮಾನೇಸರ್ ಪ್ರಮುಖ ಆರೋಪಿ.
CCTV footage of Monu Manesar being detained by the Haryana police. pic.twitter.com/i9JV6ZH7JD
— Waquar Hasan (@WaqarHasan1231) September 12, 2023
ರಾಜಸ್ಥಾನದ ಭರತ್ಪುರ ಜಿಲ್ಲೆಯ ಹಳ್ಳಿಯೊಂದರ ನಿವಾಸಿಗಳಾದ ನಾಸಿರ್ (25) ಹಾಗೂ ಜುನೈದ್(35) ಎಂಬ ಇಬ್ಬರು ಯುವಕರನ್ನು ಕಳೆದ ಫೆ.15 ರಂದು ಅಪಹರಿಸಿದ್ದರು. ಮರುದಿನ, ಹರಿಯಾಣದ ಭೀವಾನಿ ಜಿಲ್ಲೆ ಲೊಹರು ಎಂಬಲ್ಲಿ ಸುಟ್ಟು ಹಾಕಲಾಗಿದ್ದ ಕಾರಿನೊಳಗೆ ಅವರ ಶವಗಳು ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ಮೋನು ಮಾನೇಸರ್ ಪ್ರಮುಖ ಆರೋಪಿಯಾಗಿದ್ದನು.
ಮೋನು ಮೋನು ಮಾನೇಸರ್ನನ್ನು ಹರ್ಯಾಣ ಪೊಲೀಸರು ಬಂಧಿಸಿರುವ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ರಾಜಸ್ಥಾನದ ಘಟನೆಯ ಬಳಿಕ, ಇತ್ತೀಚಿನ ನುಹ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದ ಹಿನ್ನೆಲೆಯಲ್ಲಿ ಈತನ ಹೆಸರು ಮತ್ತೆ ಚರ್ಚೆಯಲ್ಲಿತ್ತು. ಸದ್ಯ ಈತನನ್ನು ಯಾವ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.





