ಅ.10ರಂದು ಮಸ್ಕತ್‌‌ಗೆ ಕಾಲಿಡಲಿರುವ ʻಪೆಪೆರೆ ಪೆಪೆ ಢುಂʼ ಬ್ರಾಸ್ ಬ್ಯಾಂಡ್ ಸ್ಪರ್ಧೆ

Date:

ಕರಾವಳಿಯ ಕೊಂಕಣಿ ಸಂಗೀತ ಲೋಕದಲ್ಲಿ ಬ್ರಾಸ್ ಬ್ಯಾಂಡ್‌ನ ಪ್ರಚಾರ ಹಾಗೂ ಉತ್ತೇಜನಕ್ಕಾಗಿ ‘ಆಮಿ ಆನಿ ಆಮ್ಚಿಂ’ ಸಂಘಟನೆಯ ಮೂಲಕ ಹುಟ್ಟಿಕೊಂಡ ʻಪೆಪೆರೆ ಪೆಪೆ ಢುಂʼ ಕಾರ್ಯಕ್ರಮವು ಇದೇ ಮೊದಲ ಬಾರಿಗೆ ಗಲ್ಫ್‌ ರಾಷ್ಟ್ರಕ್ಕೆ ಕಾಲಿಡುತ್ತಿದೆ.

ಅಕ್ಟೋಬರ್‌ 10 ರಂದು ಒಮನ್‌ ದೇಶದ ರಾಜಧಾನಿ ಮಸ್ಕತ್‌ನಲ್ಲಿ ಈ ಕಾರ್ಯಕ್ರಮದ ಎರಡನೇ ಆವೃತ್ತಿಯು ನಡೆಯಲಿದೆ.

ಮಸ್ಕತ್‌ನ ಎಂಸಿಸಿಪಿ ಸಂಘಟನೆಯ ಅಧ್ಯಕ್ಷ ಲ್ಯಾನ್ಸಿ ಲೋಬೊ, ʻಆಮಿ ಆನಿ ಆಮ್ಚಿಂʼ ಅಧ್ಯಕ್ಷ ಡೆನಿಸ್‌ ಡಿಸಿಲ್ವ ಮತ್ತು ವೆಂಚರ್‌ ಎಂಟರ್‌ ಟೇನ್ಮೆಂಟ್ ನೇತೃತ್ವದಲ್ಲಿ‌ ಮಸ್ಕತ್‌ನ ರುವಿಯ ಅಲ್‌ ಫಲಾಜ್‌ ಹೋಟೆಲ್‌ನಲ್ಲಿ ನಡೆಯಲಿರುವ ಈ ಸಂಗೀತ ಸ್ಪರ್ಧೆಯಲ್ಲಿ ‘ಮಸ್ಕತ್‌ ಚಿಂ ನಕ್ತಿರಾಂ’, ‘ದಬಕ್‌ ದಬಾ ಕಲಾಕಾರ್‌’, ‘ಗಾಂವ್ಚಿಂ ಮೊತಿಯಾಂ’ ಮತ್ತು ‘ತೆನ್ಕಾಂತ್ಲಿಂ ತಾಲೆಂತಾಂ’ ಎಂಬ ನಾಲ್ಕು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೊಂಕಣಿ ಹಾಡುಗಳು, ಬಾಯ್ಲಾ ನೃತ್ಯ, ವಾಲ್ಟ್ಜ್‌ ನೃತ್ಯ, ಜೈವ್‌ ನೃತ್ಯ, ಹುಲಿ ನೃತ್ಯ ಇತ್ಯಾದಿ ವಿಭಾಗಗಳಲ್ಲಿ ಈ ನಾಲ್ಕು ತಂಡಗಳು ಸ್ಪರ್ಧಿಸಲಿದ್ದು, ವಿಜೇತ ತಂಡಕ್ಕೆ 1,000 ಒಮಾನಿ ರಿಯಲ್‌ (ಸುಮಾರು ರೂ. 2,30,000) ಮೊತ್ತದ ಪ್ರಶಸ್ತಿ ದೊರೆಯಲಿದ್ದು, ಉಳಿದ ಮೂರು ತಂಡಗಳಿಗೆ ತಲಾ 500 ಒಮಾನಿ ರಿಯಲ್‌ ಮೊತ್ತದ ಪ್ರಶಸ್ತಿಯನ್ನು ನೀಡಲಾಗುವುದು.

