ಸೌದಿ ರಿಯಲ್ ಎಸ್ಟೇಟ್ ಜನರಲ್ ಪ್ರಾಧಿಕಾರವು ಎಲ್ಲಾ ಪ್ರದೇಶಗಳಲ್ಲಿ ಬಾಡಿಗೆ ಹೆಚ್ಚಳವನ್ನು ಸ್ಥಗಿತಗೊಳಿಸುವುದಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ಅನುಷ್ಠಾನಗೊಳಿಸುವ ಕುರಿತು ಅಧ್ಯಯನಗಳನ್ನು ನಡೆಸುವ ಯೋಜನೆಗಳನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.
ರಿಯಾದ್ನಂತೆಯೇ ದೇಶಾದ್ಯಂತ ಎಲ್ಲ ನಗರಗಳಲ್ಲಿ ಐದು ವರ್ಷಗಳ ಕಾಲ ಬಾಡಿಗೆ ಹೆಚ್ಚಳವನ್ನು ಸ್ಥಗಿತಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.
ಸೌದಿ ರಾಜಧಾನಿ ರಿಯಾದ್ನಲ್ಲಿ ಇತ್ತೀಚೆಗೆ ಕ್ರೌನ್ ಪ್ರಿನ್ಸ್ ಸೂಚನೆಯ ಮೇರೆಗೆ ಐದು ವರ್ಷಗಳ ಕಾಲ ಬಾಡಿಗೆ ಹೆಚ್ಚಳವನ್ನು ಸ್ಥಗಿತಗೊಳಿಸುವ ಕಾನೂನನ್ನು ಜಾರಿಗೆ ತರಲಾಗಿತ್ತು. ಸೌದಿ ನಗರಗಳಲ್ಲಿ ರಿಯಲ್ ಎಸ್ಟೇಟ್ ಸೂಚಕಗಳನ್ನು ಪ್ರಾಧಿಕಾರವು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ ಮತ್ತು ಮಾರುಕಟ್ಟೆ ಮಾನದಂಡಗಳು ಮತ್ತು ಪ್ರತಿ ನಗರದ ಮೇಲ್ವಿಚಾರಣೆಯ ಫಲಿತಾಂಶಗಳಿಗೆ ಅನುಗುಣವಾಗಿ ನಿರ್ಬಂಧಗಳನ್ನು ಜಾರಿಗೊಳಿಸುತ್ತದೆ ಎಂದು ಪ್ರಾಧಿಕಾರದ ವಕ್ತಾರ ತೈಸೀರ್ ಅಲ್-ಮುಫರಾಜ್ ಹೇಳಿದ್ದಾರೆ.
ವರದಿ: ಎಸ್ ಎ ರಹಿಮಾನ್ ಮಿತ್ತೂರು





