ಪಶ್ಚಿಮ ಬಂಗಾಳ | ರೈಲು ದುರಂತ ತಪ್ಪಿಸಿದ 12ರ ಹರೆಯದ ಮುರ್ಸಲೀನ್ ಶೇಖ್; ರೈಲ್ವೆ ಇಲಾಖೆಯಿಂದ ಸನ್ಮಾನ

Date:

12 ವರ್ಷದ ಬಾಲಕನೊಬ್ಬ ರೈಲು ದುರಂತವನ್ನು ತಪ್ಪಿಸಿರುವ ಘಟನೆ ಇತ್ತೀಚೆಗೆ ಪಶ್ಚಿಮ ಬಂಗಾಳದ ಮಾಲ್ದಾದ ರೈಲ್ವೆ ಯಾರ್ಡ್ ಬಳಿ ನಡೆದಿರುವುದು ವರದಿಯಾಗಿದೆ.

12ರ ಹರೆಯದ ಮುರ್ಸಲೀನ್ ಶೇಖ್ ರೈಲ್ವೆ ಯಾರ್ಡಿನಲ್ಲಿ ಕೆಲಸ ಮಾಡುವ ಕಾರ್ಮಿಕರೊಬ್ಬರ ಮಗನಾಗಿದ್ದು, ಘಟನೆಯ ವೇಳೆ ಮುರ್ಸಲೀನ್ ಕೆಲ ಕಾರ್ಮಿಕರೊಂದಿಗೆ ಯಾರ್ಡಿನಲ್ಲಿದ್ದನು.

ಕಾರ್ಮಿಕರೊಂದಿಗೆ ರೈಲ್ವೆ ಹಳಿಯ ಯಾರ್ಡ್ ನಲ್ಲಿದ್ದ ಮುರ್ಸಲೀನ್ ಶೇಖ್ ರೈಲಿನ ಕೆಲ ಹಳಿಗಳಿಗೆ ಹಾನಿ ಆಗಿರುವುದನ್ನು ನೋಡಿದ್ದಾರೆ. ಈ ವೇಳೆ ದೂರದಿಂದ ಪ್ಯಾಸೆಂಜರ್ ರೈಲೊಂದು ಬರುವುದನ್ನು ಅವನು ಗಮನಿಸಿದ್ದಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇನ್ನೇನು ಹಾನಿಗೊಳಗಾದ ಹಳಿಗಳ ಮೇಲೆ ರೈಲು ಸಂಚರಿಸಿದರೆ ಅಪಘಾತವಾಗುವುದು ಖಚಿತವೆಂದುಕೊಂಡ ಬಾಲಕ ತಾನು ಹಾಕಿದ್ದ ಕೆಂಪು ಬಣ್ಣದ ಟೀ ಶರ್ಟ್ ಅನ್ನೇ ಧ್ವಜದ ರೀತಿ ಉಪಯೋಗಿಸಿಕೊಂಡು ವೇಗದಿಂದ ಬರುತ್ತಿದ್ದ ರೈಲನ್ನು ನಿಲ್ಲಿಸಿದ್ದಾನೆ.

ರೈಲಿನ ಚಾಲಕನಿಗೆ ಎಚ್ಚರಿಕೆ ನೀಡುವ ಸಲುವಾಗಿ ಬಾಲಕ ತನ್ನ ಟೀ ಶರ್ಟ್ ನ್ನು ಧ್ವಜದ ರೀತಿ ಬಳಸಿದ್ದನ್ನು ನೋಡಿ ಲೋಕೋಮೋಟಿವ್ ಪೈಲಟ್ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ. ಇದರಿಂದ ಸಂಭವಿಸಲಿದ್ದ ದೊಡ್ಡ ಅಪಘಾತ ತಪ್ಪಿದಂತೆ ಆಗಿದೆ.

ಈ ಬಗ್ಗೆ ಮಾತನಾಡಿರುವ ಈಶಾನ್ಯ ಗಡಿ ರೈಲ್ವೆಯ ವಕ್ತಾರ ಸಬ್ಯಸಾಚಿ ಡಿ, “ಮಾಲ್ದಾದಲ್ಲಿ 12 ವರ್ಷದ ಬಾಲಕ ತನ್ನ ಕೆಂಪು ಶರ್ಟ್ ಅನ್ನು ರೈಲಿನ ಮುಂಭಾಗ ಬೀಸಿದ್ದಾನೆ. ಇದರಿಂದಾಗಿ ಲೋಕೋ-ಪೈಲಟ್ ತುರ್ತು ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಕಳೆದ ಒಂದು ವಾರದಿಂದ ಆ ಭಾಗದಲ್ಲಿ ಭಾರಿ ಮಳೆಯಾಗಿತ್ತು, ಇದರಿಂದಾಗಿ ರೈಲು ಹಳಿ ಹಾಳಾಗಿತ್ತು, ಬಾಲಕನ ಸಮಯಪ್ರಜ್ಞೆಯಿಂದ ಅಪಘಾತ ತಪ್ಪಿದೆ, ಜತೆಗೆ ಜನರ ಜೀವವೂ ಉಳಿದಿದೆ” ಎಂದು ಅವರು ಹೇಳಿದ್ದಾರೆ.