IMG 20251009 WA0641

ಸ್ಪರ್ಧೆಗೆ ಸಂಗೀತ ಒದಗಿಸುವುದಕ್ಕಾಗಿ ಬೆಳ್ತಂಗಡಿ ತಾಲ್ಲೂಕಿನ ಬದ್ಯಾರ್‌ ನ ಅರುಣ್‌ ಸೆರಾವೊ ನೇತೃತ್ವದ 10 ಜನರ ಬ್ರಾಸ್ ಬ್ಯಾಂಡ್‌ ವಾದಕರ ತಂಡವು ಮಸ್ಕತ್‌ ಗೆ ಪ್ರಯಾಣಿಸಲಿದ್ದಾರೆ. ಸಂತೋಷ್‌ ಡಿಕೋಸ್ತಾ, ರೀನ ಕ್ಯಾಸ್ಟಲಿನೊ ಮತ್ತು ಅರುಣ್‌ ಡಿಸೋಜಾ ಈ ಕಾರ್ಯಕ್ರಮದ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.

IMG 20251009 WA0626

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ ಭಾಗವಹಿಸಲಿದ್ದು, ಸ್ಥಳೀಯ ಧರ್ಮಗುರು ವಂ. ಸ್ಟೀಫನ್ ಲುವಿಸ್, ಕೆಲರಾಯ್ ಚರ್ಚ್ ಧರ್ಮಗುರು ವಂ. ಸಿಲ್ವೆಸ್ಟರ್ ಡಿಕೊಸ್ಟಾ, ಯುಟಿ ಇಫ್ತಿಕಾರ್ ಫರೀದ್, ವಾಲ್ಟರ್ ನಂದಳಿಕೆ, ಅಲೆಕ್ಸಿಸ್ ಕ್ಯಾಸ್ಟಲಿನೊ ಮುಂತಾದವರು ಭಾಗವಹಿಸಲಿದ್ದಾರೆ.

ಬ್ರಾಸ್ ಬ್ಯಾಂಡ್‌ ಅನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ‘ಆಮಿ ಆನಿ ಆಮ್ಚಿಂ’ ತಂಡ 2024ರ ಫೆಬ್ರುವರಿ ತಿಂಗಳಿನಲ್ಲಿ ಮೊದಲ ಬಾರಿಗೆ ʻಪೆಪೆರೆ ಪೆಪೆ ಢುಂʼ ಅದ್ದೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು. ಇದರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 20 ತಂಡಗಳು ಪಾಲ್ಗೊಂಡಿದ್ದವು. ಇದರ ಸಮಾರೋಪ ಕಾರ್ಯಕ್ರಮವು ಅದೇ ವರ್ಷದ ನವೆಂಬರ್‌ ತಿಂಗಳಿನಲ್ಲಿ ಮಂಗಳೂರಿನಲ್ಲಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ದೊರೆತ ಯಶಸ್ಸಿನಿಂದ ಪ್ರೇರಣೆ ಪಡೆದು ‘ಪೆಪೆರೆ ಪೆಪೆ ಢುಂ’ ಕಾರ್ಯಕ್ರಮದ ಎರಡನೇ ಆವೃತ್ತಿಯನ್ನು ಇದೀಗ ಒಮನ್‌ ನಲ್ಲಿ ನಡೆಸಲಾಗುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಡೆನಿಸ್ ಡಿಸಿಲ್ವ, ಸಂತೋಷ್ ಡಿಕೊಸ್ತಾ, ಕಾರ್ಯದರ್ಶಿ ಲೊಯ್ಡ್ ರೇಗೊ, ಸದಸ್ಯರಾದ ಮೆಲ್ವಿನ್ ಡೆಸಾ ಹಾಗೂ ‘ಆಮಿ ಆನಿ ಆಮ್ಚಿಂ’ ಮಂಗಳೂರು ಸದಸ್ಯರು ಉಪಸ್ಥಿತರಿದ್ದರು.

eedina 6
ಈದಿನ NRI ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ದುಬೈ ರನ್’ನಲ್ಲಿ ಮಿಂಚಿದ ಬ್ಯಾರಿಗಳು: ಅತಿ ಉದ್ದನೆಯ ಯುಎಇ ಧ್ವಜದ ದೃಶ್ಯ ಹಂಚಿಕೊಂಡ ರಾಜಕುಮಾರ ಶೇಖ್ ಹಮ್ದಾನ್

ಆರೋಗ್ಯ, ಫಿಟ್‌ನೆಸ್ ಮತ್ತು ಮನರಂಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾನುವಾರ ದುಬೈನ...

ಸೌದಿ ಅರೇಬಿಯಾ | ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ಪೂರ್ಣಗೊಳಿಸಲು ಆರೋಗ್ಯ ಸಚಿವಾಲಯ ಸೂಚನೆ

ಕೋವಿಡ್-19 ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಎಲ್ಲ ವಯಸ್ಸಿನ ನಿವಾಸಿಗಳು ಮತ್ತು ವಲಸಿಗರು...