ವಿಚಿತ್ರ ಘಟನೆ | ಪತಿ ಹೆಚ್ಚು ಟೊಮ್ಯಾಟೋ ಬಳಸಿದ್ದಕ್ಕೆ ಮನೆ ಬಿಟ್ಟು ತೆರಳಿದ ಪತ್ನಿ!

Date:

  • ಮಧ್ಯಪ್ರದೇಶದ ಶಹದೋಲ್‌ನಲ್ಲಿ ನಡೆದ ಘಟನೆ
  • ಪತ್ನಿಯ ಹುಡುಕುವಂತೆ ಪೊಲೀಸರ ಮೊರೆ ಹೋದ ಪತಿ

ಟೊಮ್ಯಾಟೋ ಬೆಲೆ ಏರಿಕೆಯಿಂದ ಜನರ ಜೇಬಿಗೆ ಪೆಟ್ಟು ಬಿದ್ದಿರುವುದೇನೋ ನಿಜ. ಬೆಲೆ ಏರಿಕೆಯ ಪರಿಣಾಮದಿಂದ ಹಲವಾರು ರೆಸ್ಟೋರೆಂಟ್‌ಗಳು ಟೊಮ್ಯಾಟೋ ಆಧಾರಿತ ತಿಂಡಿಗಳನ್ನು ಮಾಡುವುದನ್ನೇ ಕೈಬಿಟ್ಟಿವೆ. ಆದರೆ ಇದಕ್ಕೆಲ್ಲ ವ್ಯತಿರಿಕ್ತ ಎನ್ನುವಂತಹ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

ವಿಚಿತ್ರ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಶಹದೋಲ್‌ನಲ್ಲಿ ಅಡುಗೆಗೆ ಪತಿ ತನ್ನನ್ನು ಕೇಳದೆಯೇ ಟೊಮ್ಯಾಟೋ ಬಳಸಿದ್ದಕ್ಕೆ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿರುವ ಬಗ್ಗೆ ಪೊಲೀಸರಿಗೆ ಪತಿರಾಯ ದೂರು ನೀಡಿದ್ದಾನೆ.

ಸಣ್ಣ ಡಾಬಾ ನಡೆಸುತ್ತಿರುವ ಸಂದೀಪ್ ಬರ್ಮನ್ ಎಂಬಾತ ತನ್ನ ಪತ್ನಿ ಆರತಿ ಬರ್ಮನ್ ಅಡುಗೆಗೆ ಟೊಮ್ಯಾಟೋ ಬಳಸಿದ್ದಕ್ಕೆ ಕೋಪಗೊಂಡು ತನ್ನನ್ನು ಬಿಟ್ಟು ತೆರಳಿರುವುದಾಗಿ ತಿಳಿಸಿದ್ದಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ನಾನು ಬಸ್‌ ನಿಲ್ದಾಣದ ಬಳಿ ಸಣ್ಣ ಡಾಬಾ ನಡೆಸುತ್ತಿದ್ದೇನೆ. ಅಡುಗೆ ಮಾಡುವಾಗ ಪತ್ನಿಯನ್ನು ಕೇಳದೆಯೇ ಹೆಚ್ಚುವರಿ ಎರಡು ಟೊಮ್ಯಾಟೋ ಬಳಸಿದ್ದೆ. ದರ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿ, ನನ್ನೊಂದಿಗೆ ಜಗಳ ಪ್ರಾರಂಭಿಸಿದಳು. ಆ ಬಳಿಕ ಬೆಳಗ್ಗೆ 10.30ರ ಬಸ್ಸಿನಲ್ಲಿ ನನ್ನ ಮಗಳನ್ನೂ ಕರೆದುಕೊಂಡು ಹೊರಟುಬಿಟ್ಟಳು. ಮೂರು ದಿನಗಳಿಂದ ಹುಡುಕುತ್ತಿದ್ದೇನೆ. ಸಿಗದಿದ್ದಕ್ಕೆ ಇಬ್ಬರ ಫೋಟೋವನ್ನು ಪೊಲೀಸರಿಗೆ ನೀಡಿದ್ದೇನೆ. ಟೊಮ್ಯಾಟೋದಿಂದಾಗಿ ನನ್ನ ಕುಟುಂಬಕ್ಕೆ ಈ ಪರಿಸ್ಥಿತಿ ಬಂದಿದೆ” ಎಂದು ಸಂದೀಪ್ ಬರ್ಮನ್ ಹೇಳಿಕೆ ನೀಡಿದ್ದಾನೆ.

ಸಂದೀಪ್ ದೂರು ನೀಡಿರುವುದನ್ನು ಖಚಿತಪಡಿಸಿರುವ ಶಹದೋಲ್‌ನ ಧನಪುರಿ ಸ್ಟೇಷನ್ ಹೌಸ್ ಆಫೀಸರ್ ಸಂಜಯ್ ಜೈಸ್ವಾಲ್, ‘ಟೊಮ್ಯಾಟೋ ಬಳಸಿದ ವಿಚಾರವಾಗಿ ಜಗಳವಾಗಿರುವುದಾಗಿ ತಿಳಿಸಿದ್ದಾನೆ. ಆ ಬಳಿಕ ಆತನ ಪತ್ನಿ ಮನನೊಂದು ಮನೆ ಬಿಟ್ಟು ಹೋಗಿದ್ದಾಳೆ. ಪತಿ-ಪತ್ನಿ ಪರಸ್ಪರ ಮಾತನಾಡುವಂತೆ ತಿಳಿಸಿದ್ದೇವೆ. ಅವರು ಶೀಘ್ರದಲ್ಲೇ ಹಿಂದಿರುವುದಾಗಿ ತಿಳಿಸಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಟೊಮ್ಯಾಟೋಗಳ ಉತ್ಪಾದನೆ ಕಡಿಮೆಯಾಗಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಗಗನಕ್ಕೇರಿದೆ. ಹಲವು ಕಡೆಗಳಲ್ಲಿ ಕೆ ಜಿ ಗೆ ₹200ರ ಗಡಿ ಸಮೀಪಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಆತ್ಮಹತ್ಯೆ ಯತ್ನಿಸಿದ ಬ್ರಿಮ್ಸ್‌ ಲ್ಯಾಬ್‌ ಟೆಕ್ನಿಷಿಯನ್‌ ಆರೋಗ್ಯ ವಿಚಾರಿಸಿದ ಸಚಿವ ಖಂಡ್ರೆ

ಬ್ರಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ನಿಲೋಫರ್ ಅವರು,...

ಕಲಬುರಗಿ | ‘ಆರ್‌ಕೆ ಕೆಫೆ’ ಶಾರ್ಟ್ ಸರ್ಕ್ಯೂಟ್‌ಗೆ ಆಹುತಿ : ಯುವ ಉದ್ಯಮಿ ಕನಸಿಗೆ ಹೊಡೆತ

ಅಫಜಲಪುರ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಹೊಸದಾಗಿ ಆರಂಭಿಸಲಾಗಿದ್ದ ‘ಆರ್‌ಕೆ ಕೆಫೆ’ಯಲ್ಲಿ ವಿದ್ಯುತ್...