ರೈಲ್ವೆ ಅಧಿಕಾರಿಗಳು ಬಾಲಕನ ಧೈರ್ಯವನ್ನು ಮೆಚ್ಚಿ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದ್ದಾರೆ. ನಗದು ಬಹುಮಾನವನ್ನು ಸಹ ನೀಡಿದ್ದಾರೆ. ಸ್ಥಳೀಯ ಸಂಸದರು ಮತ್ತು ವಿಭಾಗೀಯ ರೈಲು ವ್ಯವಸ್ಥಾಪಕರು ಬಾಲಕನ ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ.

ಸದ್ಯ ಹಾನಿಗೊಳಗಾದ ಹಳಿಗಳ ಭಾಗವನ್ನು ಸರಿಪಡಿಸಿ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1500 ರೂ ನಗದು: ನೆಟ್ಟಿಗರಿಂದ ಟೀಕೆ

ತನ್ನ ಟೀ ಶರ್ಟ್ ಅನ್ನು ಧ್ವಜದ ರೀತಿ ಬಳಸಿ, ಅವಘಡ ತಪ್ಪಿಸಿ ನೂರಾರು ಜನರ ಪ್ರಾಣ ಉಳಿಸಿದ ಬಾಲಕ ಮುರ್ಸಲೀನ್ ಶೇಕ್‌ಗೆ ಕೇವಲ 1500₹ ನೀಡಲಾಗಿದೆ ಎಂದು ವರದಿಯಾಗಿದೆ. ಇದನ್ನು ಖಂಡಿಸಿರುವ ಹಲವು ಮಂದಿ ನೆಟ್ಟಿಗರು, ಇಷ್ಟೊಂದು ಸಣ್ಣ ಮೊತ್ತವನ್ನು ನೀಡಿ ಈ ರೀತಿ ಅಗೌರವ ತೋರಬಾರದಿತ್ತು. ಇಷ್ಟು ಸಣ್ಣ ಮೊತ್ತವನ್ನು ನೀಡುವ ಬದಲು ಆತನ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದಿದ್ದರೆ ಇನ್ನಷ್ಟು ಬೆಲೆ ಬರುತ್ತಿತ್ತು” ಎಂದು ಪೋಸ್ಟ್ ಹಾಕುತ್ತಿದ್ದಾರೆ.

ಮುರ್ಸಲೀನ್, 6ನೇ ತರಗತಿ ವಿದ್ಯಾರ್ಥಿಯಾಗಿದ್ದು, ವಲಸೆ ಕಾರ್ಮಿಕ ಮೊಹಮ್ಮದ್ ಇಸ್ಮಾಯಿಲ್ ಮತ್ತು ಬೀಡಿ ಕಟ್ಟುವ ಮಾರ್ಜಿನಾ ಬೀಬಿ ಎಂಬುವವರ ಮಗ. ಮುರ್ಸಲೀನ್‌ಗೆ ಒಬ್ಬ ಸಹೋದರ ಮತ್ತು ಸಹೋದರಿ ಇದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಆತ್ಮಹತ್ಯೆ ಯತ್ನಿಸಿದ ಬ್ರಿಮ್ಸ್‌ ಲ್ಯಾಬ್‌ ಟೆಕ್ನಿಷಿಯನ್‌ ಆರೋಗ್ಯ ವಿಚಾರಿಸಿದ ಸಚಿವ ಖಂಡ್ರೆ

ಬ್ರಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ನಿಲೋಫರ್ ಅವರು,...

ಕಲಬುರಗಿ | ‘ಆರ್‌ಕೆ ಕೆಫೆ’ ಶಾರ್ಟ್ ಸರ್ಕ್ಯೂಟ್‌ಗೆ ಆಹುತಿ : ಯುವ ಉದ್ಯಮಿ ಕನಸಿಗೆ ಹೊಡೆತ

ಅಫಜಲಪುರ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಹೊಸದಾಗಿ ಆರಂಭಿಸಲಾಗಿದ್ದ ‘ಆರ್‌ಕೆ ಕೆಫೆ’ಯಲ್ಲಿ ವಿದ್ಯುತ್...